More

    ಮಹಾರಾಷ್ಟ್ರದಲ್ಲಿ ಸಮುದಾಯ ಹರಡುವಿಕೆ ಇಲ್ಲ :ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟನೆ

    ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ 19 ಸಮುದಾಯ ಹರಡುವಿಕೆ ಇಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಗುರುವಾರ ಸ್ಪಷ್ಟಪಡಿಸಿದ್ದಾರೆ.
    ರಾಜ್ಯದ ಸೋಂಕು ಪ್ರಕರಣಗಳಲ್ಲಿ ಹೆಚ್ಚಿನವರು ಸಾಂಸ್ಥಿಕ ಕ್ವಾರಂಟೈನ್, ಹೋಮ್ ಕ್ವಾರಂಟೈನ್ ನಲ್ಲಿರುವವರ ಅಥವಾ ಕೆಲವು ಸಂಪರ್ಕ ಇತಿಹಾಸವನ್ನು ಹೊಂದಿದವರಾಗಿದ್ದು, ಈ ಕಾರಣ ಸದ್ಯ ರಾಜ್ಯದಲ್ಲಿ ಸಮುದಾಯ ಹರಡುವಿಕೆ ಇಲ್ಲ ಎಂದು ಹೇಳಿದ್ದಾರೆ.
    ಕರೊನಾವೈರಸ್ ವಿರುದ್ಧ ಹೋರಾಡುವಲ್ಲಿ ಪ್ಲಾಸ್ಮಾ ಚಿಕಿತ್ಸೆಯು ಪರಿಣಾಮಕಾರಿಯಾಗಿದ್ದು, ಈ ಚಿಕಿತ್ಸೆಯ ಮೂಲಕ 10 ರೋಗಿಗಳಲ್ಲಿ ಒಂಬತ್ತು ಮಂದಿ ಚೇತರಿಸಿಕೊಳ್ಳುತ್ತಿದ್ದು, ಒಟ್ಟು 93,000 ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಗೂಗಲ್ ಪ್ಲೇ ಸ್ಟೋರ್​​ ನಿಂದ 59 ಚೀನಿ ಆ್ಯಪ್ ಗಳು ಔಟ್


    “ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೆಮ್ಡೆಸಿವಿರ್ ಮತ್ತು ಫವಿಪಿರಾವೀರ್ ಎರಡೂ ಔಷಧಿಗಳು ಎಲ್ಲರಿಗೂ ಲಭ್ಯವಿರುತ್ತವೆ ಎಂದು ಟೊಪೆ ತಿಳಿಸಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರ ಸಚಿವ ವಿಜಯ್ ವಾಡೆಟ್ಟಿವರ್ ರಾಜ್ಯವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿಕೊಂಡಿದ್ದು, ‘ಮುಂದಿನ ತಿಂಗಳು 3-4 ಇಲಾಖೆಗಳನ್ನು ಹೊರತುಪಡಿಸಿ ಸರ್ಕಾರಿ ನೌಕರರ ವೇತನವನ್ನು ಪಾವತಿಸಲು ಸಾಲ ತೆಗೆದುಕೊಳ್ಳಬೇಕಾಗುತ್ತದೆ, ಇತರ ಇಲಾಖೆಗಳಲ್ಲಿ ಖರ್ಚುಗಳನ್ನು ಕಡಿತಗೊಳಿಸಲಾಗಿದೆ. ನಾವು ಕೇಂದ್ರದಿಂದ ನಿಧಿಯನ್ನು ಸ್ವೀಕರಿಸಿದ್ದೇವೆ ಎಂದು ಕೆಲವು ನಾಯಕರು ಹೇಳಿದ್ದಾರೆ. ಆದರೆ ನಾವು ಕೇಂದ್ರದಿಂದ ಯಾವುದೇ ನಿಧಿಯನ್ನು ಸ್ವೀಕರಿಸಿಲ್ಲ ಆದಾಗ್ಯೂ, ರಾಜ್ಯದಲ್ಲಿ ಕೋವಿಡ್ 19 ಎದುರಿಸಲು ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಮ್ಯಾನ್ಮಾರ್​ನ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆಯೇ ಚೀನಾ?


    ದೇಶದಲ್ಲಿ COVID-19 ಪೀಡಿತ ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಗುರುವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪ್ರಕಟಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ COVID-19 ಪ್ರಕರಣಗಳು 79,000 ಕ್ಕಿಂತ ಹೆಚ್ಚು.ಇಲ್ಲಿಯವರೆಗೆ 93,000 ಕ್ಕೂ ಹೆಚ್ಚು ಜನರನ್ನು ಗುಣಪಡಿಸಿ ಬಿಡುಗಡೆ ಮಾಡಲಾಗಿದ್ದರೆ, 8,053 ಜನ ಈ ಕಾಯಿಲೆಗೆ ಬಲಿಯಾಗಿದ್ದಾರೆ. ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ರಾಜ್ಯ ಸರ್ಕಾರವು ಜುಲೈ 31 ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಿದೆ. ಇದಕ್ಕೂ ಮೊದಲು ಜೂನ್ 30 ರಂದು ಲಾಕ್​ಡೌನ್ ಸಡಿಲಿಸಲು ನಿರ್ಧರಿಸಲಾಗಿತ್ತು. 

    ವೈದ್ಯರಿಗೆ ವರ್ಷಾಂತ್ಯದವರೆಗೂ ವಿಮಾನದಲ್ಲಿ ರಿಯಾಯಿತಿ ನೀಡಿದ ಇಂಡಿಗೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts