More

    ಬ್ಲ್ಯಾಕ್​ಬಾಕ್ಸ್​ನಲ್ಲೂ ಪತ್ತೆಯಾಗಲಿಲ್ಲ ಬೋಯಿಂಗ್​ 737 ವಿಮಾನ ದುರಂತಕ್ಕೆ ಕಾರಣ!

    ಬೀಜಿಂಗ್​​​: ಸಾಮಾನ್ಯವಾಗಿ ವಿಮಾನ ದುರಂತಗಳು ಸಂಭವಿಸಿದಾಗ ಘಟನೆಗೆ ಕಾರಣ ಏನಿರಬಹುದೆಂದು ವಿಮಾನದ ಬ್ಲ್ಯಾಕ್​ಬಾಕ್ಸ್​​ ನಿಂದ ಪತ್ತೆಹಚ್ಚಲಾಗುತ್ತದೆ. ಇದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿ ಬ್ಲ್ಯಾಕ್​ಬಾಕ್ಸ್​ನಲ್ಲಿ ದುರಂತ ಹೇಗಾಯಿತೆಂಬ ಸುಳಿವೇ ಇಲ್ಲ ಎಂದು ಚೀನಾ ತಿಳಿಸಿದೆ.

    ಮಾರ್ಚ್ 21 ರಂದು ಬೋಯಿಂಗ್ 737 ವಿಮಾನ ಭೀಕರ ದುರಂತದಲ್ಲಿ 132 ಮಂದಿ ಮೃತಪಟ್ಟಿದ್ದರು. ಈ ವೇಳೆ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಆದರೆ ವಿಮಾನ ಅಪಘಾತಕ್ಕೀಡಾಗಲು ಕಾರಣ ಏನು ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ಯಾವ ಮಾಹಿತಿಯೂ ದಾಖಲಾಗಿಲ್ಲ ಎಂದು ಚೀನಾ ನಾಗರಿಕ ವಿಮಾನಯಾನ ಸಂಸ್ಥೆ ಹೇಳಿದೆ.

    ಕಳೆದೆರಡು ದಶಕದ ಹಿಂದೆ ಪದೇ ಪದೇ ವಿಮಾನ ದುರಂತಗಳು ಸಂಭವಿಸುತ್ತಿದ್ದರಿಂದ ವಿಮಾನಯಾನದ ಸುರಕ್ಷತೆಯಲ್ಲಿ ಚೀನಾ ಭಾರೀ ಬದಲಾವಣೆಯನ್ನು ಮಾಡಿಕೊಂಡಿತ್ತು. 2010ರ ನಂತರ ಸಂಭವಿಸಿದ ಮೊದಲ ದುರಂತ ಇದಾಗಿದೆ.
    ಸದ್ಯ ಬೋಯಿಂಗ್ ವಿಮಾನ ಹಾರಾಟ ನಡಸುತ್ತಿದ್ದಾಗಲ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಮೇಲೆ ಹಾರಾಡುತ್ತಿದ್ದ ವಿಮಾನ ಏಕಾಏಕಿ ಕೆಳಗೆ ಅಪ್ಪಳಿಸಿರುವುದ ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಈಗ ತಲೆಕೆಡಿಸಿಕೊಂಡಿದ್ದಾರೆ.

    ಉಚಿತ ಪೆಟ್ರೋಲ್ ಗಾಗಿ ಮುಗಿಬಿದ್ದ ಬೈಕ್ ಸವಾರರು!

    ಪಿಎಸ್​ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ಚುರುಕು: ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts