More

    ಪಟಾಕಿ ಹೊಡೆಯಿರಿ, ರಾಮ ಬಂದಿದ್ದನ್ನು ಸಂಭ್ರಮಿಸಿ! ಪಟಾಕಿ ಬ್ಯಾನ್​ ಮಾಡಲಾಗದು ಎಂದು ಸಿಎಂ

    ಅಯೋಧ್ಯೆ: ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ಹೆಚ್ಚಳವಾಗಿದೆ. ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸದಿರುವುದು ಒಳ್ಳೆಯದು. ಈ ವರ್ಷದ ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಅದೇ ನಿಟ್ಟಿನಲ್ಲಿ ಹಲವು ರಾಜ್ಯ ಸರ್ಕಾರಗಳು ಕೂಡ ಪಟಾಕಿಗೆ ನಿರ್ಬಂಧ ಹೇರಿವೆ. ಆದರೆ ಈ ರಾಜ್ಯದಲ್ಲಿ ಪಟಾಕಿಗೆ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿಬಿಟ್ಟಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಿ ಎಂದು ಸ್ವತಃ ಮುಖ್ಯಮಂತ್ರಿಯೇ ಕರೆ ನೀಡಿದ್ದಾರೆ.

    ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು, ಜಿಲ್ಲಾಡಳಿತ ಭವನದ ಎದುರು ಅಂಗನವಾಡಿ ನೌಕರರ ಪ್ರತಿಭಟನೆ

    ಮಧ್ಯಪ್ರದೇಶದಲ್ಲಿ ಪಟಾಕಿ ಬ್ಯಾನ್​ ಇಲ್ಲ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ಚೀನಾದ ಪಟಾಕಿಯನ್ನು ಸಿಡಿಸಬೇಡಿ. ನಾವು ಎಂದಿಗೂ ಸಂತೋಷವನ್ನು ನಿರ್ಬಂಧಿಸಲಾಗದು. ಭಗವಾನ್​ ಶ್ರೀ ರಾಮ ಅಯೋಧ್ಯೆಗೆ ಮರಳಿದ್ದಾನೆ. ಹಾಗಾಗಿ ಲಘು ಪಟಾಕಿ ಸಿಡಿಸಿ ಮತ್ತು ಈ ವರ್ಷದ ದೀಪಾವಳಿಯನ್ನು ಆಡಂಭರದಿಂದ ಆಚರಿಸಿ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಕಿಚ್ಚನ ‘ಫ್ಯಾಂಟಮ್​’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು

    ಎಲ್ಲ ರಾಜ್ಯಗಳು ಪಟಾಕಿ ನಿರ್ಬಂಧದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ಇನ್ನೂ ಏಕೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರೊಬ್ಬರು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಚೌಹಾಣ್​, ಪಟಾಕಿಗೆ ನಿರ್ಬಂಧವಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿದ್ದಾರೆ. (ಏಜೆನ್ಸೀಸ್​)

    ಊಟ ಕೊಡದಿದ್ದರೆ ಅರೆಸ್ಟ್ ಮಾಡಿಬಿಡುತ್ತೇನೆ! ಬಯಲಾಯ್ತು ಖತರ್ನಾಕ್​ ಕಳ್ಳಿಯ ಅಸಲಿಯತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts