More

    ಕುಸಿದು ವರ್ಷ ಎರಡು ಕಳೆದರೂ ದುರಸ್ತಿಯಾಗದ ಎತ್ತಬೇರು ಸೇತುವೆ

    ಬೈಂದೂರು: ಇಲ್ಲಿಗೆ ಸಮೀಪದ ಗಂಗನಾಡು ಮಾರ್ಗದಲ್ಲಿರುವ ಎತ್ತಬೇರು ಹಾಗೂ ಮಾವಡ ಎಂಬಲ್ಲಿ ನಿರ್ಮಿಸಿರುವ ಸಂಪರ್ಕ ಸೇತುವೆ ಶಿಥಿಲಗೊಂಡು 2 ವರ್ಷ ಕಳೆದಿದೆ. ನಡೆದಾಡಲು ಪ್ರಮುಖ ಸಂಪರ್ಕ ಮಾರ್ಗವಾಗಿರುವ ಗ್ರಾಮೀಣ ಭಾಗದ ಈ ಸೇತುವೆ ಇಲ್ಲಿನ ಜನರಿಗೆ ಅತ್ಯವಶ್ಯಕವಾಗಿದೆ.

    ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಇರುವುದರಿಂದ ಆದಷ್ಟು ಶೀಘ್ರ ದುರಸ್ತಿ ಮಾಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬೈಂದೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಯಡ್ತರೆ, ಬೈಂದೂರು ಹಾಗೂ ಪಡುವರಿ ಗ್ರಾಪಂಗಳು ವಿಲೀನಗೊಂಡು ಪಪಂ ಆಗಿ ಎರಡು ತಿಂಗಳು ಮಾತ್ರ ಕಳೆದಿದೆ. ಈಗಾಗಲೇ ಪಪಂ ವ್ಯಾಪ್ತಿಯ ನಾದುರಸ್ತಿಯಲ್ಲಿರುವ ಎಲ್ಲ ರಸ್ತೆ ಹಾಗೂ ಸೇತುವೆಗಳ ದುರಸ್ತಿ ಬಗ್ಗೆ ಕ್ರಿಯಾಯೋಜನೆ ಸಿದ್ಧಗೊಳಿಸಿ ಇದಕ್ಕೆ ತಗಲುವ ಅಂದಾಜು ವೆಚ್ಚದ ಕರಡು ಪಟ್ಟಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಹಾಗೂ ಮಾವಡ ಸೇತುವೆ ಮರುನಿರ್ಮಾಣಕ್ಕೆ ಸುಮಾರು 20 ರೂ.ಲಕ್ಷ ಬೇಕಾಗಿದ್ದು, ಇದರ ಬಗ್ಗೆಯೂ ಕೂಡ ಕ್ರಮಕೈಗೊಳ್ಳಲಾಗುವುದು ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

    ಸೇತುವೆ ಶಿಥಿಲಗೊಂಡು ಆ ಭಾಗದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜಿಲ್ಲಾ ಪಂಚಾಯಿತಿ ವತಿಯಿಂದ ಇದಕ್ಕೆ ಅನುದಾನವಿಲ್ಲದ ಕಾರಣ ದುರಸ್ತಿ ಕಾಮಗಾರಿಗೆ ಹಿನ್ನಡೆಯಾಗಿದೆ. ಸ್ಥಳೀಯರೊಂದಿಗೆ ಈ ವಿಚಾರವನ್ನು ಶಾಸಕರ ಗಮನಕ್ಕೂ ತಂದಿದ್ದು, ನಮ್ಮ ಮನವಿಗೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಮಳೆಗಾಲ ಮುಗಿದ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
    ಟಿ. ಶಂಕರ ಪೂಜಾರಿ ಜಿಪಂ ಸದಸ್ಯ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts