More

    ನಿಸ್ಸಂದೇಹವಾಗಿದು ಚೀನೀ ಕಮ್ಯೂನಿಸ್ಟ್ ಪಾರ್ಟಿ ವೈರಸ್!

    ನಿಸ್ಸಂದೇಹವಾಗಿದು ಚೀನೀ ಕಮ್ಯೂನಿಸ್ಟ್ ಪಾರ್ಟಿ ವೈರಸ್!

    ಇಂದು ಜಗತ್ತು ಚೀನಾದ ಮುಂದೆ ನೇರವಾಗಿ ಪ್ರಸ್ತಾಪಿಸುತ್ತಿರುವುದು ಮೂರು ವಿಷಯಗಳು- 1) ಕರೊನಾ ಸೋಂಕು ಎಲ್ಲಿ, ಹೇಗೆ ಉಗಮವಾಯಿತು ಎನ್ನುವುದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು, 2) ಸೋಂಕಿನ ಹರಡುವಿಕೆಯ ಬಗ್ಗೆ ಜಗತ್ತನ್ನು ಅಡ್ಡದಾರಿಗೆ ಎಳೆದ ಬಗ್ಗೆ ಚೀನೀ ಸರ್ಕಾರದಿಂದ ಸ್ಪಷ್ಟೀಕರಣ ಬೇಕು 3) ಮಾನವಜನಾಂಗಕ್ಕೆ, ಜಾಗತಿಕ ಅರ್ಥವ್ಯವಸ್ಥೆಗೆ ಕೇಡು ತಂದಿಟ್ಟಿದ್ದಕ್ಕಾಗಿ ಚೀನಾ ಪರಿಹಾರ ನೀಡಬೇಕು. ದಿನಗಳೆಯುತ್ತಿದ್ದಂತೆ ಈ ದನಿಗಳು ಪ್ರಬಲವಾಗುತ್ತಿವೆ.

    ಮೊದಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ಆರಂಭಿಸಿ, ತನ್ನ ಕುಕೃತ್ಯಗಳಿಗಾಗಿ ಚೀನಾ ಬೆಲೆ ತೆರಬೇಕು ಎಂದರು. ನಂತರದ ದಿನಗಳಲ್ಲಿ ಅವರ ನಿಲುವಿನಲ್ಲಿ ಸಡಿಲತೆ ಕಾಣುತ್ತಿದ್ದಂತೆ, ಚೀನಾ ವಿರುದ್ಧ ಸ್ಪಷ್ಟವಾಗಿ, ನೇರವಾಗಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್ ರಾಬ್, ಜರ್ಮನ್ ಅಧ್ಯಕ್ಷೆ ಏಂಗೆಲಾ ಮೆರ್ಕೆಲ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡತೊಡಗಿದ್ದಾರೆ. ಇವರ ಜತೆಗೆ ಅಮೆರಿಕ, ಯುರೋಪ್ ಮತ್ತು ಆಸ್ಟ್ರೇಲಿಯಾದ ನೂರಾರು ಶಾಸಕರೂ ದನಿಗೂಡಿಸುತ್ತಿದ್ದಾರೆ. ಅವರೆಲ್ಲರ ಬೆಂಬಲದಿಂದ ಉತ್ತೇಜಿತರಾದಂತೆ ಅಧ್ಯಕ್ಷ ಟ್ರಂಪ್, ವೈರಸ್ ಹೊರಬಿದ್ದದ್ದು ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಎಂದು ಮೇ 1ರಂದು ನೇರವಾಗಿ ಆಪಾದಿಸಿ, ಇದಕ್ಕಾಗಿ ಚೀನಾ ಬೆಲೆ ತೆರಲೇಬೇಕು ಎಂದು ಗುಡುಗಿದ್ದಾರೆ. ಈ ಆಪಾದನೆಗಳನ್ನು, ಬೇಡಿಕೆ, ಒತ್ತಾಯಗಳನ್ನು ಚೀನಾ ನಿರಾಕರಿಸುತ್ತಿದೆ. ಇಲ್ಲಿ ನಮಗೆದುರಾಗುವ ಪ್ರಶ್ನೆ ಚೀನಾವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದು, ಪರಿಹಾರ ಕೇಳುವುದು ಸಾಧುವೇ?

    ಇದನ್ನೂ ಓದಿ: ಕರೊನಾ ವಿಷಯದಲ್ಲಿ ಇನ್ನು ಒಂದೂವರೆ ತಿಂಗಳು ತುಂಬಾ ಮುಖ್ಯ

    ಈ ಪ್ರಶ್ನೆಗಳಿಗೆ ನಿಖರ ಉತ್ತರಗಳಿರುವುದು ಚೀನಾದಲ್ಲಿ ಮಾತ್ರ. ಆದರೆ ಆ ಉತ್ತರಗಳು ಚೀನಾದಿಂದ ಬರುತ್ತಿಲ್ಲ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯದ ನಿಲುವು. ಚೀನಾ ಹೇಳುವುದು ಕರೊನಾ ಸೋಂಕು ಕಾಣಿಸಿಕೊಂಡದ್ದು ವೂಹಾನ್ ನಗರದಲ್ಲಿರುವ, ಸಮುದ್ರಜೀವಿಗಳು ಮತ್ತಿತರ ಜೀವಂತ ಪ್ರಾಣಿಗಳನ್ನು ಆಹಾರಕ್ಕಾಗಿ ಮಾರುವ ಹಸಿ ಮಾರುಕಟ್ಟೆ ‘ಹುವಾನಾನ್ ಸೀಫುಡ್ ಮಾರ್ಕೆಟ್’ನಿಂದ, ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಅಲ್ಲ ಎಂದು. ಅಲ್ಲದೆ ಸೋಂಕಿನ ವಿಷಯದಲ್ಲಿ ತಾನು ಹೊರಜಗತ್ತಿಗೆ ಯಾವ ತಪು್ಪ ಮಾಹಿತಿಯನ್ನೂ ನೀಡಿಲ್ಲ, ಬದಲಿಗೆ ಸೋಂಕು ಪ್ರಸರಣವಾಗದಂತೆ ತಡೆಯಲು ಎಲ್ಲ ಕ್ರಮಗಳನ್ನೂ ಕೈಗೊಂಡಿರುವುದಾಗಿ ಚೀನೀ ಸರ್ಕಾರ ಹೇಳುತ್ತಿದ್ದು, ನಿಷ್ಪಕ್ಷಪಾತ ತನಿಖೆಯ ಒತ್ತಡಕ್ಕೆ ಸೊಪು್ಪ ಹಾಕುತ್ತಿಲ್ಲ. ಇದರರ್ಥ ಚೀನಾದಿಂದ ವಿಶ್ವಾಸಾರ್ಹ ಮಾಹಿತಿಗಳು ಹೊರಬರುತ್ತಿಲ್ಲ. ಹೀಗಾಗಿ ವೈರಸ್ ಪ್ರಸರಣ ಆರಂಭವಾದಂದಿನಿಂದ ಚೀನೀ ಸರ್ಕಾರ ವರ್ತಿಸಿದ ಬಗೆಯತ್ತ ಸೂಕ್ಷ್ಮ ಗಮನ ಹರಿಸಿ, ಏನು ನಡೆದಿರಬಹುದು ಎಂಬುದರ ಬಗ್ಗೆ ಒಂದು ನಂಬಲರ್ಹ ಚಿತ್ರಣ ಪಡೆದುಕೊಳ್ಳಲು ಪ್ರಯತ್ನಿಸೋಣ.

    * ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯ ಪಿ4 ಲ್ಯಾಬ್​ನಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಬಾವಲಿ ಕರೊನಾ ಸೋಂಕಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಡಾ. ಷಿ ಝೆಂಗ್​ಲಿ ಸಂಶೋಧನೆಯಲ್ಲಿ ನಿರತವಾಗಿದ್ದ ವಿಜ್ಞಾನಿ. ಈ ವಿಷಯದಲ್ಲಿ ಆಕೆ ವಿಶ್ವದಲ್ಲೇ ಅಗ್ರಮಾನ್ಯೆ. ಹೀಗಾಗಿಯೇ 55 ವರ್ಷದ ಆಕೆಗೆ ‘ಬ್ಯಾಟ್​ವುಮನ್’ ಎಂಬ ಅಡ್ಡಹೆಸರೇ ಬಂದುಬಿಟ್ಟಿದೆ. ಹಿಂದೆಲ್ಲ ಆಕೆಯ ಪರಿಣಿತಿಯ ಬಗ್ಗೆ ಚೀನಾ ದೊಡ್ಡದಾಗಿ ಹೇಳಿಕೊಳ್ಳುತ್ತಿತ್ತು. ಆದರೆ ನವೆಂಬರ್ ಮಧ್ಯಭಾಗದಲ್ಲಿ ಕರೊನಾ ಸೋಂಕು ಆರಂಭವಾದಾಗಿನಿಂದ ಆಕೆ ನಾಪತ್ತೆಯಾಗಿದ್ದಾಳೆ. ಚೀನೀ ಸರ್ಕಾರ ಆಕೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಅದು ಏನನ್ನು ಅಡಗಿಸಿಡುತ್ತಿದೆ? * ‘ಪೇಷಂಟ್ ಝೀರೋ’ ಎಂದು ಹೇಳಲಾಗುತ್ತಿರುವ ಹುವಾಂಗ್ ಯಾನ್​ಲಿಂಗ್ ಪಿ4 ಲ್ಯಾಬ್​ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾಕೆ. ಆಕೆ ಹಾಗೂ ಇತರ ಪ್ರಾರಂಭಿಕ ಸೋಂಕಿತರೆಲ್ಲರೂ ಪಿ4 ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದವರೇ. ಅವರಿಗೂ ಹುವಾನಾನ್ ಮಾರುಕಟ್ಟೆಗೂ ಯಾವುದೇ ಸಂಬಂಧವಿಲ್ಲ. * ಕರೊನಾ ಸೋಂಕು ವೂಹಾನ್ ನಗರದಲ್ಲಿ ಕಾಣಿಸಿಕೊಂಡ ಕೂಡಲೇ ಆ ಬಗ್ಗೆ ಎಲ್ಲೂ ಯಾರ ಜತೆಯೂ ಏನನ್ನೂ ಮಾತಾಡಕೂಡದೆಂದು ಚೀನೀ ಸರ್ಕಾರ ವೂಹಾನ್ ಲ್ಯಾಬಿನ ಎಲ್ಲರ ಮೇಲೆ ನಿರ್ಬಂಧ ಹೇರಿತು. ಯಾಕೆ? * ಸರ್ಕಾರದ ನಿರ್ಬಂಧವನ್ನೂ ಮೀರಿ ಇನ್​ಸ್ಟಿಟ್ಯೂಟ್​ನ ಕೆಲವು ಸಂಶೋಧಕರು, ಕರೊನಾ ವೈರಸ್ ತಮ್ಮ ಲ್ಯಾಬ್​ನಿಂದಲೇ ಹೊರಬಿದ್ದದ್ದು ಎಂದು ಸಾರ್ವಜನಿಕವಾಗಿ ಹೇಳಿದರು. ಸಂಶೋಧಕಿ ಚೆನ್ ಕ್ವಾಂಜಿಯಾವೋ ಮೊದಲ ವಿಜಲ್​ಬ್ಲೋಯರ್. ಇನ್​ಸ್ಟಿಟ್ಯೂಟ್​ನ ಡೈರೆಕ್ಟರ್ ಜನರಲ್ ವಾಂಗ್ ಯಾನ್​ಯಿು ವೈರಸ್ ಅನ್ನು ಹೊರಬಿಟ್ಟ ಸಂಶಯಕ್ಕೊಳಗಾಗಿದ್ದಾರೆ ಎಂದು ಚೆನ್ ತನ್ನ ನಿಜನಾಮಧೇಯದೊಂದಿಗೆ ಚೀನೀ ಸಾಮಾಜಿಕ ಜಾಲತಾಣದಲ್ಲಿ ಢಾಣಾಡಂಗುರವಾಗಿ ಸಾರಿಬಿಟ್ಟಿದ್ದಾಳೆ. * ಕರೊನಾ ಸೋಂಕು ಹಸಿ ಮಾರುಕಟ್ಟೆಯಲ್ಲಿದ್ದ ಬಾವಲಿಗಳಿಂದ ಪ್ಯಾಂಗೋಲಿನ್​ಗಳಿಗೆ ಹರಡಿ ಅವುಗಳಿಂದ ಮನುಷ್ಯನಿಗೆ ಪ್ರಸಾರವಾಯಿತು ಎಂದು ಚೀನೀ ಸರ್ಕಾರ ಹೊರಜಗತ್ತಿಗೆ ಹೇಳಿತು. ಆದರೆ ಅಲ್ಲಿದ್ದ ಯಾವುದೇ ಬಾವಲಿ ಅಥವಾ ಇನ್ನಾವುದೇ ಪ್ರಾಣಿಯನ್ನು ಪರೀಕ್ಷೆಗೊಳಪಡಿಸಲಿಲ್ಲ! ಬದಲಿಗೆ ಮಾರುಕಟ್ಟೆಯನ್ನು ಮುಚ್ಚಿ ಅದನ್ನು ಸಂಪೂರ್ಣವಾಗಿ ತೊಳೆದು ತರಾತುರಿಯಲ್ಲಿ ಡಿಸ್​ಇನ್​ಫೆಕ್ಟ್ ಮಾಡಿಸಿಬಿಟ್ಟಿತು. ಅಂದರೆ ಅದು ಹೇಳಿದ್ದನ್ನು ‘ಕ್ರಾಸ್​ಚೆಕ್’ ಮಾಡಲು ಯಾರಿಗೂ ಅವಕಾಶವೇ ಇಲ್ಲ! * ಕರೊನಾ ಸೋಂಕಿನ ಮೂಲ ಬಾವಲಿ ಎಂಬ ತನ್ನ ಹೇಳಿಕೆಗೆ ಒತ್ತು ನೀಡುವುದಕ್ಕಾಗಿ ಮನುಷ್ಯನೊಬ್ಬ ಬಾವಲಿ ಸೂಪ್ ಸೇವಿಸುತ್ತಿರುವ ವಿಡಿಯೋವನ್ನು ಚೀನಾ ಜಗತ್ತಿಗೆ ಹಂಚಿತು. ಆದರೆ ಆ ವಿಡಿಯೋ ಹುವಾನಾನ್ ಮಾರುಕಟ್ಟೆಗೆ ಸಂಬಂಧಿಸಿದ್ದಲ್ಲ ಎನ್ನುವುದು ನಂತರ ಬಯಲಾಯಿತು. ಅಲ್ಲದೆ, ಸೋಂಕು ಹರಡುವಿಕೆಯಲ್ಲಿ ಬಾವಲಿ ಮತ್ತು ಮನುಷ್ಯನ ನಡುವೆ ಮಧ್ಯವರ್ತಿಯ ಪಾತ್ರ ವಹಿಸಿದ್ದು ಪ್ಯಾಂಗೋಲಿನ್ ಎಂಬ ಹೇಳಿಕೆ ಸತ್ಯದೂರ ಎಂಬ ವರದಿಗಳು ಬಂದಿವೆ. * ಪೀಪಲ್ಸ್ ಲಿಬರೇಷನ್ ಆರ್ವಿುಯ ಅಗ್ರಮಾನ್ಯ ‘ಬಯೋಕೆಮಿಕಲ್ ವೆಪನ್ ಎಕ್ಸ್​ಪರ್ಟ್’ ಚೆನ್ ವೆಯ್ ಫೆಬ್ರವರಿ 7ರಿಂದ ಪಿ4 ಲ್ಯಾಬ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ‘ಪೇಷಂಟ್ ಝೀರೋ’ ಹುವಾಂಗ್ ಯಾಂಗ್​ಲಿಂಗ್​ಳ ಹೆಸರೊಂದನ್ನುಳಿದು ಆಕೆಯ ಭಾವಚಿತ್ರ, ಥೀಸಿಸ್ ಸೇರಿದಂತೆ ಇತರೆಲ್ಲ ವಿವರಗಳನ್ನು ವೂಹಾನ್ ಇನ್​ಸ್ಟಿಟ್ಯೂಟ್ ಫೆ. 15ರಂದು ತನ್ನ ವೆಬ್​ಸೈಟ್​ನಿಂದ ತೆಗೆದುಹಾಕಿತು. ಆಕೆಯ ಜತೆ ಕೆಲಸ ಮಾಡುತ್ತಿದ್ದ ಇತರೆಲ್ಲರ ವಿವರಗಳೂ ಹಾಗೆಯೇ ಇವೆ. * ಕರೊನಾಪೀಡಿತ ರೋಗಿಗಳು ವೂಹಾನ್ ನಗರದ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಅಂಟಿರುವ ರೋಗ ಸಾರ್ಸ್​ನಂತಿದ್ದರೂ ಅದು ಇದುವರೆಗೂ ಪರಿಚಿತವಲ್ಲದ ಹೊಸ ಬಗೆಯ ಮಾರಕ ರೋಗ ಎಂದು ಪತ್ತೆಹಚ್ಚಿದ್ದು ತುರ್ತು ವಿಭಾಗದ ಮುಖ್ಯಸ್ಥೆ ಡಾ. ಆಯ್ ಫೆನ್. ರೋಗದ ವಿವರಗಳನ್ನೂ, ಅದನ್ನು ಗುಣಪಡಿಸಲಾಗದ ಸ್ಥಿತಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಇರುವುದನ್ನೂ ಆಕೆ ಹೇಳಿದ್ದು ಸಹೋದ್ಯೋಗಿ ಡಾ. ಲೀ ವೆನ್​ಲಿಯಾಂಗ್​ಗೆ. ಆತ ಅದನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಚೀನೀ ಸಂಪರ್ಕತಾಣ ‘ವಿಚಾಟ್’ನಲ್ಲಿ ಹಂಚಿಕೊಂಡು ಹೊಸ, ಅಪರಿಚಿತ ರೋಗದ ಬಗ್ಗೆ ದೇಶಾದ್ಯಂತ ಸುದ್ದಿ ಮಾಡಿದರು. ಲಿ ವೆನ್​ಲಿಯಾಂಗ್ ‘ವಿಜಲ್​ಬ್ಲೋಯರ್’ ಎಂದು ನಂತರ ಜನಜನಿತರಾದರು. ಆದರೆ ಅವರ ಕೈಗೆ ‘ವಿಜಲ್ ಇತ್ತದ್ದು’ ಡಾ. ಆಯ್ ಫೆನ್. ಆ ದಿನಗಳಲ್ಲಿ ರೋಗದ ಬಗೆಗಿನ ಸುದ್ದಿಯನ್ನು ಹತ್ತಿಕ್ಕುತ್ತಿದ್ದ ಸರ್ಕಾರ ಇವರ ಕೃತ್ಯಗಳನ್ನು ತನ್ನ ‘ನೀತಿ’ಗೆ ವಿರುದ್ಧ ಎಂದು ತೀರ್ವನಿಸಿ ಅವರಿಬ್ಬರನ್ನೂ ಬಂಧಿಸಿತು. ಡಾ. ಲೀ ಕರೋನಾ ಸೋಂಕಿನಿಂದಲೇ ಫೆಬ್ರವರಿ 6ರಂದು ಮರಣಿಸಿದರು ಎಂದು ಸರ್ಕಾರ ಹೇಳುತ್ತದೆ. ಆಯ್ ಫೆನ್ ಬಗ್ಗೆ ಯಾವ ಮಾಹಿತಿಯೂ ಇಲ್ಲ. * ಕರೊನಾ ಸೋಂಕು ಸಾಂಕ್ರಾಮಿಕವಲ್ಲ ಎಂದು ಚೀನಾ ಜನವರಿ ಮೂರನೆಯ ವಾರದವರೆಗೂ ಹೇಳುತ್ತಿತ್ತು. ಆದರೆ ಹಾಗೆ ಹೇಳುತ್ತಲೇ ಅದು ಸೋಂಕು ನಿಯಂತ್ರಿಸುವ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಆದರೆ ಗುಟ್ಟಾಗಿ ಮಾಡಿದ್ದು ಬಯಲಾಗಿದೆ. ಜನವರಿ ತಿಂಗಳ ಮೊದಲ ಮೂರು ವಾರಗಳಲ್ಲಿ ಚೀನಾ ವಿವಿಧ ದೇಶಗಳಿಂದ ತರಾತುರಿಯಲ್ಲಿ ಆಮದು ಮಾಡಿಕೊಂಡ ಮಾಸ್ಕ್​ಗಳ ಸಂಖ್ಯೆ ಬರೋಬ್ಬರಿ ಇನ್ನೂರು ಕೋಟಿ! ಜತೆಗೆ ನಲವತ್ತು ಕೋಟಿ ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್​ವೆುಂಟ್ಸ್ (ಪಿಪಿಇ) ಅಂದರೆ ಕರೊನಾ ಸೋಂಕಿತರನ್ನು ಉಪಚರಿಸುವವರು ಧರಿಸಬೇಕಾದ ಗೌನ್​ಗಳು ಮತ್ತು ಗಾಗಲ್ಸ್​ಗಳನ್ನೂ ವಿದೇಶ ಗಳಿಂದ ಆಮದು ಮಾಡಿಕೊಂಡಿತು. ಕರೊನಾ ಸೋಂಕು ಸಾಂಕ್ರಾಮಿಕ ಅಲ್ಲ ಎಂದಾದರೆ ಇವೆಲ್ಲವೂ ಯಾಕೆ ಬೇಕಿತ್ತು? * ಹೊರಗಿನವರು ಚೀನಾದೊಳಗೆ ಪ್ರವೇಶಿಸದಂತೆ ಫೆಬ್ರವರಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಚೀನೀ ಸರ್ಕಾರ ಚೀನೀಯರು ತಮ್ಮಲ್ಲಿಗೆ ಪ್ರಯಾಣಿಸುವುದನ್ನು ತಡೆಯಬಾರದೆಂದು ಅಮೆರಿಕ, ಇಟಲಿ, ಸ್ಪೇನ್, ಇಂಡಿಯಾ ಮತ್ತು ಆಗ್ನೇಯ ಏಷ್ಯಾ ದೇಶಗಳ ಮೇಲೆ ಒತ್ತಡ ಹಾಕಿತು. ಸೋಂಕನ್ನು ಹರಡುವ ಪಿತೂರಿ ಇದು. * ಜನವರಿಯಲ್ಲಿ ತನಗೆ ಬೇಕಾದ್ದೆಲ್ಲವನ್ನು ಹೊರಜಗತ್ತಿನಿಂದ ಪಡೆದುಕೊಂಡ ಚೀನಾ ಈಗ ಹೊರಜಗತ್ತಿಗೆ ಮಾರುತ್ತಿರುವ ಪಿಪಿಇ, ಟೆಸ್ಟಿಂಗ್ ಕಿಟ್ಸ್, ಮಾಸ್ಕ್ ಮುಂತಾದ ವೈದ್ಯಕೀಯ ಸಾಧನಗಳೆಲ್ಲವೂ ಕಳಪೆ ಗುಣಮಟ್ಟದವು. ಇತರ ದೇಶಗಳು ಸೋಂಕು ತಡೆಯುವಲ್ಲಿ ವಿಫಲವಾಗಲಿ ಎಂದು ಚೀನೀ ಸರ್ಕಾರ ಬಯಸುತ್ತಿರುವಂತಿದೆ. * ಜನವರಿಯಲ್ಲಿ ತನಗೆ ಒಂದು ಕೋಟಿ ಮಾಸ್ಕ್​ಗಳನ್ನು ನೀಡಿದ ಪಾಕಿಸ್ತಾನಕ್ಕೆ ಚೀನಾ ಮಾರ್ಚ್​ನಲ್ಲಿ ಕೊಟ್ಟ ಮಾಸ್ಕ್​ಗಳೂ ಕಳಪೆ, ಅವುಗಳ ಒಂದು ಭಾಗ ಹಳೆಯ ಚಡ್ಡಿಗಳಿಂದ ಮಾಡಿದ್ದು. ‘ಹಳೆಯ ಮಿತ್ರ’ನಿಗೂ ಬಗೆದ ದ್ರೋಹವಿದು. * ಚೀನಾ ರಫ್ತು ಮಾಡುತ್ತಿರುವ ವೈದ್ಯಕೀಯ ಸಾಧನಗಳು ಸೋಂಕುಪೂರಿತ ಸಹ ಎನ್ನಲಾಗುತ್ತಿದೆ. ಸೋಂಕು ಹರಡುವ ಮತ್ತೊಂದು ಪಿತೂರಿ ಇದಾಗಿರಬಹುದು.

    ಇದನ್ನೂ ಓದಿ: ಶಾಂತಿಗೆ ಮತ್ತೊಂದು ಹೆಸರು ಆನೆಗಳ ಈ ಕುಟುಂಬ!

    ಇಷ್ಟು ‘ಸಾಂರ್ದಭಿಕ ಸಾಕ್ಷ್ಯಗಳು’ ಅನುಮಾನಗಳನ್ನು ದಟ್ಟವಾಗಿಸುತ್ತವೆ. ಇವುಗಳ ಆಧಾರದ ಮೇಲೆ ನಾವು ಈ ತೀರ್ವನಗಳಿಗೆ ಬರಬಹುದು- 1) ಕರೊನಾ ಸೋಂಕು ಹೊರಬಂದದ್ದು ಚೀನೀ ಪ್ರಯೋಗಶಾಲೆಯಿಂದ. 2) ಸೋಂಕಿನ ಬಗೆಗಿನ ಎಲ್ಲ ಪ್ರಾರಂಭಿಕ ವರದಿಗಳನ್ನು ಚೀನಾ ಗುಟ್ಟಾಗಿಟ್ಟಿತು, ಅದಕ್ಕಾಗಿ ಹಿಂಸಾವಿಧಾನಗಳನ್ನು ಅನುಸರಿಸಿತು. 3) ಸೋಂಕು ಸಾಂಕ್ರಾಮಿಕವಲ್ಲ ಎಂದು ಹೇಳಿ ಹೊರಜಗತ್ತನ್ನು ಅಡ್ಡದಾರಿಗೆಳೆಯುತ್ತಲೇ ಚೀನಾ ತನ್ನಲ್ಲಿ ಮಾತ್ರ ಸೋಂಕಿನ ಪ್ರಸರಣವನ್ನು ತಡೆಯಲು ಗುಟ್ಟಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಂಡಿತು. 4) ನಂತರ, ಸೋಂಕು ಹೊರಜಗತ್ತಿನಲ್ಲಿ ವ್ಯಾಪಕವಾಗಿ ಹರಡಲು ಕಳಪೆ ಹಾಗೂ ಸೋಂಕುಪೂರಿತ ವೈದ್ಯಕೀಯ ಸಾಧನಗಳ ಮೂಲಕ ಪ್ರಯತ್ನಿಸಿತು. ರಷ್ಯಾದ ಖ್ಯಾತ ಮೈಕ್ರೋಬಯಾಲಜಿಸ್ಟ್ ಪ್ರೊ.ಪೀಟರ್ ಚುಮಕೋವ್ ಚೀನಾದ ಕುಕೃತ್ಯಗಳ ಮೂಲದ ಸುಳಿವು ನೀಡುತ್ತಾರೆ. ಬಾವಲಿಗಳಲ್ಲಿ ಕರೊನಾ ಸೋಂಕು ಲಕ್ಷಾಂತರ ವರ್ಷಗಳಿಂದಲೂ ಸ್ವಾಭಾವಿಕ ವಾಗಿಯೇ ಇದೆ ಮತ್ತು ಅದು ಮನುಷ್ಯನಿಗೆ ಹಾನಿಕಾರಕವಲ್ಲ. ಅದರ ಜಿನೋಮ್ ಸ್ವಾಭಾವಿಕ ಸರಣಿಯನ್ನು ಮಾರ್ಪಾಡುಗೊಳಿಸುವುದರ ಮೂಲಕ ಅದು ಮನುಷ್ಯನ ಜೀವಕೋಶಗಳಿಗೆ ಪ್ರವೇಶಿಸಲು ಅಂದರೆ ಮಾರಕವಾಗಲು ಸಮರ್ಥವಾಗುವಂತೆ ಚೀನೀ ಸಂಶೋಧಕರು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ. ‘ದುರುದ್ದೇಶದಿಂದೇನೂ ಇದನ್ನು ಮಾಡಿರಲಾರರು. ಇದು ಬಹುಶಃ ಎಚ್​ಐವಿ ಲಸಿಕೆ ತಯಾರಿಸುವ ಪ್ರಯತ್ನದ ಭಾಗವಾಗಿರಬಹುದು. ಆದರೂ ಚೀನೀ ಸಂಶೋಧಕರು ಮಾಡಿದ್ದು ಅಪ್ಪಟ ಹುಚ್ಚುತನ’ ಎನ್ನುತ್ತಾರೆ ಪ್ರೊ. ಚುಮಕೋವ್. ಮೇಲಿನ ಎಲ್ಲ ವಿವರಗಳು ಬೆರಳು ತೋರುವುದು ಕರೊನಾ ವೈರಸ್​ನ ‘ಉಗಮ’ ಮತ್ತು ‘ಪ್ರಸರಣ’ದ ಪ್ರತೀ ಹಂತದಲ್ಲೂ ಚೀನೀ ಕಮ್ಯೂನಿಸ್ಟ್ ಸರ್ಕಾರದ ಪಾತ್ರದತ್ತ. ಅಲ್ಲದೆ, ಚೀನಾ ಬಾವಲಿ ಕರೊನಾ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಪರಿವರ್ತಿಸುವ ಕೃತ್ಯದಲ್ಲಿ ನಿರತವಾಗಿದ್ದಿರಬಹುದು ಎಂದು ಹೇಳಲೂ ಅವಕಾಶವಾಗುತ್ತದೆ. ಆದರೆ ಈ ‘ಜೈವಿಕ ಅಸ್ತ್ರ’ದಿಂದ ಉಳಿದ ಜಗತ್ತಿನಂತೇ ಚೀನಾ ಸಹ ಸಂಕಷ್ಟ ಅನುಭವಿಸುತ್ತಿದೆಯಲ್ಲ? ಜೈವಿಕ ಅಸ್ತ್ರವನ್ನು ಚೀನಾ ತನ್ನ ಮೇಲೆ ತಾನೇ ಪ್ರಯೋಗಿಸಿಕೊಂಡಿತೇ? ಇಂತಹ ಮೂರ್ಖತನವನ್ನು ಯಾವ ದೇಶವೂ ಎಸಗುವುದಿಲ್ಲ. ತನ್ನ ವೈರಿಗಳ ವಿರುದ್ಧ ಪ್ರಯೋಗಿಸಬೇಕೆಂದು ಚೀನಾ ಸಿದ್ಧಪಡಿಸುತ್ತಿದ್ದಿರಬಹುದಾದ ಕರೊನಾ ವೈರಸ್ ಯಾರದೋ ಅಚಾತುರ್ಯದಿಂದ ಆಕಸ್ಮಿಕವಾಗಿ ಪ್ರಯೋಗಶಾಲೆಯಿಂದ ಹೊರಬಿದ್ದಿದೆ, ಅದಕ್ಕೆ ಮೊದಲ ಬಲಿ ಚೀನಾವೇ ಆಗಿದೆ, ಯಾವ ಆರ್ಥಿಕ ಬಲದಿಂದ ಚೀನಾ ಜಗತ್​ಕಂಟಕವಾಗಿ ಬೆಳೆಯಿತೋ ಆ ಅರ್ಥವ್ಯವಸ್ಥೆ ಈಗ ನೆಲಕಚ್ಚಿದೆ. ನಂತರ, ತನಗಾದ ಹಾನಿ ಇತರರಿಗೂ ಆಗಲಿ ಎಂದು ಚೀನಾ ಸೋಂಕನ್ನು ಹೊರಜಗತ್ತಿಗೆ ಹಂಚುವ ಸಂಚು ನಡೆಸಿದೆ. ಈ ಅಮಾನವೀಯ ಕೃತ್ಯಕ್ಕಾಗಿ ಚೀನೀ ಕಮ್ಯೂನಿಸ್ಟ್ ಸರ್ಕಾರಕ್ಕೆ ಶಿಕ್ಷೆಯಾಗಲೇಬೇಕು. ಆದರೆ ಈ ‘ಶಿಕ್ಷೆ’ ಚೀನೀ ಜನತೆಗಲ್ಲ ಎನ್ನುವ ಎಚ್ಚರವನ್ನೂ ಜಗತ್ತು ಹೊಂದಿರಬೇಕು. ಚೀನೀ ಕಮ್ಯೂನಿಸ್ಟ್ ಸರ್ಕಾರದ ಪೈಶಾಚಿಕ ಕೃತ್ಯಗಳಿಂದ ನಮಗಿಂತಲೂ ಹೆಚ್ಚು ನೊಂದಿರುವವರು ಚೀನೀ ಜನತೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts