More

    ಎಲೆಕ್ಟೊರಲ್ ಬಾಂಡ್​ಗಳ ವಿರುದ್ಧ ತಡೆಯಾಜ್ಞೆ ಇಲ್ಲ : ಸುಪ್ರೀಂ ಕೋರ್ಟ್

    ನವದೆಹಲಿ : ಕಳೆದ ಮೂರು ವರ್ಷಗಳಂತೆ ಈ ಬಾರಿಯೂ ಏಪ್ರಿಲ್​ನಲ್ಲಿ ಎಲೆಕ್ಟೊರಲ್ ಬಾಂಡ್​ಗಳ ಖರೀದಿಗೆ ಅವಕಾಶ ಲಭಿಸಲಿದೆ. ಏಕೆಂದರೆ ದೇಶದ ಕೆಲವೆಡೆ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾಂಡ್‌ಗಳ ಮಾರಾಟವನ್ನು ತಡೆಹಿಡಿಯಲು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

    ರಾಜಕೀಯ ಪಕ್ಷಗಳು ಹಣ ಸಂಗ್ರಹಿಸಲು ಅನುಕೂಲವಾಗುವಂತೆ ನರೇಂದ್ರ ಮೋದಿ ಸರ್ಕಾರವು ಜನವರಿ 2018 ರಲ್ಲಿ ಎಲೆಕ್ಟೊರಲ್ ಬಾಂಡ್​ ಸ್ಕೀಮ್​ಅನ್ನು ಜಾರಿಗೊಳಿಸಿತ್ತು. ವ್ಯಕ್ತಿಗಳು ಅಥವಾ ಕಂಪೆನಿಗಳು ಈ ಮೂಲಕ 1000 ರೂಪಾಯಿಂದ ಹಿಡಿದ 1 ಕೋಟಿ ರೂಪಾಯಿವರೆಗೆ ಎಸ್​ಬಿಐನಿಂದ ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ.

    ಇದನ್ನೂ ಓದಿ: ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

    ಈ ಯೋಜನೆಯ ವಿರುದ್ಧ ಸಿಪಿಐ-ಎಂ ಪಕ್ಷದೊಂದಿಗೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ಕಾಮನ್ ಕಾಸ್ ಎಂಬ ಸರಕಾರೇತರ ಸಂಸ್ಥೆಗಳು ಪಿಐಎಲ್ ಸಲ್ಲಿಸಿವೆ. ಸುಪ್ರೀಂ ಕೋರ್ಟ್ ಮುಂದೆ ಈ ಬಾಂಡ್​ಗಳ ಕಾನೂನುಬದ್ಧತೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ.
    ಇದೀಗ ನಾಲ್ಕು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಈ ವರ್ಷ ಏಪ್ರಿಲ್​ನಲ್ಲಿ ಎಲೆಕ್ಟೊರಲ್ ಬಾಂಡ್​ಗಳನ್ನು ಹೊಸದಾಗಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಎಡಿಆರ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

    ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠವು ಬಾಂಡ್​ಗಳ ಮಾರಾಟಕ್ಕೆ ಸಾಕಷ್ಟು ಸುರಕ್ಷತಾ ಕ್ರಮಗಳು ಚಾಲ್ತಿಯಲ್ಲಿವೆ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್, “ಈ ಬಾಂಡ್​ಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. 2018, 2019 ಮತ್ತು 2020ರಲ್ಲಿ ಇವನ್ನು ಬಿಡುಗಡೆ ಮಾಡಲಾಗಿದೆ. ಈಗ ಅವುಗಳನ್ನು ಇಷ್ಯೂ ಮಾಡುವುದರ ವಿರುದ್ಧ ತಡೆಯಾಜ್ಞೆ ನೀಡಲು ಯಾವುದೇ ಸಮರ್ಥನೆ ಕಂಡುಬರುವುದಿಲ್ಲ” ಎಂದು ಹೇಳಿದೆ. (ಏಜೆನ್ಸೀಸ್)

    ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ

    ‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !

    VIDEO | “ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್” : ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts