More

    ಶೂನ್ಯ ತೆರಿಗೆಯ ಜಿಎಸ್​ಟಿ ವಿವರ ತಡವಾಗಿ ಸಲ್ಲಿಸಿದರೆ ಜುಲ್ಮಾನೆ ಇಲ್ಲ

    ನವದೆಹಲಿ: ಶೂನ್ಯ ತೆರಿಗೆ ಪಾವತಿಸುವವರು ಜಿಎಸ್​ಟಿ ವಿವರವನ್ನು ತಡವಾಗಿ ಸಲ್ಲಿಸಿದರೆ, ಅದಕ್ಕೆ ಯಾವುದೇ ಜುಲ್ಮಾನೆ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಶುಕ್ರವಾರ ಹೇಳಿದ್ದಾರೆ.

    ಈ ಆದೇಶವು 2017ರ ಜುಲೈನಿಂದ 2020ರ ಜನವರಿವರೆಗೆ ಜಿಎಸ್​ಟಿ ವಿವರ ಸಲ್ಲಿಸದ ಶೂನ್ಯ ತೆರಿಗೆದಾರರಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಸಿಎಂ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?

    ಶುಕ್ರವಾರ ನಡೆದ ಜಿಎಸ್​ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಸಲ್ಲಿಸಬೇಕಾದ ಮಾರಾಟದ ವಿವರಗಳನ್ನು 2017ರ ಜುಲೈನಿಂದ 2020ರ ಜನವರಿವರೆಗೆ ಸಲ್ಲಿಸದವರಿಗೆ ವಿಧಿಸಲಾಗುತ್ತಿದ್ದ ಗರಿಷ್ಠ ಜುಲ್ಮಾನೆಯನ್ನು 500 ರೂ.ಗೆ ಇಳಿಸಿರುವುದಾಗಿ ಹೇಳಿದರು.

    ಪರೋಕ್ಷ ತೆರಿಗೆ ಕುರಿತು ನಿರ್ಧಾರ ಕೈಗೊಳ್ಳುವ ಸಮಿತಿಯು ದೇಶದಲ್ಲಿರುವ ಕೋವಿಡ್​-19 ಪರಿಸ್ಥಿತಿ ಮತ್ತು ಅದರ ಪರಿಣಾಮದ ಕುರಿತು ಚರ್ಚಿಸಿತು ಎಂದು ತಿಳಿಸಿದರು.

    ಮೂಕಪ್ರಾಣಿ ಪ್ರೀತಿಗೆಂದೇ ದೇವರು ಮನುಷ್ಯ ಜನ್ಮ ಸೃಷ್ಟಿಸಿದ್ದಾನಂತೆ. ನಿಜವಿರಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts