More

    ಆರೋಗ್ಯ ಸೇತು ಆ್ಯಪ್​ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತೆ ಎಚ್ಚರ….!

    ನವದೆಹಲಿ: ಕೋವಿಡ್​-19 ಕಾಯಿಲೆಯಿಂದ ದೂರವಿರಲು ಆರೋಗ್ಯ ಸೇತು ಆ್ಯಪ್​ ಬಳಸಿ ಎಂದು ಕೇಂದ್ರ ಸರ್ಕಾರ ಈ ಮೊದಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿತ್ತು. ಬಳಿಕ ಇದನ್ನು ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿ ಆದೇಶಿಸಿದೆ.
    ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಆರೋಗ್ಯ ತೆರಳಬೇಕೆಂದರೆ ಆರೋಗ್ಯ ಸೇತು ಆ್ಯಪ್​ ಹೊಂದಿರಲೇಬೇಕು. ಅದರಲ್ಲಿ ವಿವರಗಳನ್ನು ದಾಖಲಿಸಿದ ಬಳಿಕ ಅದು ನೀವು ಸುರಕ್ಷಿತವೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಸುರಕ್ಷಿತ ಅಥವಾ ಅಪಾಯ ಕಡಿಮೆ ಎಂದು ತೋರಿಸಿದರಷ್ಟೇ ಕೆಲಸಕ್ಕೆ ತೆರಳಬೇಕು ಎಂದು ಸೂಚಿಸಿತ್ತು.

    ಇದನ್ನೂ ಓದಿ: ‘ಎಣ್ಣೆ’ ಕೊಂಡು ಬಿಲ್​ ತೋರಿಸ್ದವರಿಗೆ ಬೆನ್ನತ್ತಿದ್ಯಾರು ಗೊತ್ತಾ?

    ವಿಪರ್ಯಾಸವೆಂದರೆ, ಸೋಂಕಿತರು ಕೂಡ ಆರೋಗ್ಯ ಸೇತು ಆ್ಯಪ್ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈವರೆಗೆ ಭಾರತದಲ್ಲಿ ಐದು ಕೋಟಿ ಜನರಷ್ಟೇ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದಾರೆ.
    ಭಾರತದಲ್ಲಿ 50 ಕೋಟಿಗೂ ಆಧಿಕ ಸ್ಮಾರ್ಟ್​ಫೋನ್​ ಬಳಕೆದಾರರಿದ್ದಾರೆ. ಹೀಗಿದ್ದರೂ, ಕೋವಿಡ್​ ತಡೆಗಾಗಿಯೇ ರೂಪಿಸಲಾಗಿರುವ ಆರೋಗ್ಯ ಸೇತು ಆ್ಯಪ್​ ಬಳಕೆ ಪ್ರಮಾಣ ತೀರಾ ಕಡಿಮೆಯಾಗಿದೆ.
    ಇದೀಗ ನೊಯ್ಡಾ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಸಾರ್ವಜನಿಕರ ಸ್ಮಾರ್ಟ್​ ಫೋನ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಒಂದು ಆ್ಯಪ್​ ಇಲ್ಲದಿದ್ದರೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ನಿಮ್ಮನ್ನು ಆರು ತಿಂಗಳ ಕಾಲ ಜೈಲಿಗೆ ಕಳುಹಿಸಬಹುದು.

    ಇದನ್ನೂ ಓದಿ; ಮನೆಯಲ್ಲೇ ಮದುವೆಯಾಗುವ ಜೋಡಿಗೆ ಇಲ್ಲಿದೆ ಪೊಲೀಸರ ಭರ್ಜರಿ ಆಫರ್

    ಕೋವಿಡ್​-19 ಕಾಯಿಲೆ ವ್ಯಾಪಿಸುವುದನ್ನು ತಡೆಗಟ್ಟಲು ಆರೋಗ್ಯ ಸೇತು ಆ್ಯಪ್​ ಹೊಂದಿರಬೇಕಾದುದು ಅಗತ್ಯವಾಗಿದೆ. ನಾಗರಿಕರ ಸ್ಮಾರ್ಟ್​ಫೋನ್​ಗಳಲ್ಲಿ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ ಎಂದು ನೋಯ್ಡಾ ಡಿಸಿಪಿ ಅಶುತೋಷ್​ ದ್ವಿವೇದಿ ಹೇಳಿದ್ದಾರೆ.

    ಉತ್ತರಪ್ರದೇಶ ಸರ್ಕಾರ ಆ್ಯಪ್​ಅನ್ನು ಕಡ್ಡಾಯಯಗೊಳಿಸಿ ಆದೇಶಿಸಿದೆ. ಆದರೆ, ಕರ್ನಾಟಕದಲ್ಲಿನ್ನೂ ಆ ಮಟ್ಟಿಗಿನ ಜಾಗೃತಿ ಮೂಡಿದಂತಿಲ್ಲ.

    ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಗಳಿದ್ದರೆ ಸ್ಥಳಾಂತರ; ಸಿದ್ಧತೆಗೆ ಸಚಿವ ಸುರೇಶ್​ಕುಮಾರ್​ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts