More

    ಮದ್ಯಪ್ರಿಯರಿಗಷ್ಟೇ ಅಲ್ಲ, ಮದ್ಯ ಮಾರಾಟಗಾರರಿಗೂ ದೀದಿ ನಾಡಲ್ಲಿ ಭಾರಿ ಸಂಕಷ್ಟ!

    ಕೋಲ್ಕತ: ಕರೊನಾ ಲಾಕ್​ಡೌನ್ ಕಾರಣಕ್ಕೆ ಸರಿ ಸುಮಾರು ಒಂದು ತಿಂಗಳಿಗೂ ಹೆಚ್ಚುಕಾಲ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮದ್ಯಪ್ರಿಯರಿಗೆ ಭಾರಿ ಸಂಕಷ್ಟವೊಂದು ಎದುರಾಗಿದೆ.

    ಇದನ್ನೂ ಓದಿ: ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಒಂದು ತಿಂಗಳಿಗೂ ಅಧಿಕ ಕಾಲ ಮದ್ಯ ಸಿಗದೇ ಇದ್ದ ಕಾರಣ ಮದ್ಯ ಪ್ರಿಯರ ದಾಹ ಹೆಚ್ಚಾಗಿದ್ದು, ಅವರ ಬೇಡಿಕೆಯನ್ನು ಪೂರೈಸುವುದೂ ಕಷ್ಟವಾಗುತ್ತಿದೆ ಎಂದು ಮದ್ಯ ಮಾರಾಟಗಾರರು ಹೇಳತೊಡಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮದ್ಯ ಪ್ರಿಯರ ಬೇಡಿಕೆ ಈಡೇರಿಸುವಷ್ಟು ಮದ್ಯದ ದಾಸ್ತಾನು ಇಲ್ಲ ಎಂದು ವೆಸ್ಟ್​ ಬೆಂಗಾಲ್ ಫಾರಿನ್ ಲಿಕ್ಕರ್​ ಮ್ಯಾನುಫ್ಯಾಕ್ಚರರ್ಸ್​, ವೆಂಡರ್ಸ್​ ಆ್ಯಂಡ್ ಹೋಲ್​ಸೇಲರ್ಸ್ ಅಸೋಸಿಯೇಷನ್​ ಪ್ರತಿನಿಧಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ರಾಜ್ಯದಲ್ಲಿ ಮದ್ಯ ಉತ್ಪಾದನೆಗೆ ಅನುಮತಿ ಸಿಕ್ಕಿದೆ. ಆದರೂ ಶ್ರಮಿಕ ವರ್ಗ ಇಲ್ಲದ ಕಾರಣ ಮತ್ತು ಅನೇಕ ಘಟಕಗಳಲ್ಲಿ ಲಾಕ್​ಡೌನ್ ನಿಯಮ ಪೂರೈಸುವುದು ಕಷ್ಟವಾದ ಕಾರಣ ಮದ್ಯ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಂದರೆ ಮದ್ಯಪ್ರಿಯರ ಬೇಡಿಕೆ ಈಡೇರಿಸುವಷ್ಟು ಮದ್ಯ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಅನೇಕ ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು

    ಸದ್ಯದ ಪರಿಸ್ಥಿತಿಯಲ್ಲಿ ಮದ್ಯ ಪೂರೈಕೆ ಸಹಜ ಸ್ಥಿತಿಗೆ ಬರಬೇಕಾದರೆ ಇನ್ನೂ ಒಂದು ತಿಂಗಳು ಬೇಕಾದೀತು. ಸರ್ಕಾರ ಇದೀಗ ಮದ್ಯ ಮಾರಾಟದ ಎಂಆರ್​ಪಿ ಮೇಲೆ ಶೇಕಡ 30 ಮಾರಾಟ ತೆರಿಗೆ ವಿಧಿಸಿದೆ. ಆದರೆ, ಇದು ಮದ್ಯ ಉತ್ಪಾದಕರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಬಂಡವಾಳ ಹೂಡುವುದಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದ್ದು, ಬ್ಯಾಂಕುಗಳಲ್ಲೋ ಅಥವಾ ಸರ್ಕಾರದ ಬಳಿಯೋ ಇದಕ್ಕೆ ಪರಿಹಾರವಿದ್ದಂತೆ ಕಾಣುತ್ತಿಲ್ಲ ಎಂದೂ ಅವರು ಅಲವತ್ತುಕೊಂಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

    ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಬೆವ್​​ಕೊ ಮದ್ಯ ದಾಸ್ತಾನು ಉಗ್ರಾಣದಲ್ಲಿ ಮದ್ಯ ದಾಸ್ತಾನು ಕೊರತೆ ಉಂಟಾಗಿದ್ದು, ಇವೆಲ್ಲದರ ನಡುವೆ ಸರ್ಕಾರ ಹೋಮ್ ಡೆಲಿವರಿ ವ್ಯವಸ್ಥೆಯನ್ನೂ ಜಾರಿಗೊಳಿಸಿ ಅಧ್ವಾನ ಉಂಟುಮಾಡುತ್ತಿದೆ.ಮದ್ಯ ಉತ್ಪಾದನೆ ಮತ್ತು ಪೂರೈಕೆ ಸರಿ ಹೋಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಮರಳಬಹುದು ಎಂಬ ಆಶಾವಾದದಲ್ಲ ಇದ್ದೇವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

    54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts