More

    ಮಂಗ್ಳೂರು ಏರ್​ಪೋರ್ಟ್​ನ ಕ್ಯಾಬಿನ್​ ಲಗೇಜ್​ನಲ್ಲಿ ಒಂದೇ ಒಂದು ತುಂಡು ತೆಂಗಿನಕಾಯಿಗೂ ಜಾಗವಿಲ್ಲ!

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಹೊಣೆಯನ್ನು ಹೊತ್ತಿರುವ ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ (ಸಿಐಎಸ್​ಎಫ್​) ವಿಮಾನದ ಕ್ಯಾಬಿನ್​ ಲಗೇಜ್​ನಲ್ಲಿ ತೆಂಗಿನಕಾಯಿ ಸಾಗಾಟ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ. ಪ್ರಸಾದದ ರೂಪದಲ್ಲಿ ನೀಡಲಾದ ಒಂದೇ ಒಂದು ಚೂರು ತೆಂಗಿನಕಾಯಿಯನ್ನೂ ಸಹ ಬ್ಯಾಗೇಜ್​ನಲ್ಲಿ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಮತ್ತು ಅದನ್ನು ಚೆಕ್ಡ್​-ಇನ್ ಸಾಮಾನುಗಳಲ್ಲಿ ಸಾಗಿಸಬೇಕು ಎಂದು ತಿಳಿಸಿದೆ.

    ವಿಮಾನಗಳಲ್ಲಿ ತೆಂಗಿನಕಾಯಿಯನ್ನು ಸಾಗಿಸಲು ಸ್ಪಷ್ಟ ಮಾರ್ಗಸೂಚಿಗಳ ಹೊರತಾಗಿಯೂ, ದೇವಸ್ಥಾನಗಳಲ್ಲಿ ಪ್ರಸಾದವಾಗಿ ಸಿಗುವ ತೆಂಗಿನಕಾಯಿ ವಿಷಯಕ್ಕೆ ಬಂದಾಗ ಪ್ರಯಾಣಿಕರು ಗೊಂದಲಕ್ಕೆ ಸಿಲುಕುತ್ತಿದ್ದಾರೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಮಾರ್ಗಸೂಚಿಗಳ ಪ್ರಕಾರ, ಕೊಬ್ಬರಿ ಅಥವಾ ತೆಂಗಿನಕಾಯಿ ಪುಡಿಯನ್ನು ಹೊರತುಪಡಿಸಿ, ಉಳಿದವುಗಳನ್ನು ಚೆಕ್-ಇನ್ ಲಗೇಜ್‌ನಲ್ಲಿ ಕೊಂಡೊಯ್ಯಬೇಕು. ಆದರೆ, ದೇವಸ್ಥಾನಗಳಲ್ಲಿ ಪ್ರಸಾದವಾಗಿ ಕೊಡುವ ಅರ್ಧಕ್ಕೆ ಒಡೆದ ತೆಂಗಿನಕಾಯಿಯನ್ನು ಕೊಂಡೊಯ್ಯುವ ವಿಚಾರದಲ್ಲಿ ಗೊಂದಲ ಉಂಟಾಗಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಐಎಸ್‌ಇಯ ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್​ನ, ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮತ್ತು ಹಿರಿಯ ಕಮಾಂಡೆಂಟ್ ವಿರೇಂದ್ರ ಮೋಹನ್ ಜೋಶಿ, ಕಳೆದ ವರ್ಷ ವಿಮಾನದ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಕಾಣಿಕೆಗಳನ್ನು ಒಳಗೊಂಡಿರುವ ಇರುಮುಡಿ ಕಟ್ಟುಗಳನ್ನು ಸಾಗಿಸಲು ಬಿಸಿಎಎಸ್ ಸೀಮಿತ ಅನುಮತಿಯನ್ನು ನೀಡಿದೆ ಎಂದು ತಿಳಿಸಿದರು.

    ಆದಾಗ್ಯೂ, ಇದನ್ನು ಶಬರಿಮಲೆ ಸೀಸನ್​ನಲ್ಲಿ ಮಾತ್ರ ಅನುಮತಿಸಲಾಗಿದೆ. ಉಳಿದ ಸಮಯದಲ್ಲಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಯಾವುದೇ ರೀತಿಯ ತೆಂಗಿನಕಾಯಿಯನ್ನು ಅನುಮತಿಸುವುದಿಲ್ಲ, ಅದು ಪ್ರಸಾದವಾಗಿದ್ದರೂ ಸಹ. ನಿಯಮ ಮೀರಿ ಯಾವುದೇ ಪ್ರಯಾಣಿಕರು ಅದನ್ನು ಸಾಗಿಸಿದರೆ, ಭದ್ರತಾ ಗೇಟ್‌ನಲ್ಲಿ ಇರಿಸಲಾದ ನಿರ್ಬಂಧಿತ ವಸ್ತುಗಳನ್ನು ಎಸೆಯುವ ಗಾಜಿನ ಪೆಟ್ಟಿಗೆಯಲ್ಲಿ ಅದನ್ನು ಎಸೆಯಲು ಸೂಚಿಸಲಾಗಿದೆ. ಕ್ಯಾಬಿನ್ ಸಾಮಾನುಗಳಲ್ಲಿ ತೆಂಗಿನಕಾಯಿಯನ್ನು ಅನುಮತಿಸದಿರುವುದು ಕಟ್ಟುನಿಟ್ಟಾದ ಭದ್ರತಾ ನಿಯಮವಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿ ತಿಳಿಸಿದರು. ಕೊಬ್ಬರಿ ಅಥವಾ ಒಣ ತೆಂಗಿನಕಾಯಿ ದಹನಕಾರಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ವಿಮಾನಗಳಲ್ಲಿ ಅನುಮತಿಸಲಾಗುವುದಿಲ್ಲ.

    ಇದೇ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಮಾತನಾಡಿದ್ದು, ಸಹ ಪ್ರಯಾಣಿಕರೊಬ್ಬರು ಪ್ರಸಾದದ ರೂಪದಲ್ಲಿ ತೆಂಗಿನಕಾಯಿ ಸಾಗಿಸುತ್ತಿದ್ದರು. ಅವರನ್ನು ತಡೆದು ತೆಂಗಿನಕಾಯಿಯನ್ನು ಗಾಜಿನ ಬಾಕ್ಸ್​ ಒಳಗೆ ಬೀಸಾಡುವಂತೆ ಕೇಳಿದರು. ಇದು ಪ್ರಸಾದ, ಪವಿತ್ರ ಎಂದು ಪರಿಗಣಿಸುವಂತೆ ಕೇಳಿದರೂ ಬಿಡಲಿಲ್ಲ. ಗಾಜಿನ ಬಾಕ್ಸ್​ ಒಳಗೆ ಎಸೆಯಲು ಹೇಳಿದರು ಎಂದಿದ್ದಾರೆ. (ಏಜೆನ್ಸೀಸ್​)

    ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ: ಹೌಥಿ ಉಗ್ರರ 36 ನೆಲೆಗಳ ಮೇಲೆ ಯುಎಸ್​-ಯುಕೆ ಜಂಟಿ ದಾಳಿ

    ಗಾಂಧಿ ಕೊಂದು ದೇಶ ಉಳಿಸಿದ ಗೋಡ್ಸೆ ಬಗ್ಗೆ ಹೆಮ್ಮೆಯಿದೆ ಎಂದ NET ಪ್ರೊಫೆಸರ್​ಗೆ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts