More

    ಕಾಯಕ ಪ್ರತಿನಿಧಿಯಾಗಿದ್ದ ಮಹಾನ್ ಶರಣ

    ಕಂಪ್ಲಿ: ಶಿವಯೋಗಿ ಸಿದ್ಧರಾಮೇಶ್ವರರು ಶ್ರಮದಾನ ಮತ್ತು ಸ್ವಯಂಸೇವೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಾಯಕ ಪ್ರತಿನಿಧಿಯಾಗಿದ್ದರು ಎಂದು ತಾಲೂಕು ಭೋವಿ ಸಂಘದ ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಹೇಳಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಸಿದ್ಧರಾಮೇಶ್ವರರ 852ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಶಿವಯೋಗಿ ಸಿದ್ಧರಾಮರ ವಚನಗಳಲ್ಲಿ ಧರ್ಮ ಜಿಜ್ಞಾಸೆ, ಸಾಮಾಜಿಕ ಕಳಕಳಿ, ಕಾಯಕ ಮಹತ್ವ, ಸ್ವಯಂಸೇವೆ ಮತ್ತು ಶ್ರಮದಾನದ ತತ್ವ ಆದರ್ಶಗಳಿದ್ದು, ಅವೆಲ್ಲವೂ ಅನುಕರಣೀಯವಾಗಿವೆ ಎಂದರು.

    ಇದನ್ನು ಓದಿ: ಶರಣರ ತತ್ವಾದರ್ಶ ನಮಗೆಲ್ಲ ಮಾದರಿ

    ಸಂಘದ ಗೌರವಾಧ್ಯಕ್ಷ ಎ.ವಿ.ಗೋವಿಂದರಾಜು ಮಾತನಾಡಿ, ಸಮುದಾಯದವರು ಸರ್ವ ಸಂಘಟಿತರಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದರು.

    ಸಂಘದ ಕಚೇರಿಯಲ್ಲಿಯೂ ಸಿದ್ಧರಾಮೇಶ್ವರ ಜಯಂತ್ಯುತ್ಸವ ಜರುಗಿತು. ತಹಸೀಲ್ದಾರ್ ಶಿವರಾಜ, ತಾಲೂಕು ಸಂಘದ ಪದಾಧಿಕಾರಿಗಳಾದ ಗುರ‌್ರಪ್ಪ, ವಿ.ನೀಲಕಂಠೇಶ, ವಿ.ಹುಲುಗಪ್ಪ, ಗೋವಿಂದರಾಜ, ಸತ್ಯಪ್ಪ, ವಿ.ಶರಭಣ್ಣ, ವೆಂಕಟರಮಣ, ವಿ.ಟಿ.ನಾಗರಾಜ, ನೀಲಕಂಠ, ವಿ.ತಿಪ್ಪೇಸ್ವಾಮಿ, ನಂದಿ ಬಸವ, ಸೂರಿ, ವಿಎಗಳು, ನಾನಾ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts