More

    ಸದ್ಯಕ್ಕೆ ಚೀನಾದಿಂದ ಬರೋ ವಿಮಾನಗಳನ್ನ ಬ್ಯಾನ್ ಮಾಡಲ್ವಂತೆ; ಕೇಂದ್ರದ ಮಾರ್ಗಸೂಚಿ ಹೀಗಿದೆ…

    ನವದೆಹಲಿ: ಚೀನಾದಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗಿದ್ದು ಅಲ್ಲಿಂದ ಬರುವ ವಿಮಾನಗಳನ್ನು ಭಾರತ ಸರ್ಕಾರ ಸದ್ಯಕ್ಕೆ ಬ್ಯಾನ್ ಮಾಡುವುದಿಲ್ಲ ಎಂದು ತಿಳಿಸಿದೆ.

    ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ದೇಶದ ಒಳಕ್ಕೆ ಬರುವ ವಿಮಾನಗಳನ್ನು ತಡೆಯುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿರೋಧ ಪಕ್ಷಗಳು ಚೀನಾದಿಂದ ಬರುವ ಎಲ್ಲಾ ವಿಮಾನಗಳನ್ನೂ ನಿಲ್ಲಿಸಬೇಕು ಎಂದು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.  

    ಈ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ‘ಚೀನಾದಿಂದ ಭಾರತಕ್ಕೆ ಅಥವಾ ಭಾರತದಿಂದ ಚೀನಾಕ್ಕೆ ಯಾವುದೇ ನೇರ ವಿಮಾನಗಳನ್ನು ಇಲ್ಲ. ಆದರೆ ಚೀನಾದ ಮೂಲಕ ಭಾರತಕ್ಕೆ ಬರುವ ಸಂಪರ್ಕ ವಿಮಾನಗಳನ್ನು ನಿಲ್ಲಿಸಲು ಯಾವುದೇ ಆದೇಶಗಳನ್ನು ನೀಡಲಾಗಿಲ್ಲ. ಇಂತಹ ನಿರ್ಧಾರಗಳನ್ನು ಜಾರಿಗೊಳಿಸುವ ಅಧಿಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕಿದೆ. ಆದರೂ ಇದರ ಬಗ್ಗೆ ಅಂತಿಮ ನಿರ್ಧಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತೆಗೆದುಕೊಳ್ಳುತ್ತದೆ’ ಎಂದಿದೆ.

    ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ:

    ಚೀನಾ, ಯುಎಸ್ ಮತ್ತು ಇತರ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳು ಶನಿವಾರದಿಂದ ಅಂದರೆ ಡಿಸೆಂಬರ್ 24 ರಿಂದ ಜಾರಿಗೆ ಬರಲಿವೆ. ಆ ಮಾರ್ಗಸೂಚಿಗಳು ಹೀಗಿವೆ:

    1. ಪ್ರಯಾಣಕ್ಕಾಗಿ ಯೋಜನೆ ರೂಪಿಸುವುದು

    ಎಲ್ಲಾ ಪ್ರಯಾಣಿಕರು ತಮ್ಮ ದೇಶದಲ್ಲಿ ಕೋವಿಡ್ -19 ವಿರುದ್ಧ ಅನುಮೋದಿತ ಪ್ರಾಥಮಿಕ ವೇಳಾಪಟ್ಟಿಯ ಪ್ರಕಾರ ಸಂಪೂರ್ಣವಾಗಿ ಲಸಿಕೆ ಪಡೆದಿರಬೇಕು.

    2.ಪ್ರಯಾಣದ ಸಮಯದಲ್ಲಿ

    ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ವಿಮಾನದಲ್ಲಿ, ಪ್ರಯಾಣ ಮತ್ತು ಎಲ್ಲಾ ಹಂತಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು (ಮಾಸ್ಕ್ ಗಳ ಬಳಕೆ ಮತ್ತು ದೈಹಿಕ ಅಂತರವನ್ನು ಕಾಪಾಡುವುದು) ಸೇರಿದಂತೆ ವಿಮಾನದಲ್ಲಿ ಘೋಷಣೆ ಮಾಡಬೇಕು.

    ಪ್ರಯಾಣದ ಸಮಯದಲ್ಲಿ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ ಯಾವುದೇ ಪ್ರಯಾಣಿಕರನ್ನು ಪ್ರಮಾಣಿತ ಪ್ರೋಟೋಕಾಲ್ ಪ್ರಕಾರ ಪ್ರತ್ಯೇಕಿಸಬೇಕು, ಅಂದರೆ ಸದರಿ ಪ್ರಯಾಣಿಕನು ಮಾಸ್ಕ್ ಧರಿಸಿರಬೇಕು, ವಿಮಾನದಲ್ಲಿ ಅಥವಾ ಪ್ರಯಾಣಿಸುವಾಗ ಇತರ ಪ್ರಯಾಣಿಕರಿಂದ ಪ್ರತ್ಯೇಕಿಸಲ್ಪಟ್ಟಿರ ಬೇಕು. ನಂತರ ಚಿಕಿತ್ಸೆಗಾಗಿ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಬೇಕು.

    3.ಆಗಮಿಸಿದಾಗ

    ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಡಿ-ಬೋರ್ಡಿಂಗ್ ಮಾಡಬೇಕು.

    ಪ್ರವೇಶದ ಸ್ಥಳದಲ್ಲಿ ಉಪಸ್ಥಿತರಿರುವ ಆರೋಗ್ಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು.

    ಸ್ಕ್ರೀನಿಂಗ್ ಸಮಯದಲ್ಲಿ ರೋಗಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಿ, ಆರೋಗ್ಯ ಪ್ರೋಟೋಕಾಲ್ ಪ್ರಕಾರ (ಮೇಲಿನಂತೆ) ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಬೇಕು.

    ಆಗಮನದ ನಂತರ ಈ ಕೆಳಗಿನ ಪ್ರೋಟೋಕಾಲ್ ಅನ್ನು ಸಹ ಅನುಸರಿಸಬೇಕು:

    ಒಂದು ಉಪ-ವಿಭಾಗ (ವಿಮಾನದಲ್ಲಿರುವ ಒಟ್ಟು ಪ್ರಯಾಣಿಕರಲ್ಲಿ 2%) ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಪರೀಕ್ಷೆಗೆ ಒಳಗಾಗಬೇಕು.

    ಪ್ರತಿ ವಿಮಾನದಲ್ಲಿರುವ ರೋಗಗ್ರಸ್ಥ ಪ್ರಯಾಣಿಕರನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು (ಆದ್ಯತೆ ಮೇರೆಗೆ) ಗುರುತಿಸಬೇಕು. ಅವರು ತಮ್ಮ ಮೂಗಿನ ೊಳಗಿನ ಮಾದರಿಗಳನ್ನು ಸಲ್ಲಿಸಿದ ನಂತರ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುತ್ತದೆ.

    ಅಂತಹ ಪ್ರಯಾಣಿಕರ ಮಾದರಿಗಳಲ್ಲಿ ಕರೋನಾ ಪಾಸಿಟಿವ್ ಬಂದರೆ, ಅವರ ಮಾದರಿಗಳನ್ನು ಐಎನ್ಎಸ್ಎಸಿಒಜಿ ಪ್ರಯೋಗಾಲಯ ನೆಟ್ವರ್ಕ್ನಲ್ಲಿ ಜೀನೋಮಿಕ್ ಪರೀಕ್ಷೆಗಾಗಿ ಕಳುಹಿಸಬೇಕು.

    ನಿಗದಿಪಡಿಸಿದ ಪ್ರಮಾಣಿತ ಶಿಷ್ಟಾಚಾರದ ಪ್ರಕಾರ ಅವರನ್ನು ಪರಿಗಣಿಸಲಾಗುತ್ತದೆ / ಪ್ರತ್ಯೇಕಿಸಲಾಗುತ್ತದೆ.

    ಎಲ್ಲಾ ಪ್ರಯಾಣಿಕರು ಆಗಮಿಸಿದ ನಂತರ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಬೇಕು. ಅವರು ರೋಗಲಕ್ಷಣಗಳನ್ನು ಹೊಂದಿದ್ದರೆ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ (1075)/ ರಾಜ್ಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts