More

    ತುಕ್ಡೇ ತುಕ್ಡೇ ಗ್ಯಾಂಗ್ ಅನ್ನೋ ಗ್ರೂಪ್​ ಒಂದು ಇದೆಯೇ?: ಕೆಲವು ಕಾಂಗ್ರೆಸ್ ಸಂಸದರ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿದ ಉತ್ತರವೇನು?

    ನವದೆಹಲಿ: ತುಕ್ಡೇ ತುಕ್ಡೇ ಎಂಬ ದೇಶವಿರೋಧಿ ಘೋಷಣೆಗಳನ್ನು ಕೂಗಿ ಗಮನಸಳೆದ ಗುಂಪನ್ನು ಜನ ತುಕ್ಡೇ ತುಕ್ಡೇ ಗ್ಯಾಂಗ್ ಎಂದೇ ಗುರುತಿಸುತ್ತಾರೆ. ದೇಶವಿರೋಧಿ ಘೋಷಣೆ ಕೂಗುವವರನ್ನು ಕಂಡ ಕೂಡಲೇ ಜನ ಅವರನ್ನು ತುಕ್ಡೇ ತುಕ್ಡೇ ಗ್ಯಾಂಗ್​ನ ಸದಸ್ಯರೆಂದು ಗುರುತಿಸಬಿಡುತ್ತಾರೆ. ಅಷ್ಟರ ಮಟ್ಟಿಗೆ ಇದು ಪ್ರಚಲಿತದಲ್ಲಿದೆ.

    ಈ ಪ್ರಚಲಿತದ ವಿಚಾರ ಸಂಸತ್ತಿನಲ್ಲೂ ಪ್ರಸ್ತಾಪವಾಗಿದೆ. ಇದರ ಬಗ್ಗೆ ಮಾಹಿತಿ ಕೊಡಿ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಕೇಂದ್ರ ಸರ್ಕಾರವೂ  ಪ್ರತಿಕ್ರಿಯೆಯನ್ನು ಕೊಟ್ಟಿದೆ.

    ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಗುಂಪನ್ನು ಗುರುತಿಸಲಾಗಿದೆಯೇ ಎಂಬ ಕುರಿತು ಮಾಹಿತಿ ಕೊಡಿ ಎಂದು ಕಾಂಗ್ರೆಸ್​ ಸದಸ್ಯರಾದ ವಿನ್ಸೆಂಟ್​ ಎಚ್ ಪಾಲಾ ಮತ್ತು ಜಸ್ಬೀರ್ ಸಿಂಗ್ ಗಿಲ್​ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದರು. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಉತ್ತರವನ್ನೂ ಕೊಟ್ಟಿದೆ.

    ಲೋಕಸಭೆಯಲ್ಲಿ ಗೃಹ ಸಚಿವಾಲಯದ ರಾಜ್ಯ ಸಚಿವ ಕೆ.ಕಿಶನ್ ರೆಡ್ಡಿ ಲಿಖಿತ ಉತ್ತರ ನೀಡಿದ್ದು, ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಪದಪುಂಜದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾನೂನು ಪಾಲನಾ ಸಂಸ್ಥೆಗಳಿಂದ ಬಂದಿರುವ ಮಾಹಿತಿಯಲ್ಲೂ ಈ ಪದಪುಂಜ ಬಳಕೆಯಾಗಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts