More

    ಇಷ್ಟರ ಮಟ್ಟಿಗೆ ಪೂರ್ಣಗೊಂಡಿತಾ ಅಯೋಧ್ಯೆ ರಾಮಮಂದಿರ ನಿರ್ಮಾಣ? ಯಾವುದು ಈ ದೇವಾಲಯ?

    ಹಲವು ಫೇಸ್​ಬುಕ್ ಪೇಜ್​ಗಳಲ್ಲಿ ಎರಡು ಫೋಟೋಗಳು ವೈರಲ್​ ಆಗಿವೆ. ಅವು ನಿರ್ಮಾಣ ಹಂತದಲ್ಲಿರುವ ಭವ್ಯ ದೇವಾಲಯವೊಂದರ ಫೋಟೋ. ಕೆಲವು ಕಾರ್ಮಿಕರು ಇನ್ನೂ ಅದನ್ನು ಕಟ್ಟಿತ್ತಿರುವುದು ಫೋಟೋದಲ್ಲಿ ಕಾಣಿಸುತ್ತದೆ.

    ಇದೆರಡು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಫೇಸ್​ಬುಕ್​ ಬಳಕೆದಾರರು, ಈ ಚಿತ್ರಗಳು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ್ದು ಎಂದು ಬಿಂಬಿಸಿದ್ದರು. ಸಹೋದರರೇ, ಇದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೊದಲ ಲುಕ್​. ಇದನ್ನು ನೋಡಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಎಲ್ಲರೂ ಜೈ ಶ್ರೀರಾಮ್​ ಹೇಳಿ ಎಂದು ಕ್ಯಾಪ್ಷನ್​ ಬರೆದಿದ್ದವು. ಇವು ರಾಮಮಂದಿರದ್ದೇ ಫೋಟೋ ಎಂದುಕೊಂಡ ಹಲವರು ತಮ್ಮ ಫೇಸ್​ಬುಕ್​​ನಲ್ಲೂ ಶೇರ್ ಮಾಡಿಕೊಂಡಿದ್ದರು.

    ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ(ಎಎಫ್​ಡಬ್ಲ್ಯೂಎ)ನ ಫ್ಯಾಕ್ಟ್​​ಚೆಕ್​​ನಲ್ಲೇ ಬೇರೆಯದ್ದೇ ಸತ್ಯ ಹೊರಬಿದ್ದಿದೆ. ಇದು ನಿರ್ಮಾಣಹಂತದಲ್ಲಿರುವ ರಾಮಮಂದಿರ ಫೋಟೋ ಅಲ್ಲ ಎಂಬುದು ಸಾಬೀತಾಗಿದೆ.
    ಈ ಫೋಟೋಗಳು ಕಾಶಿ ವಿಶ್ವನಾಥ್​ ಕಾರಿಡಾರ್​ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕಾಶಿ ವಿಶ್ವನಾಥ ದೇವಾಲಯದ ಮುಖ್ಯ ಸಂಕೀರ್ಣದ್ದು ಎಂದು ಗೊತ್ತಾಗಿದೆ.

    ವೈರಲ್​ ಫೋಟೋಗಳನ್ನು ರಿವರ್ಸ್ ಇಮೇಜ್​ ಸರ್ಚ್​​ಗೆ ಕೊಟ್ಟು ಪರಿಶೀಲಿಸಿದಾಗ ಹಿಂದುಸ್ತಾನ್ ಟೈಮ್ಸ್​​ ತನ್ನ ಅಕ್ಟೋಬರ್​ 30 ರ ಲೇಖನಕ್ಕೆ ಈ ಫೋಟೋಗಳನ್ನು ಬಳಸಿಕೊಂಡಿದ್ದು ಗೊತ್ತಾಗಿದೆ. ಕಾಶಿ ವಿಶ್ವನಾಥ ದೇವಾಲಯದ ಮುಖ್ಯ ಸಂಕೀರ್ಣದ ನಿರ್ಮಾಣದ ಬಗ್ಗೆ ಮಾಡಿದ ವರದಿಗೆ ಇದೇ ಫೋಟೋಗಳನ್ನು ಬಳಸಿಕೊಂಡಿದೆ.
    1,000 ಕೋಟಿ ರೂ.ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್​ ಯೋಜನೆಗೆ 2019ರ ಮಾರ್ಚ್​ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಅಡಿಗಲ್ಲು ಹಾಕಿದ್ದಾರೆ. ಇದಿನ್ನೂ ನಿರ್ಮಾಣ ಹಂತದಲ್ಲಿದೆ.

    ಇನ್ನು ರಾಮಮಂದಿರ ಸ್ವರೂಪ ಚರ್ಚಾ ಹಂತದಲ್ಲಿಯೇ ಇದ್ದು, ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ. ಸದ್ಯ ವೈರಲ್ ಆಗುತ್ತಿರುವ ಫೋಟೋಗಳಿಗೂ, ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ.(ಏಜೆನ್ಸೀಸ್​) 

     

    ಇಷ್ಟರ ಮಟ್ಟಿಗೆ ಪೂರ್ಣಗೊಂಡಿತಾ ಅಯೋಧ್ಯೆ ರಾಮಮಂದಿರ ನಿರ್ಮಾಣ? ಯಾವುದು ಈ ದೇವಾಲಯ?
    ತಪ್ಪಾದ ಮಾಹಿತಿಯೊಂದಿಗೆ ವೈರಲ್ ಆದ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts