More

    ತೆಂಗಿನಕಾಯಿ ಹಣ್ಣೋ ಅಥವಾ ತರಕಾರಿಯೋ? ಇಲ್ಲಿದೆ ಉತ್ತರದ ಜತೆಗೆ ವಿವರಣೆ…

    ಹಸಿ ತೆಂಗಿನಕಾಯಿ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ಇದು ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಇದರಲ್ಲಿರುವ ಆಯುರ್ವೇದ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳನ್ನು ಶಾಶ್ವತವಾಗಿ ಸಹ ಕಡಿಮೆ ಮಾಡುತ್ತದೆ.

    ತೆಂಗಿನಕಾಯಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೂಜೆಯಿಂದ ಹಿಡಿದು ಅಡುಗೆವರೆಗೂ ತೆಂಗಿನಕಾಯಿ ಬೇಕೆ ಬೇಕು. ತೆಂಗಿನಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ತೆಂಗಿಕಾಯಿ ಹಣ್ಣೋ? ಅಥವಾ ತರಕಾರಿಯೋ ಎಂದು ಕೇಳಿದರೆ ಬಹುತೇಕರಿಗೆ ತಿಳಿದಿಲ್ಲ.

    ತೆಂಗಿನಕಾಯಿ ಹಣ್ಣು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದರ ಹೆಸರಿನಲ್ಲಿ “ಕಾಯಿ” ಎಂಬ ಪದವನ್ನು ಹೊಂದಿದ್ದರೂ ಸಹ ತೆಂಗಿನಕಾಯಿ ಒಂದು ಹಣ್ಣು ಹೊರತು ಕಾಯಿ ಅಥವಾ ತರಕಾರಿಯಲ್ಲ. ವಾಸ್ತವವಾಗಿ ತೆಂಗಿನಕಾಯಿಯು ಡ್ರೂಪ್ಸ್ ಎಂದು ಕರೆಯಲ್ಪಡುವ ಉಪವರ್ಗದ ಅಡಿಯಲ್ಲಿ ಬರುತ್ತದೆ. ಇದು ಗಟ್ಟಿಯಾದ ಚಿಪ್ಪಿನಿಂದ ಸುತ್ತುವರಿದ ಆಂತರಿಕ ತಿರುಳು ಮತ್ತು ಬೀಜವನ್ನು ಹೊಂದಿರುವ ಹಣ್ಣುಗಳು ಎಂದು ವ್ಯಾಖ್ಯಾನಿಸಲಾಗಿದೆ.

    ಪೀಚ್, ಪೇರಳೆ, ವಾಲ್​ನಟ್ಸ್ ಮತ್ತು ಬಾದಾಮಿಗಳಂತಹ ವಿವಿಧ ಹಣ್ಣುಗಳ ವರ್ಗದ ಅಡಿಯಯಲ್ಲಿ ತೆಂಗಿನಕಾಯಿಯು ಸಹ ಬರುತ್ತದೆ.

    ತೆಂಗಿನಕಾಯಿ ಆರೋಗ್ಯಕರ ಲಾಭಗಳು
    ದೇಹದ ತೂಕ ಕಡಿಮೆ: ಪ್ರತಿ ದಿನ ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ತೂಕ ಸುಲಭವಾಗಿ ಹೆಚ್ಚಾಗುತ್ತದೆ. ವಿಶೇಷವಾಗಿ ಯುವಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿ ಕೊಬ್ಬರಿ ಅಥವಾ ತೆಂಗಿನಕಾಯಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದರೊಂದಿಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

    ರೋಗನಿರೋಧಕ ಶಕ್ತಿ ಹೆಚ್ಚಳ: ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯಿಂದ ಅನೇಕ ಜನರು ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಅಂತಹವರು ಹಸಿ ತೆಂಗಿನಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಈ ಕೊರತೆಯನ್ನು ಸುಲಭವಾಗಿ ಹೋಗಲಾಡಿಸಬಹುದು. ತೆಂಗಿನಕಾಯಿಯಲ್ಲಿ ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಆದ್ದರಿಂದ ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹವನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ.

    ಉತ್ತಮ ಜೀರ್ಣಕ್ರಿಯೆ: ಹಸಿ ತೆಂಗಿನಕಾಯಿಯು ಆ್ಯಂಟಿವೈರಲ್ ಮತ್ತು ಆ್ಯಂಟಿಫಂಗಲ್ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆಗಳನ್ನು ಸಹ ಸುಲಭವಾಗಿ ನಿವಾರಿಸಬಹುದು. ಇದನ್ನು ಪ್ರತಿದಿನ ತಿನ್ನುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಮಲಬದ್ಧತೆ ಮತ್ತು ಇತರ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

    ಹೃದಯವನ್ನು ಆರೋಗ್ಯಕರವಾಗಿಸುತ್ತದೆ: ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ಆಧುನಿಕ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಹಸಿ ಕೊಬ್ಬರಿ ಸೇವನೆಯಿಂದ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಇದರೊಂದಿಗೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವೂ ಸುಲಭವಾಗಿ ಕಡಿಮೆಯಾಗುತ್ತದೆ. (ಏಜೆನ್ಸೀಸ್​)

    ಪಪ್ಪಾಯಿ ಎಲೆಯ ಜ್ಯೂಸ್​… ಇದರ​ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ!

    ಬಾಯಿ ಕೆಟ್ಟು ರುಚಿ ಇಲ್ಲದಂತಾದಾಗ ಈ ರೆಸಿಪಿ ಮಾಡಿ ನೋಡಿ! ಒಂದು ತುತ್ತು ಹೆಚ್ಚಿಗೆ ಊಟ ಮಾಡ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts