More

    ಜಿಲ್ಲೆಯಲ್ಲಿಲ್ಲ ಬೆಡ್ ಕೊರತೆ

    ಕಾರವಾರ: ಉತ್ತರ ಕನ್ನಡ ಕೋವಿಡ್ ಹರಡುವಿಕೆಯಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಆದರೂ ವಿವಿಧೆಡೆ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿದೆ. ಆಕ್ಸಿಜನ್ ವ್ಯವಸ್ಥೆಯೂ ಇದೆ. ಬೇಸರದ ಸಂಗತಿ ಎಂದರೆ ವೆಂಟಿಲೇಟರ್ ಹಾಗೂ ಐಸಿಯು ಬೆಡ್​ಗಳು ಮಾತ್ರ ಲಭ್ಯವಿಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ತೋರಿಸುತ್ತಿದ್ದರೂ ಅಲ್ಲಿ ಅದನ್ನು ನಿರ್ವಹಿಸಲು ತಜ್ಞರಿಲ್ಲ.

    ಜಿಲ್ಲೆಯಲ್ಲಿ ಸದ್ಯ 7076 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಹೆಚ್ಚಿನ ಜನರು ಎಂದರೆ 6656 ಜನ ಹೋಂ ಐಸೋಲೇಶನ್​ನಲ್ಲಿಯೇ ಇದ್ದಾರೆ. ಇದರಿಂದ ಕೋವಿಡ್ ಬೆಡ್​ಗಳು ಲಭ್ಯವಿವೆ. ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ 1109 ಬೆಡ್​ಗಳು ಕೋವಿಡ್ ರೋಗಿಗಳಿಗಾಗಿ ಮೀಸಲಿದ್ದು, ಅದರಲ್ಲಿ 528 ಮಾತ್ರ ಭರ್ತಿಯಾಗಿವೆ. 581 ಬೆಡ್​ಗಳು ಖಾಲಿ ಇವೆ.

    ಜಿಲ್ಲೆಯ ಕೋವಿಡ್-10 ಬೆಡ್ ಪರಿಸ್ಥಿತಿ (ಖಾಸಗಿ ಆಸ್ಪತ್ರೆಗಳೂ ಸೇರಿವೆ)

    • ಮೀಸಲಿಟ್ಟ ಒಟ್ಟು ಬೆಡ್​ಗಳು – 1109
    • ಸಾಮಾನ್ಯ ಬೆಡ್​ಗಳು-462
    • ಆಕ್ಸಿಜನ್ ಬೆಡ್​ಗಳು-569
    • ವೆಂಟಿಲೇಟರ್ ಇರುವ ಐಸಿಯು ಬೆಡ್​ಗಳು-65
    • ವೆಂಟಿಲೇರ್ ಇಲ್ಲದ ಐಸಿಯು ಬೆಡ್​ಗಳು-29
    • ಭರ್ತಿಯಾದ ಒಟ್ಟು ಬೆಡ್​ಗಳು-528
    • ಭರ್ತಿಯಾದ ಸಾಮಾನ್ಯ ಬೆಡ್​ಗಳು-200
    • ಭರ್ತಿಯಾದ ಆಕ್ಸಿಜನ್ ಬೆಡ್​ಗಳು-292
    • ಭರ್ತಿಯಾದ ವೆಂಟಿಲೇಟರ್ ಐಸಿಯು ಬೆಡ್​ಗಳು-17
    • ಭರ್ತಿಯಾದ ವೆಂಟಿಲೇಕರ್ ಇಲ್ಲದ ಐಸಿಯು ಬೆಡ್​ಗಳು-19
    • ಖಾಲಿ ಇರುವ ಒಟ್ಟು ಬೆಡ್​ಗಳು-581
    • ಖಾಲಿ ಇರುವ ಸಾಮಾನ್ಯ ಬೆಡ್​ಗಳು-262
    • ಖಾಲಿ ಇರುವ ಆಕ್ಸಿಜನ್ ಬೆಡ್​ಗಳು-261
    • ಖಾಲಿ ಇರುವ ವೆಂಟಿಲೇಟರ್ ಐಸಿಯು ಬೆಡ್​ಗಳು-48
    • ಖಾಲಿ ಇರುವ ವೆಂಟಿಲೇಕರ್ ಇಲ್ಲದ ಐಸಿಯು ಬೆಡ್​ಗಳು-10

    ಸಹಾಯವಾಣಿ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಲಭ್ಯವಿರುವ ಬಡ್​ಗಳ ಮಾಹಿತಿ ಪಡೆಯಲು ಜಿಲ್ಲಾಡಳಿತದ ವೆಬ್​ಸೈಟ್​ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ವೆಬ್​ಸೈಟ್​ನಲ್ಲಿ ಅದಕ್ಕಾಗಿ ಡ್ಯಾಷ್ ಬೋರ್ಡ್ ಇದೆ. ಅಷ್ಟೇ ಅಲ್ಲದೆ, ಜಿಲ್ಲಾಡಳಿತದ ಕೋವಿಡ್ ಸಹಾಯವಾಣಿ 1077 ಗೂ ಸಂಪರ್ಕ ಮಾಡಿ ಬೆಡ್ ಮಾಹಿತಿ ಪಡೆಯಬಹುದು.

    ಸಾಮಾನ್ಯ ಬೆಡ್ ಮಾತ್ರ ಲಭ್ಯ: ಕ್ರಿಮ್ಸನಲ್ಲಿ ಸಾಮಾನ್ಯ 93, ವಿಶೇಷ ಆಮ್ಲಜನಕ ವ್ಯವಸ್ಥೆ (ಎಚ್​ಎಫ್​ಎನ್​ಸಿ) 11 ಬೆಡ್​ಗಳು ಲಭ್ಯವಿವೆ. ವೆಂಟಿಲೇರ್ ಹಾಗೂ ಆಮ್ಲಜನಕ ಬೆಡ್​ಗಳು ಲಭ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts