More

    ನಿತ್ಯ ಕಾಯಕದಲ್ಲಿ ತೊಡಗಿದರೆ ದುರ್ಗುಣಗಳು ದೂರ

    ಯಲಬುರ್ಗಾ: ಬಸವಾದಿ ಶರಣರ ವಚನಕಟ್ಟು ಹೊತ್ತು ಮನೆ ಮನೆಗೆ ತೆರಳಿ ಗುರು, ಲಿಂಗ, ಜಂಗಮ ಹಾಗೂ ಕಾಯಕದ ತತ್ವ ಪರಿಕಲ್ಪನೆ ಕುರಿತ ತಿರುಳನ್ನು ಎಲ್ಲರ ಮನಮುಟ್ಟಿಸುವ ಕಾರ್ಯ ಶ್ಲಾಘನೀಯ ಎಂದು ಮನಗೂಳಿಯ ವಿರಕ್ತಮಠದ ಶ್ರೀ ವಿರತೀಶಾನಂದ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಗಣೇಶ ಚತುರ್ಥಿಯನ್ನು ಏಕೆ ಆಚರಿಸುತ್ತೇವೆ?

    ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ, ಅಕ್ಕನಾಗಲಾಂಬಿಕೆ ಮಹಿಳಾ ಗಣ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ನಿರಂತರ ಮನೆ ಮನೆಗೆ ವಚನ ಜ್ಯೋತಿ ಕಾರ್ಯಕ್ರಮದ ಸಮಾರೋಪ ಹಾಗೂ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಾಲೂಕಿನ ಗಡಿಭಾಗದ ಹಳ್ಳಿ ಗುಳೆ ಜನರಿಂದ ಈ ಮಹಾತ್ಕಾರ್ಯ ನಡೆಯುತ್ತಿರುವುದು ಮೆಚ್ಚುವಂಥದ್ದು. ಮನುಷ್ಯ ನೈಸರ್ಗಿಕವಾಗಿ ಭೂಮಿಯ ಮೇಲೆ ಬದುಕಲು ಅನ್ನ, ನೀರು, ಗಾಳಿ ಕೊಡುಗೆ ನೀಡಿದ ನಿರಾಕಾರ, ನಿರವಯ ದೇವನನ್ನು ಸ್ಮರಿಸಬೇಕು.

    ಇಷ್ಟಲಿಂಗಾರ್ಚನೆ ಮಾಡುವ ಮೂಲಕ ಶಿವಚಿಂತನೆ, ಶಿವಜ್ಞಾನ ಮಾಡಬೇಕು. ನಿತ್ಯ ಕಾಯಕದಲ್ಲಿ ತೊಡಗಿದಾಗ ದುರ್ಗುಣಗಳು ದೂರಾಗಿ, ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.

    ನಿವೃತ್ತ ಪಿಎಸ್‌ಐ ಬಸನಗೌಡ ಪೊ.ಪಾಟೀಲ್, ರಾಯಚೂರು ಬಸವಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಗಣ್ಯರಾದ ಗವೀಶ ಶಶಿಮಠ, ಬಸವರಾಜಪ್ಪ ಇಂಗಳದಾಳ, ನಂದಯ್ಯಸ್ವಾಮಿ ಹಿರೇಮಠ, ಅಮರೇಶಪ್ಪ ಬಳ್ಳಾರಿ, ಬಸವರಾಜ ಹೂಗಾರ, ನಾಗನಗೌಡ ಜಾಲಿಹಾಳ, ಕೊಟ್ರಪ್ಪ ಶೇಡದ,

    ಶಿವಬಸಯ್ಯ ಹಿರೇಮಠ, ಶರಣಮ್ಮ ಪೊ.ಪಾಟೀಲ್ ಕನಸಾವಿ, ಈರಮ್ಮ ಕೊಳ್ಳಿ, ರೇಣುಕಪ್ಪ ಮಂತ್ರಿ, ಶರಣಮ್ಮ ಹೊಸಳ್ಳಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ದ್ರಾಕ್ಷಾಯಣಮ್ಮ ಹೊಸಳ್ಳಿ, ಹನುಮಮ್ಮ ಉಚ್ಚಲಕುಂಟಿ, ವಿಶಾಲಾಕ್ಷಿ ಕೋಳೂರು, ಸೋಮಣ್ಣ, ಮಲ್ಲಿಕಾರ್ಜುನ ಮಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts