More

    31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಬೆಂಗಳೂರು/ನವದೆಹಲಿ: ಕೋವಿಡ್​ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅನ್​ಲಾಕ್​ 2ರ ಮಾರ್ಗಸೂಚಿ ಪ್ರಕಾರ ಜುಲೈ 31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಬೇಕು. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.

    ಈಗಾಗಲೇ ಜೂನ್ 29ರಂದು ಪ್ರಕಟಿಸಿದ ಅನ್​ಲಾಕ್​ 2.0 ರ ಮಾರ್ಗಸೂಚಿಯಲ್ಲಿ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್​ಗಳು ಜುಲೈ 31ರ ತನಕ ಮುಚ್ಚಿರಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ, ಮಾರ್ಗಸೂಚಿಯ ಪಾರ್ಟ್​ 1(1) ರ ಪ್ರಕಾರ ಆನ್​ಲೈನ್​/ಡಿಸ್ಟೆನ್ಸ್ ಲರ್ನಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ, ಅಗತ್ಯ ಬೋಧಕ ಸಿಬ್ಬಂದಿ/ಬೋಧಕೇತರ ಸಿಬ್ಬಂದಿ ಅಥವಾ ರಿಸರ್ಚ್​ ಸ್ಕಾಲರ್​ಗಳನ್ನು ಶಾಲೆ/ಕಾಲೇಜು/ಶಿಕ್ಷಣ ಸಂಸ್ಥೆಗಳಿಗೆ ಕರೆಯಿಸಿಕೊಳ್ಳಬಾರದು ಎಂಬ ಅಂಶ ಮಾನವ ಸಂಪನ್ಮೂಲ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿದೆ.

    ಇದನ್ನೂ ಓದಿ:  ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ

    ಕೇಂದ್ರದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿತಾ ಕರ್ವಾಲ್​ ಸಹಿ ಹಾಕಿದ ಆದೇಶದಲ್ಲಿ, ಅನ್​ಲಾಕ್​ 2.0ರ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದನ್ನು ಖಾತರಿಪಡಿಸುವ ಕೆಲಸ ಆಯಾ ರಾಜ್ಯಗಳ ಚೀಫ್ ಸೆಕ್ರಟರಿಗಳದ್ದು ಎಂದು ಸೂಚಿಸಲಾಗಿದೆ. ಎಲ್ಲ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್​ಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಬೇಕು ಎಂದು ಆದೇಶ ತಿಳಿಸಿದೆ.

    31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts