More

    ಚೀನಾದಲ್ಲಿ ಇದೀಗ ಬಡತನ ಎಂಬುವುದೇ ಇಲ್ಲವಂತೆ!

    ಬಿಜಿಂಗ್: ಜಗತ್ತಿನ ಪ್ರಬಲ ಕಮ್ಯುನಿಷ್ಟ ರಾಷ್ಟ್ರ ಚೀನಾ ಇದೀಗ ಹೊಸ ಸಾಧನೆಯೊಂದನ್ನು ಮಾಡಿದೆಯಂತೆ. ಈ ಸಾಧನೆಯನ್ನು ಹಬ್ಬದಂತೆ ಅಲ್ಲಿನ ಸರ್ಕಾರ ಸಂಭ್ರಮಿಸುತ್ತಿದೆಯಂತೆ.
    ಹೌದು, ಚೀನಾದಲ್ಲಿ ಅಧಿಕೃತವಾಗಿ ಬಡತನ ಮಾಯವಾಗಿದೆಯಂತೆ. ಹೀಗಾಗಿ ಅಲ್ಲಿನ ಕ್ಷಿ ಜಿನ್ ಪಿಂಗ್ ನೇತೃತ್ವದ ಕಮ್ಯುನಿಷ್ಟ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿದೆ. ಪಿಂಗ್ ಆಡಳಿತಾವಧಿಯಲ್ಲಿ ಕೈಗೊಂಡ ವ್ಯಾಪಕ ಕ್ರಮಗಳೇ ಇದೀಗ ಚೀನಾದಲ್ಲಿ ಬಡತನವನ್ನು ಮಾಯ ಮಾಡಿದೆಯಂತೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಚೀನಾ ಜಗತ್ತಿನಲ್ಲಿ ಹೆಚ್ಚು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.
    ಸುಮಾರು ಹತ್ತುಕೋಟಿ ಜನ ಚೀನಾದಲ್ಲಿ 2300 ಯುವಾನ್ (355 ಡಾಲರ್) ತಲಾ ಆದಾಯವನ್ನು ಹೊಂದಿದ್ದರಂತೆ. ಇದೀಗ ಅದು ದ್ವೀಗುಣ ಗೊಂಡಿದ್ದು, ತೀವ್ರತರ ಬಡತನದಿಂದ ಇವರು ಹೊರ ಬಂದಿದ್ದಾರೆ, ಅವರ ಆದಾಯ ದ್ವಿಗುಣಗೊಂಡಿದೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.
    ಚೀನಾ ಈ ಸಾಧನೆಯನ್ನು ಮಾಡಲು 2030 ನ್ನು ಗುರಿ ಹಾಕಿಕೊಂಡಿತ್ತಂತೆ. ಇಷ್ಟು ಬೇಗ ಅದು ಸಾಕಾರಗೊಂಡಿರುವುದರಿಂದ ಚೀನಾ ಸರ್ಕಾರ ಖುಷಿಯಾಗಿದೆ. ತಂತ್ರಜ್ಞಾನದಿಂದ ಚೀನಾ ಬಡತನವನ್ನು ಮೆಟ್ಟಿ ನಿಂತಿದೆ ಎಂದು ವರದಿ ಹೇಳಿದೆ. (ಏಜೇನ್ಸಿಸ್)

    ಬೆತ್ತಲೆ ಫೋಟೋ ಕೇಳಿದ ನೆಟ್ಟಿಗನಿಗೆ ನಟಿ ಕಳುಹಿಸಿದ ಫೋಟೋಗೆ ಅಭಿಮಾನಿಗಳು ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts