More

    ವಿದ್ಯುತ್ ಬಿಲ್ ಪಾವತಿಗಿಲ್ಲ ವಿನಾಯಿತಿ: ಸರಾಸರಿ ದರ ಪಾವತಿಸಿ ಮೀಟರ್ ರೀಡರ್ ಮನೆಗೆ ಬರಲ್ಲ

    ಮಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿ(ಜೂನ್ 2020)ಗೆ ಬಿಲ್ ಪಾವತಿಸುವುದನ್ನು ಮುಂದೂಡಿರುವ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

    ಮಾಸಿಕ ಬಿಲ್ ವಿತರಣೆಗೆ ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್ ಪಾವತಿಸಬೇಕೆಂದು ಸೂಚನೆ ನೀಡುವ ಮೂಲಕ ಗೊಂದಲ ನಿವಾರಿಸಿದೆ.

    ವಿದ್ಯುತ್ ಸರಬರಾಜು ಕಂಪನಿಗೆ ಸಂಬಂಧಿಸಿ ಏಪ್ರಿಲ್​ನಲ್ಲಿ ಮಾಪನ ಓದುವವರು ಮನೆ, ಸಂಸ್ಥೆಗಳಿಗೆ ಭೇಟಿ ನೀಡುವುದಿಲ್ಲ. ಬದಲಾಗಿ ಗ್ರಾಹಕರ ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಮೊತ್ತವನ್ನೇ ಈ ಬಾರಿಯೂ ಪಾವತಿಸಬೇಕು. ಈ ಬಿಲ್​ಗಳನ್ನು ಇ-ಮೇಲ್, ವಾಟ್ಸಾಪ್ ಅಥವಾ ಎಸ್ಸೆಮ್ಮೆಸ್ ಮೂಲಕ ಗ್ರಾಹಕರಿಗೆ ಕಳುಹಿಸಲಾಗುತ್ತದೆ. ಮೇನಿಂದ ಮಾಪನ ಮಾಡುವವರು ಭೇಟಿ ನೀಡಲಿದ್ದು, ಈ ತಿಂಗಳ ಬಿಲ್ಲಿಂಗ್​ನಲ್ಲಿ ಹೆಚ್ಚು ಕಡಿಮೆ ಆಗಿದ್ದಲ್ಲಿ ಸರಿಪಡಿಸಲಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಗ್ರಾಹಕರು ಮತ್ತು ಮಾಪನ ಓದುವವರ ಸುರಕ್ಷತೆಯ ದೃಷ್ಟಿಯಿಂದ ಏಪ್ರಿಲ್ ಬಿಲ್​ಗೆ ಸಂಬಂಧಿಸಿದಂತೆ ಮಾತ್ರ ಇದು ಅನ್ವಯವಾಗಲಿದೆ.

    ವಿದ್ಯುತ್ ಕಂಪನಿಗಳು ಪ್ರತಿನಿತ್ಯದ ಖರ್ಚು ವೆಚ್ಚಗಳು ಅದರಲ್ಲೂ ವಿದ್ಯುತ್ ಖರೀದಿಸುವ ಸಂಸ್ಥೆಗಳಿಗೆ ನೀಡುವ ಮೊತ್ತವನ್ನು ಗ್ರಾಹಕರಿಂದಲೇ ಸಂಗ್ರಹಿಸಿ ನೀಡುತ್ತವೆ. ಗ್ರಾಹಕರಿಂದ ಪಾವತಿ ವಿಳಂಬವಾದರೆ ವಿದ್ಯುತ್ ಉತ್ಪಾದಕರಿಗೆ ಪಾವತಿ ಮಾಡುವಲ್ಲೂ ಸಮಸ್ಯೆಯಾಗುತ್ತದೆ. ಇದರಿಂದ ವಿದ್ಯುತ್ ಸರಬರಾಜಿಗೂ ಸಮಸ್ಯೆ ಯಾಗುತ್ತದೆ. ಆದ್ದರಿಂದ ಈ ವ್ಯವಸ್ಥೆ ಮಾಡಲಾಗಿದೆ.

    ಪಡೆಯುವುದು ಹೇಗೆ?

    ಗ್ರಾಹಕರು ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ತಮ್ಮ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ನಂಬರ್, ಮೇಲ್ ಐಡಿ ನೀಡಿದರೆ ವಾಟ್ಸಪ್, ಎಸ್ಸೆಮ್ಮೆಸ್ ಅಥವಾ ಮೇಲ್ ಮೂಲಕ ಬಿಲ್​ನ ಪ್ರತಿ ಪಡೆಯಬಹುದು. ವೆಬ್​ಸೈಟ್​ಗೆ ಭೇಟಿ ನೀಡಿ ಗ್ರಾಹಕ ಸಂಖ್ಯೆ ನೋಂದಣಿ ಮಾಡಿಯೂ ಬಿಲ್ ಪಡೆಯಬಹುದು.

    ಬಿಲ್ ಪಾವತಿ ಆಯ್ಕೆಗಳು

    ಆಯಾ ಉಪವಿಭಾಗದ ಕ್ಯಾಷ್ ಕೌಂಟರ್, ಆನ್​ಲೈನ್​ನಲ್ಲಿ ಕಟ್ಟಬಹುದು. ಕರ್ನಾಟಕ ಒನ್ ವೆಬ್​ಸೈಟ್, ಬಿಬಿಪಿಎಸ್ ಪೇಮೆಂಟ್- ಎಲ್ಲ ಬ್ಯಾಂಕ್​ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್, ವಾಲೆಟ್ ಪೇಮೆಂಟ್, ಯುಪಿಐ ಪೇಮೆಂಟ್, ಪೇ ಯು ಆಪ್, ಐಎಂಐ ಮೊಬೈಲ್ ಆಪ್ ಮೂಲಕ ಬಿಲ್ ಪಾವತಿ ಮಾಡಬಹುದು.

    ನರ್ಸ್​ ಸರಸ್ವತಿ ಕ್ವಾರಂಟೈನ್​ನಲ್ಲಿದ್ದರು, ಬಹಿಷ್ಕಾರ ಹಾಕಿಲ್ಲ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts