More

    ಮರಾಠ ನಿಮಗ ಸ್ಥಾಪನೆಗೆ ವಿರೋಧ- ಕರ್ನಾಟಕ ಬಂದ್​ಗೆ ಅನುಮತಿ ಇಲ್ಲ: ಎಡಿಜಿಪಿ

    ಬೆಂಗಳೂರು: ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಎಡಿಜಿಪಿ ಸಿ.ಎಚ್.ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

    ಯಾರಿಗೂ ಬಂದ್ ಆಚರಣೆಗೆ ಅನುಮತಿ ನೀಡಿಲ್ಲ. ಬಲವಂತವಾಗಿ ಅಂಗಡಿಮುಂಗಟ್ಟು ಮುಚ್ಚಿಸುವುದನ್ನು ಮಾಡಿ ದರೆ ಸಹಿಸುವುದಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಸಾರಿಗೆ ಸಂಚಾರ ಸುಗಮವಾಗಿ ನಡೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

    ಇದನ್ನೂ ಓದಿ: ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?

    120ಕ್ಕೂ ಅಧಿಕ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

    ಮರಾಠ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್: ರಾಜಧಾನಿಯಲ್ಲಿ ಹಲವೆಡೆ ಕಟ್ಟೆಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts