More

    ಕೋವಿಡ್​ನಿಂದ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ, ನಿಮ್ಮ ಹುಷಾರಿನಲ್ಲಿ ನೀವಿರಿ

    ನವದೆಹಲಿ: ವಿಶ್ವದಾದ್ಯಂತ ಬಾಧಿಸುತ್ತಿರುವ ಕೋವಿಡ್​-19 ಸೋಂಕು ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅದು ಮತ್ತೊಂದಿಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಹುಷಾರಿನಲ್ಲಿ ತಾವಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಬುಧವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗುವುದು ನಿಶ್ಚಿತ. ಯಾವುದೋ ಒಂದು ಕಡೆ ಕರೊನಾ ವೈರಾಣು ಇದ್ದೇ ಇರುತ್ತದೆ. ಹಾಗಾಗಿ ಸದ್ಯಕ್ಕೆ ಜಗತ್ತಿನಲ್ಲಿ ಯಾವುದೇ ರಾಷ್ಟ್ರವೂ ಸುರಕ್ಷಿತವಲ್ಲ ಎಂದು ಸ್ಪಷ್ಟಪಡಿಸಿದೆ.

    ಮುಂಬರುವ ದಿನಗಳಲ್ಲಿ ಸೋಂಕು ಹೆಚ್ಚಳದ ಪರಿಸ್ಥಿತಿಗೆ ನಾವೆಲ್ಲರೂ ಸಜ್ಜಾಗಬೇಕಿದೆ. ಇದರೊಂದಿಗೆ ಬದುಕುವ ಜತೆಗೆ ಸೋಂಕಿಗೆ ತುತ್ತಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಒಳಿತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್​ನ ಪ್ರಾದೇಶಿಕ ನಿರ್ದೇಶಕ ಡಾ. ತಾಕೇಸಿ ಕಸಾಯ್​ ಹೇಳಿದ್ದಾರೆ.

    ಇದನ್ನೂ ಓದಿ: ಎಲ್ಲೆಂದರಲ್ಲಿ ಪಿಪಿಇ ಕಿಟ್​ ಬಿಸಾಡಿದ್ರೆ ಕಠಿಣ ಕ್ರಮ; ಶ್ರೀರಾಮುಲು

    ಅಮೆರಿಕದಲ್ಲಿ ಒಂದೇ ದಿನ ಗರಿಷ್ಠ 47 ಸಾವಿರ ಸೋಂಕಿತರು ಕಂಡಬಂದಿದ್ದರು. ಮಂಗಳವಾರದ ಈ ಮಾಹಿತಿಯ ಪ್ರಕಾರ ಕ್ಯಾಲಿಫೋರ್ನಿಯಾ, ಟೆಕ್ಸಾಸ್​ ಮತ್ತು ಆರಿಜೋನಾದಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

    ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ದಿನಕ್ಕೆ 1 ಲಕ್ಷ ತಲುಪುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ.

    ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts