More

    ಶಾಲಾ ಆವರಣದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿಲ್ಲ

    ಮೇಲುಕೋಟೆ: ಹೋಬಳಿಯ ಬಳಿಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ ಯಾರೂ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಎಚ್.ಕೆ.ಕವಿತಾ ಅವರು, ಕಿಡಿಗೇಡಿಗಳು ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿ ಇಲಾಖಾಧಿಕಾರಿಗಳಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಯಾರೋ ಸುಳ್ಳು ಸುದ್ದಿ ಮಾಡಿದ ಪರಿಣಾಮ ಕ್ಷೇತ್ರ ಶಿಕ್ಷಣಾಧಿಕಾರಿ, ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ಸಮಯ ವ್ಯರ್ಥ ಮಾಡಬೇಕಾಗಿ ಬಂದಿದೆ. ಇದರೊಂದಿಗೆ ಶಾಲಾ ಶಿಕ್ಷಕರ ಸಮಯವೂ ಹಾಳಾಗಿದೆ. ಸುಳ್ಳು ವದಂತಿಯ ಪರಿಣಾಮ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಚಾರಿ ಚಂದ್ರಶೇಖರ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ನೀಡಿರುವ ಕರ ನಿರ್ಧರಣಾ ಪತ್ರದಲ್ಲಿರುವಂತೆ ಶಾಲೆಯ ಅಳತೆ ಮಾಡಿದ್ದಾರೆ. ಶಾಲೆಗೆ ಸೇರಿದ ಒಂದಿಂಚೂ ಜಾಗ ಒತ್ತವರಿಯಾಗಿಲ್ಲ. ಶಾಲೆಗೆ ಸೇರಿದ ಸ್ಥಳದಲ್ಲಿ ಯಾರೂ ಅಕ್ರಮ ಕಟ್ಟಡ ನಿರ್ಮಿಸಿಲ್ಲ. ಕಟ್ಟಡ ಕಾಮಗಾರಿ ಮಾಡುತ್ತಿರುವವರು ತಮ್ಮ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬಳಿಘಟ್ಟ ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಈ ವಿಚಾರ ತಿಳಿದೊಡನೆ ಮೇಲುಕೋಟೆ ಹೋಬಳಿ ಬಳಿಘಟ್ಟ ಸರ್ಕಾರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಖ್ಯಶಿಕ್ಷಕ ಸೋಮಶೇಖರ್ ಸೇರಿದಂತೆ ಸಂಬಂಧಪಟ್ಟವರ ಸಮಕ್ಷಮ ಜಾಗ ಅಳತೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಕರನಿರ್ಧರಣ ಪಟ್ಟಿಯಂತೆ ಶಾಲಾ ಅಳತೆ ಸರಿ ಹೊಂದುತ್ತದೆ. ಶಾಲಾ ಆವರಣದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿರುವುದು ಕಂಡುಬಂದಿಲ್ಲ ಎಂದು ಶಾಲೆಗೆ ಭೇಟಿ ನೀಡಿದವರು ವರದಿ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸಿದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts