More

  ನೀನು ನನ್ನ ಮಗನೇ ಅಲ್ಲಾ; ಕೆ.ಎಲ್. ರಾಹುಲ್​ಗೆ ಸುನಿಲ್​ ಶೆಟ್ಟಿ ಹೀಗಂದಿದ್ಯಾಕೆ

  ನವದೆಹಲಿ: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ಗೆ ಮಾರ್ಚ್​ 22ರಂದು ವರ್ಣರಂಜಿತೆ ಚಾಲನೆ ದೊರೆತ್ತಿದ್ದು, ಲೋಕಸಭೆ ಚುನಾವಣೆಯ ಜೊತೆ ಜೊತೆ ಐಪಿಎಲ್​ ಭರಾಟೆ ಕೂಡ ಜೋರಾಗಿದೆ ಎಂದು ಹೇಳಬಹುದಾಗಿದೆ. ಈ ಬಾರಿ ಐಪಿಎಲ್​ ಜಾಹೀರಾತು ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತಿದ್ದು, ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

  ಇತ್ತ ಪ್ರಸಿದ್ದ ಬೆಟ್ಟಿಂಗ್​ ಆ್ಯಪ್​ ಒಂದರ ಜಾಹೀರಾತೊಂದು ಎಲ್ಲರ ಗಮನ ಸೆಳೆದಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.  ಈ ಜಾಹೀರಾತಿನಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಾಗೂ ಕ್ರಿಕೆಟಿಗರಾದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  ಸುನಿಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಾಗಿ ಹಾಗೂ ರೋಹಿತ್ ಶರ್ಮಾ ಮುಂಬೈ ತಂಡದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕೆಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವ​ನ್ನು ಪ್ರತಿನಿಧಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

  ಇದನ್ನೂ ಓದಿ: ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು; ಸಿನಿಮೀಯ ಶೈಲಿಯಲ್ಲಿ ಖದೀಮರನ್ನು ಸೆರೆಹಿಡಿದ ತಾಯಿ-ಮಗಳು

  ರೆಸ್ಟೋರೆಂಟ್​ನಲ್ಲಿ ಚಿತ್ರೀಕರಿಸಲಾಗಿರುವ ಈ ಜಾಹೀರಾತಿನಲ್ಲಿ ಸುನಿಲ್ ಶೆಟ್ಟಿ ಹಾಗೂ ರೋಹಿತ್ ಶರ್ಮಾ ಊಟಕ್ಕೆ ಕೂತಿರುತ್ತಾರೆ. ಇದೇ ವೇಳೆ ಕೆ.ಎಲ್. ರಾಹುಲ್ ಕೂಡ ಜೊತೆಗೂಡಲು ಬುರತ್ತಾರೆ. ಈ ವೇಳೆ ರೋಹಿತ್ ಶರ್ಮಾ, ನಾವು ಫ್ಯಾಮಿಲಿ ಡಿನ್ನರ್ ಮಾಡ್ತಿದ್ದೇವೆ ಎನ್ನುತ್ತಾರೆ. ಈ ವೇಳೆ ಆಶ್ಚರ್ಯದಿಂದ ಸುನಿಲ್​ ಶೆಟ್ಟಿಯತ್ತ ನೋಡುವ ರಾಹುಲ್, ಪಪ್ಪಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಈ ವೇಳೆ ಸುನಿಲ್​ ಶೆಟ್ಟಿ, ನೋ ಪಪ್ಪಾ… ಐಪಿಎಲ್ ಮುಗಿಯುವರೆಗೆ ಶರ್ಮಾ ಅವರ ಮಗ ನನ್ನ ಮಗ ಎಂದು ರೋಹಿತ್ ಶರ್ಮಾ ಅವರನ್ನು ತೋರಿಸುತ್ತಾರೆ. 

  ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಐಪಿಎಲ್​ನ ಮಹಿಮೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಜಾಹೀರಾತನ್ನು ಇಷ್ಟು ಕ್ರಿಯೇಟಿವ್​ ಆಗಿ ನಿರ್ದೇಶಿಸಿದವರಿಗೆ ಪ್ರಶಸ್ತಿ ಕೊಡಬೇಕೆಂದು ಹಲಬರು ಕಮೆಂಟ್​ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts