More

    ಮ್ಯಾನ್ಮಾರ್​ನ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆಯೇ ಚೀನಾ?

    ನವದೆಹಲಿ: ಇದುವರೆಗೂ ಶತ್ರ ರಾಷ್ಟ್ರಗಳ ಜತೆ ಕಾಲು ಕೆರೆದು ಜಗಳ ತೆಗೆಯುತ್ತಿದ್ದ ಚೀನಾ ಇದೀಗ ಪರಮಾಪ್ತ ರಾಷ್ಟ್ರದ ಬೆನ್ನಿಗೇ ಚೂರಿ ಇರಿಯುವ ಕೃತ್ಯ ಎಸಗಿತಾ ಎಂಬ ಶಂಕೆ ಮೂಡಲಾರಂಭಿಸಿದೆ. ಚೀನಾದ ಪರಮಾಪ್ತ ರಾಷ್ಟ್ರ ಮ್ಯಾನ್ಮಾರ್​ನಲ್ಲಿ ಹಲವು ಭಯೋತ್ಪಾದನಾ ಸಂಘಟನೆಗಳಿವೆ. ಈ ಸಂಘಟನೆಗಳ ಸದಸ್ಯರಿಗೆ ಚೀನಾ ಶಸ್ತ್ರಾಸ್ತ್ರ ಪೂರೈಸಿ ತನ್ನ ಆಂತರಿಕ ಭದ್ರತೆಗೆ ಸಂಚಕಾರ ತರುತ್ತಿರುವುದಾಗಿ ಮ್ಯಾನ್ಮಾರ್​ ಆರೋಪಿಸಿದೆ.

    ರಷ್ಯಾದ ಟಿವಿ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿರುವ ಮ್ಯಾನ್ಮಾರ್​ನ ಸೀನಿಯರ್​ ಜನರಲ್​ ಔಂಗ್​ ಲ್ಹಾಯಿಂಗ್​, ಮ್ಯಾನ್ಮಾರ್​ನಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಬಲಿಷ್ಠ ರಾಷ್ಟ್ರವೊಂದರ ಬೆಂಬಲ ದೊರೆಯುತ್ತಿದೆ. ಆದ್ದರಿಂದ, ಆ ಗುಂಪುಗಳನ್ನು ಹತ್ತಿಕ್ಕಲು ಜಾಗತಿಕ ಶಕ್ತಿಗಳು ಮ್ಯಾನ್ಮಾರ್​ಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಒಂದೇ ಗುಂಡಿಗೆ 9 ಶವ ಎಸೆದು ಅಂತ್ಯಸಂಸ್ಕಾರ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ!

    ಮ್ಯಾನ್ಮಾರ್​ನಲ್ಲಿ ಅರಕಾನ್​ ಆರ್ಮಿ (ಎಎ) ಮತ್ತು ಅರಕಾನ್​ ರೋಹಿಂಗ್ಯಾ ಸಾಲ್ವೇಷನ್​ ಆರ್ಮಿ (ಎಆರ್​ಎಸ್​ಎ) ಎಂಬ ಭಯೋತ್ಪಾದನಾ ಸಂಘಟನೆಗಳು ರಾಖೈನ್​ ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. 2019ರಲ್ಲಿ ನೆಲಬಾಂಬ್​ ದಾಳಿ ನಡೆಸಿದ್ದ ಎಎ ಉಗ್ರ ಸಂಘಟನೆಗಳ ಮೇಲೆ ದಾಳಿ ನಡೆಸಿದಾಗ ಅವರ ಬಳಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

    ಚೀನಾ ವಿರುದ್ಧ ಮ್ಯಾನ್ಮಾರ್​ ಈ ರೀತಿಯ ಆರೋಪ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗೆಂದು ಈ ರೀತಿಯ ಆರೋಪ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಮ್ಯಾನ್ಮಾರ್​ ಆಡಳಿತಗಾರರು ಚೀನಾ ವಿರುದ್ಧ ಇಂಥ ಆರೋಪಗಳನ್ನೂ ಮಾಡಿದ್ದಾರೆ. ಆದರೆ ಈ ಬಾರಿ ಭಾರತದೊಂದಿಗೆ ಚೀನಾ ಲಡಾಖ್​ ಬಳಿ ಘರ್ಷಣೆಗೆ ಮುಂದಾಗಿರುವ ಸಂದರ್ಭದಲ್ಲೇ ಮ್ಯಾನ್ಮಾರ್​ ಇಂಥ ಆರೋಪ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಭಾರತೀಯ ರೈಲ್ವೆ ಇತಿಹಾಸದಲ್ಲೇ ಗಮನಾರ್ಹ ಸಾಧನೆ ಮಾಡಿದೆ.. ಅದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts