More

    ಶ್ರೇಷ್ಠ ಬದುಕಿಗೆ ವಚನಗಳು ಆಧಾರ

    ಕಂಪ್ಲಿ: ಕಾಯಕ, ಮಾತು ಮತ್ತು ಮನಸ್ಸು ಶುದ್ಧವಾದರೆ ಶ್ರೇಷ್ಠ ಬದುಕು ಸಾಗಿಸಲು ಸಾಧ್ಯ ಎಂದು ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

    ಮನಸ್ಸು ಶುದ್ಧವಾದರೆ ಶ್ರೇಷ್ಠ ಬದುಕು ಸಾಗಿಸಲು ಸಾಧ್ಯ

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಲ್ಗುಡಿ ಉಮೇಶ ದತ್ತಿ, ಮಹಾಂತಿನಮಠದ ಶ್ಯಾಮಲಮ್ಮ ಮತ್ತು ಗೌರಮ್ಮ ದತ್ತಿ ಹಾಗೂ ಎಂ.ಪಿ.ಪ್ರಕಾಶ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ಹಾಗೂ ವಾಙ್ಮಯ ವಿಹಾರ’ ವಿಶೇಷ ಉಪನ್ಯಾಸ ನೀಡಿದರು.

    ಇದನ್ನೂ ಓದಿ: ನರೆಗಾ ಕಾಮಗಾರಿಯಲ್ಲಿ ಅಕ್ರಮ! 27 ಪಿಡಿಓ ಅಧಿಕಾರಿಗಳು ಸಸ್ಪೆಂಡ್​

    ಬದುಕಿನಲ್ಲಿ ಬಸವಣ್ಣರ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡಲ್ಲಿ ಶ್ರೇಷ್ಠ ಬದುಕು ಸಾಗಿಸಲು ಸಾಧ್ಯವಿದೆ. ಅಂತರಂಗ ಮತ್ತು ಬಹಿರಂಗ ಶುದ್ಧತೆಗೆ ಶರಣರು ಆದ್ಯತೆ ನೀಡಿದ್ದರು. ವಿದ್ಯಾರ್ಥಿಗಳು ಶರಣರ ತತ್ವ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
    ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಲೌಕಿಕ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

    ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಪಿ.ನಾಗೇಶ್ವರರಾವ್, ಸಾಯಿಬಾಬಾ, ಸ್ವಪ್ನಾ ಉದಯಶಂಕರ್, ಬಡಿಗೇರ ಜಿಲಾನ್‌ಸಾಬ್ ಅವರನ್ನು ಗೌರವಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶಿವರಾಜ, ಪ್ರಾಚಾರ್ಯೆ ಡಾ.ಅನ್ನಪೂರ್ಣ ಗುಡದೂರ, ಕಸಾಪ ಪದಾಧಿಕಾರಿಗಳಾದ ಜಿ.ಪ್ರಕಾಶ, ಎಸ್.ಡಿ.ಬಸವರಾಜ, ಬಂಗಿ ದೊಡ್ಡ ಮಂಜುನಾಥ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಕಾಳಿಂಗವರ್ಧನ ಹಾದಿಮನಿ, ಡಾ.ಬಸವರಾಜ, ಡಾ.ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts