More

    ನಟ ಸುಶಾಂತ್​ ಸಿಂಗ್ ಬಗೆಗಿನ ಚಲನಚಿತ್ರ ಬಿಡುಗಡೆಗೆ ತಡೆ ಇಲ್ಲ

    ನವದೆಹಲಿ : ಕಳೆದ ವರ್ಷ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದ ಚಲನಚಿತ್ರ ‘ನಾಯ್: ದಿ ಜಸ್ಟೀಸ್’ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನಾಳೆ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ಮಾಪಕರ ವಿರುದ್ಧ ಸುಶಾಂತ್​ ಅವರ ತಂದೆ ಕೃಷ್ಣ ಕಿಶೋರ್​ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.

    ಈ ಚಿತ್ರವನ್ನು ಕುಟುಂಬದ ಅನುಮತಿಯಿಲ್ಲದೆ ಚಿತ್ರೀಕರಿಸಿದ್ದು, ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವವರ ನಂಬಿಕಸ್ಥರಿಂದ ವೈಭವೋಪೇತವಾಗಿ ನಿರ್ಮಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸಿಂಗ್​ ಅವರು, ಈ ಚಿತ್ರದಿಂದ ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು 2 ಕೋಟಿ ಪರಿಹಾರವನ್ನೂ ಕೋರಿದ್ದರು. ಸುಶಾಂತ್​ರ ಹೆಸರು ಬಳಸಿ ಅಥವಾ ಜೀವನವನ್ನಾಧರಿಸಿ ಯಾವುದೇ ಚಿತ್ರ, ನಾಟಕ ಇತ್ಯಾದಿಗಳನ್ನು ನಿರ್ಮಿಸಿ ಹಣ ಮಾಡಲು ಅವಕಾಶ ಕೊಡಬಾರದು ಎಂದು ಕೋರ್ಟ್​ ಆದೇಶ ಕೋರಿದ್ದರು.

    ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನ ಆಂಧ್ರಕ್ಕೆ ಕಳಿಸಿ, ಮಕ್ಕಳನ್ನು ಆಟವಾಡಿಸುತ್ತಾ ಅಡುಗೆ ಮಾಡಿಕೊಂಡಿರಲಿ: ಸಾರಾ ಮಹೇಶ್​

    ನ್ಯಾಯಮೂರ್ತಿ ಸಂಜೀವ್ ನರುಲ ಅವರು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದು, ಚಿತ್ರದ ನಿರ್ಮಾಪಕರಿಗೆ ಖರ್ಚುವೆಚ್ಚಗಳ ಲೆಕ್ಕಪತ್ರಗಳನ್ನು ಪಾಲಿಸುವಂತೆ ಆದೇಶ ನೀಡಿದ್ದಾರೆ.

    ‘ನ್ಯಾಯ್​ : ದ ಜಸ್ಟೀಸ್’ ಚಿತ್ರವು ಸುಶಾಂತ್​ರ ನಿಗೂಢ ಸಾವಿನ ಸುತ್ತ ಹೆಣೆದಿರುವ ಚಿತ್ರ. ದಿಲೀಪ್ ಗುಲಾಟಿ ನಿರ್ದೇಶಿಸಿದ್ದು, ಸರಳ ಎ.ಸರೌಗಿ ಮತ್ತು ರಾಹುಲ್​ ಶರ್ಮ ನಿರ್ಮಾಪಕರು. ಜುಬೇರ್ ಕೆ.ಖಾನ್ ಮತ್ತು ಶ್ರೇಯಾ ಶುಕ್ಲ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಹೊರತಾಗಿ ಇನ್ನೂ ಮೂರು ಚಿತ್ರಗಳು – ‘ಸೂಯಿಸೈಡ್ ಆರ್ ಮರ್ಡರ್​ : ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್​’ ಮತ್ತು ಮತ್ತೊಂದು ಇನ್ನೂ ಹೆಸರಿಡದ ಚಿತ್ರ – ಸುಶಾಂತ್​ ಅವ​ರ ಜೀವನದ ಮೇಲೆ ಮೂಡಿಬರುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

    ಮಕ್ಕಳಿಗೆ ಕರೊನಾ ಚಿಕಿತ್ಸೆ : ರೆಮ್​ಡೆಸಿವಿರ್ ಬೇಡ, ಸ್ಟಿರಾಯ್ಡ್ ಬಳಕೆಯಲ್ಲಿ ಇರಲಿ ಎಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts