More

    ಗಣೇಶ ಚತುರ್ಥಿಯನ್ನು ಏಕೆ ಆಚರಿಸುತ್ತೇವೆ?

    ಗಣೇಶ ಚತುರ್ಥಿಯನ್ನು ಏಕೆ ಆಚರಿಸುತ್ತೇವೆ?| ರಾಜೇಶ್ವರಿ ಹಿರೇಮಠ, ಬೆಂಗಳೂರು
    ಗಣೇಶ ಚತುರ್ಥಿ ಹಿಂದೂ ಧರ್ಮದಲ್ಲಿ, ಸಮೃದ್ಧಿ ಮತ್ತು ಬುದ್ಧಿವಂತಿಕೆ, ಆನೆಯ ತಲೆಯ ದೇವತೆ ಗಣೇಶನ ಜನ್ಮವನ್ನು ಸೂಚಿಸುವ ಹಬ್ಬ. ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಶ್ರೀ ಗಣೇಶ, ವಿಘ್ನ ವಿನಾಶಕ, ದುಃಖ ಹರತ ಸುಖ ಕರತಾ ಎಂದು ಹೇಳುತ್ತೇವೆ. ಗಣೇಶನನ್ನು ಸ್ಮರಿಸಿ ಪೂಜೆ ಮಾಡುತ್ತೇವೆ.

    ಗಣೇಶ ಹೊಸ ಪ್ರಾರಂಭದ ಅಧಿಪತಿ ಮತ್ತು ಅಡೆತಡೆಗಳನ್ನು ನಿವಾರಿಸುವ ದೇವರು ಮಾತ್ರವಲ್ಲ, ಹಿಂದೂ ಪುರಾಣಗಳ ಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆಲ್ಲ ಒಳ್ಳೆ ಪಾಠ ಕಲಿಸುವ ಶಿಕ್ಷಕ ಕೂಡ. ನಮಗೆ ಬೇಕು ಅನಿಸಿದಾಗ ಗಣೇಶನನ್ನು ಸ್ಮರಿಸಿದರೆ ಸಾಕೆ? ಗಣೇಶನ ಶಕ್ತಿ ಮತ್ತು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಜೀವನ ಸಫಲವಾಗುವುದು ಖಂಡಿತ.

    ಭಗವಾನ ಶಂಕರ ೧೦ ವರ್ಷಗಳ ಕಾಲ ಪರ್ವತಗಳ ಮೇಲೆ ತಪಸ್ಸಿಗೆ ಹೋದಾಗ ಪಾರ್ವತಿ ಒಂದು ದಿವಸ ತನ್ನ ದೇಹದ ಮಣ್ಣಿನಿಂದ ಚಿಕ್ಕ ಬಾಲಕನನ್ನು ಮಾಡಿ, ಸ್ನಾನಕ್ಕೆ ಹೋಗುವಾಗ ಮಗುವನ್ನು ಮನೆಯ ಮುಂದೆ ನಿಲ್ಲುವಂತೆ ಹೇಳಿ, ಮನೆಯಲ್ಲಿ ಯಾರಿಗೂ ಪ್ರವೇಶಿಸಲು ಬಿಡಬೇಡ ಎಂದು ಹೇಳಿದಳು. ಆ ದಿನ ಇದ್ದಕ್ಕಿದ್ದಂತೆ ಶಂಕರ ತಪಸ್ಸು ಮುಗಿಸಿ ಮನೆಗೆ ಹಿಂತಿರುಗುತ್ತಾನೆ, ಪುಟ್ಟ ಮಗು ತಂದೆಯನ್ನು ಗುರುತಿಸುವುದಿಲ್ಲ. ತನ್ನ ಕರ್ತವ್ಯಗಳನ್ನು ಪೂರೈಸುತ್ತ ಶಂಕರನನ್ನು ಮನೆಯಲ್ಲಿ ಪ್ರವೇಷ ಮಾಡಲು ಬಿಡುವದಿಲ್ಲ. ಕೋಪಗೊಂಡ ಶಂಕರ ಬಾಲಕನ ತಲೆಯನ್ನು ಕತ್ತರಿಸುತ್ತಾನೆ. ಪಾರ್ವತಿ ತಮ್ಮಮಗನ ಬಗ್ಗೆ ಹೇಳಿದಾಗ, ಶಂಕರ ಪಕ್ಕದಲ್ಲಿ ಹೋಗುವ ಆನೆಯ ತಲೆಯನ್ನು ಬದಲಾಯಿಸುತ್ತಾನೆ ಮತ್ತು ಮಗುವಿಗೆ ಗಣೇಶ ಎಂದು ನಾಮಕರಣ ಮಾಡುತ್ತಾನೆ..

    ಈ ಕಥೆಯ ಅರ್ಥವನ್ನು ತಿಳಿಯಲು ಪ್ರಯತ್ನಿಸಿದ್ದೇವೆಯೇ? ಶಂಕರ ೧೦ ವರ್ಷಗಳ ತಪಸ್ಸಿನ ನಂತರ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಚಿಕ್ಕ ಮಗುವಿನ ಮೇಲೆ ಕೋಪಗೊಳ್ಳಲು ಸಾಧ್ಯವೇ? ಇಂದು ನಾವು ೧೫ ನಿಮಿಷಗಳ ಕಾಲ ಧ್ಯಾನ ಮಾಡಿದರೂ ಸಾಕು ,ಶಾಂತ ಮತ್ತು ಸ್ಥಿರವಾಗಿರುತ್ತೇವೆ, ಆದರೆ ಶಂಕರ ದೇವರು ಪುಟ್ಟ ಮಗುವಿನ ತಲೆಯನ್ನು ಕತ್ತರಿಸಲು ಹೇಗೆ ಸಾಧ್ಯ ? ಶಿವನು ಬಾಲಕನ್ನು ಕೊಂದಿದ್ದಾನೆ ಎಂದು ಹೇಳುವುದಿಲ್ಲ; ತಲೆಯನ್ನು ಕತ್ತರಿಸಿದನು ಎನ್ನುತ್ತೇವೆ . ತಲೆಯನ್ನು ಕತ್ತರಿಸುವುದು ಮತ್ತು ಕೊಲೆ ಮಾಡುವುದು ಎರಡರಲ್ಲಿ ತುಂಬಾ ವ್ಯತ್ಯಾಸವಿದೆ.

    ಪಾರ್ವತಿ ಬಾಲಕನನ್ನು ಮಾಡಿದ ಬಗ್ಗೆ ಕಥೆ ಏನನ್ನು ಸೂಚಿಸುತ್ತದೆ ? ಯಾವುದೇ ದೇವತೆಯ ದೇಹದಲ್ಲಿ ಇಷ್ಟು ಕೆಸರು ಇರಬಹುದೇ? ಚಿಕ್ಕ ಬಾಲಕನನ್ನು ಮಣ್ಣಿನಿಂದ ಮಾಡಲಾಗಿದೆ, ಎಂದರೆ, ದೇಹ ಪ್ರಜ್ಞೆಯಲ್ಲಿದ್ದಾಗ ದೇವರು ಭೂಮಿಗೆ ಬಂದರೆ, ಅಹಂಕಾರದಿಂದ ನಾವು ದೇವರನ್ನು ಗುರುತಿಸುವುದಿಲ್ಲ.
    ಶಂಕರ ಚಿಕ್ಕ ಮಗುವಿನ ತಲೆಯನ್ನು ಕತ್ತರಿಸಿದ ಎಂದರೆ ದೇಹ ಪ್ರಜ್ಞೆಯ ( body consciousness ) ಅಹಂಕಾರದ ತಲೆಯನ್ನು ಕತ್ತರಿಸಿ, ಆತ್ಮ ಪ್ರಜ್ಞೆಯ ,(Soul consciousness) ಬುದ್ಧಿವಂತಿಕೆಯ ತಲೆಯಿಂದ ಬದಲಾಯಿಸುತ್ತಾನೆ

    ಗಣೇಶನ ದೊಡ್ಡ ಹಣೆ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ, ಕಣ್ಣುಗಳು ಚಿಕ್ಕದಾಗಿದ್ದು, ದೂರದ್ದು ಏನಾದರು ನೋಡಬೇಕೆಂದರೆ ನಮ್ಮ ಕಣ್ಣುಗಳು ಚಿಕ್ಕದಾಗುತ್ತವೆ. ಗಣೇಶ , ಬುದ್ಧಿವಂತ ಮತ್ತು ದೂರದೃಷ್ಟಿಯ ಪ್ರತೀಕ.

    ಬಾಯಿ ಚಿಕ್ಕದು ಮತ್ತು ಕಿವಿಯನ್ನು ದೊಡ್ಡದಾಗಿ ತೋರಿಸಲಾಗುತ್ತದೆ. ಅಂದರೆ ಕಡಿಮೆ ಮಾತನಾಡಿ ಹೆಚ್ಚು ಆಲಿಸಿ. ಕಿವಿಯನ್ನು ಮರದಹಾಗೆ ದೊಡ್ಡದಾಗಿ ತೋರಿಸುತ್ತಾರೆ. ಮರವನ್ನು ಕೆಟ್ಟದನ್ನು ಎಸೆದು ಸ್ವಚ್ಛವಾಗಿರುವದನ್ನು ಇಡಲು ಉಪಯೋಗಿಸುತ್ತೇವೆ, ಅಂದರೆ ಒಳ್ಳೆಯದನ್ನು ಮಾತ್ರ ಕೇಳಿ ಅನ್ನುವ ಪ್ರತೀಕ.
    ಗಣೇಶನಿಗೆ ಏಕ ದಂತ ಎಂದು ಕರೆಯುತ್ತೇವೆ . ನಮ್ಮ ಜೀವನದಲ್ಲಿಯ ದ್ವಂದ್ವತೆ ಏನನ್ನು ಪ್ರತಿನಿಧಿಸುತ್ತದೆ? ನಾವು ದೇಹ ಪ್ರಜ್ಞೆಯಲ್ಲಿದ್ದಾಗ (Body conciouness) ಜಾತಿ, ಧರ್ಮ, ಗಂಡು, ಹೆಣ್ಣು, ಶ್ರೀಮಂತ, ಬಡವ , ಹಿಂದೂ,ಮುಸ್ಲಿಂ ,ಕ್ರಿಶ್ಚಿಯನ್ ಎಂಬ ದ್ವಂದ್ವದಲ್ಲಿ ಇರುತ್ತೇವೆ . ನಾವು ಆತ್ಮ ಪ್ರಜ್ಞೆಯಲ್ಲಿ ಇದ್ದಾರೇ ಯಾವುದೇ ದ್ವಂದ್ವ ಇರುವದಿಲ್ಲ. ಆತ್ಮ ಪ್ರಜ್ಞೆಯಲ್ಲಿ ( Soul Conciousness) ಸಮಾನತೆಯ ಗುಣಗಳನ್ನು ಹೊಂದಿರುತ್ತದೆ.
    ಗಣೇಶ ತನ್ನ ಸೂಂಡೆ ಇಂದ ಚಿಕ್ಕ ಮಗುವನ್ನು ಮೃದುವಾಗಿ ಎತ್ತುತ್ತಾನೆ , ಅದೇ ಸೂಂಡೆಯ ಶಕ್ತಿಯಿಂದ ದೊಡ್ಡ ಮರವನ್ನುಕೂಡ ಕಿತ್ತಿ ಹಾಕುತ್ತಾನೆ. ಆತ್ಮಪ್ರಜ್ಞೆ ಇದ್ದರೆ ವಿನಮ್ರತೆಯ ಜೊತೆಗೆ ಮತ್ತು ಶಕ್ತಿಯುತವಾಗಿರಬಹುದು. ಆಧ್ಯಾತ್ಮಿಕತೆ ಎಂದರೆ ದುರ್ಬಲ ಎನ್ನುವ ತಪ್ಪುಕಲ್ಪನೆ, ಆದರೆ ಅದು ನಿಜವಲ್ಲ. ಆಧ್ಯಾತ್ಮಿಕತೆ ಎಂದರೆ ಪ್ರೀತಿ ಮತ್ತು ಕಾನೂನಿನ ಪರಿಪೂರ್ಣ ಸಮತೋಲನ , ವಿನಮ್ರತೆ ಮತ್ತು ಶಕ್ತಿಶಾಲಿಯ ಸಂತುಲನ.

    ಗಣೇಶನ ಹೊಟ್ಟೆ ತುಂಬಾ ದೊಡ್ಡದು ವಿಶಾಲ ಬುದ್ಧಿವಂತ ಗಣೇಶ ಎಲ್ಲವನ್ನೂ ತನ್ನ ಹೊಟ್ಟೆಯಲ್ಲಿ ಇಟ್ಟುಕೊಳ್ಳುತ್ತಾನೆ, ಅಂದರೆ ಎಲ್ಲರನ್ನು ಒಂದೇ ರೀತಿಯಿಂದ ಸ್ವೀಕರಿಸುವ ಶಕ್ತಿಯ ಪ್ರತೀಕ. ಜೀವನದಲ್ಲಿ ಪ್ರತಿ ಒಳ್ಳೆಯ ಮತ್ತು ಕೆಟ್ಟದ್ದನ್ನು ಶಾಂತಿಯುತವಾಗಿ ಜೀರ್ಣಿಸಿಕೊಳ್ಳಿ

    ಗಣೇಶನಿಗೆ ಭುಜದಲ್ಲಿಯ ಖುಲಾಡಿ ಅಹಂಕಾರವನ್ನು ಮುಗಿಸುವ ಪ್ರತೀಕ, ಇನ್ನೊಂದು ಕೈ ಯಾವಾಗಲೂ ಎಲ್ಲರಿಗೂ ಆಶೀರ್ವಾದ ಮಾಡುವದನ್ನು ತೋರಿಸಲಾಗುತ್ತದೆ.

    ಗಣೇಶ ಯಾವಾಗಲೂ ಒಂದು ಕಾಲನ್ನು ಮಡಚಿ ,ಒಂದು ಕಾಲನ್ನು ಕೆಳಗೆ ಇಟ್ಟಿರುತ್ತಾನೆ , ಆತ್ಮ ಪ್ರಜ್ಞೆಯಲ್ಲಿ ಇದ್ದು ಯಾರಿಂದಲೂ ದೂರವಾಗದೆ ಜನರೊಂದಿಗೆ ಬೆರೆತು ಜೀವನ ಮಾಡುವ ಸಂಕೇತ.

    ಗಣೇಶ ಇಲಿಯ ಮೇಲೆ ಕುಳಿತಿರುತ್ತಾನೆ . ಇಷ್ಟು ದೊಡ್ಡ ಗಣೇಶ ಚಿಕ್ಕ ಇಲಿಯ ಮೇಲೆ ಕುಳಿತು ಕೊಳ್ಳಬಹುದೇ? ದುರ್ಗುಣಗಳ ಮೇಲೆ ಗಣೇಶನ ಗೆಲುವಿನ ಪ್ರತೀಕ . ಇಲಿಗೆ ಸ್ಥಳದ ಅಗತ್ಯವಿಲ್ಲ ಸಣ್ಣ ಸ್ಥಳದಲ್ಲಿ ಕೂಡ ಪ್ರವೇಶಿಸುತ್ತದೆ. ದುರ್ಗುಣಗಳು, ದೌರ್ಬಲ್ಯಗಳು ನಮ್ಮ ಜೀವನದಲ್ಲಿ ಯಾವಾಗ ಪ್ರವೇಶಿಸುತ್ತವೆ ಎಂದು ತಿಳಿಯುವುದಿಲ್ಲ. ಇಲಿ ಕಚ್ಚಿದಾಗ ನಮಗೆ ತಿಳಿಯುವದಿಲ್ಲ, ನಂತರ ಗೊತ್ತಾಗುತ್ತದೆ. ಅದೇ ರೀತಿ ಈ ದೌರ್ಬಲ್ಯಗಳು, ನಮ್ಮ ಜೀವನದಲ್ಲಿ ಪ್ರವೇಶಿಸಿದಾಗ ನಮಗೆ ಗೊತ್ತಾಗುವುದಿಲ್ಲ ನಂತರ ಅದರ ಪರಿಣಾಮವನ್ನು ಅನುಭವಿಸುತ್ತೇವೆ. ಆತ್ಮ ಪ್ರಜ್ಞೆ ಯಲ್ಲಿದ್ದರೆ ಈ ದುರ್ಗುಣಗಳ ಮೇಲೆ ಜಯ ಸುಲಭವಾಗಿ ಸಿಗುತ್ತದೆ.

    ಹಬ್ಬಗಳು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಪ್ರತೀಕ . ನಾವು ಈ ಹಬ್ಬಗಳನ್ನು ಆಚರಿಸುತ್ತಿರುವಾಗ, ಹಿಂದಿನ ಕಥೆ ಮತ್ತು ಅರ್ಥ ತಿಳಿದುಕೊಂಡರೆ , ಹಬ್ಬಗಳನ್ನು ಹೆಚ್ಚು ಅರ್ಥ ಪೂರ್ಣವಾಗಿ ಆಚರಿಸಬಹುದು.

    (ಪ್ರೇರಣೆ: ಬಿ.ಕೆ. ಶಿವಾನಿ)

    ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts