More

    ನಿಟ್ಟೆ ಕೆ.ಎಸ್.ಹೆಗ್ಡೆ ಡೆಂಟಲ್ ಕಾಲೇಜಿನ ಸ್ಯಾಟಲೈಟ್ ಕೇಂದ್ರದ ಮೂಲಕ ಹಳ್ಳಿಗಳಲ್ಲಿ ಸೇವೆ

    ಮಂಗಳೂರು: ದೇಶದಲ್ಲಿನ ಬಹುತೇಕ ದಂತ ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯಗಳು ಒಳ್ಳೆಯದಿದ್ದರೂ ಸಾಕಷ್ಟು ರೋಗಿಗಳು ಬರದಿರುವುದು ಋಣಾತ್ಮಕವಾಗಿದೆ, ಆದರೆ ನಿಟ್ಟೆ ಕೆ.ಎಸ್.ಹೆಗ್ಡೆ ಡೆಂಟಲ್ ಕಾಲೇಜಿನಲ್ಲಿ ಹಳ್ಳಿಗಳಲ್ಲಿ ಸ್ಯಾಟಲೈಟ್ ಕೇಂದ್ರಗಳನ್ನು ತೆರೆದು ರೋಗಿಗಳಿಗೆ ಸೇವೆ ನೀಡುವ ಮೂಲಕ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಭವ ಸಿಗುತ್ತದೆ, ಅವರೇ ಮುಂದೆ ಕೌಶಲಯುತ ದಂತವೈದ್ಯರಾಗುತ್ತಾರೆ ಎಂದು ಭಾರತೀಯ ದಂತವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ.ದಿಬ್ಯೇಂದು ಮಜುಮ್ದಾರ್ ಹೇಳಿದ್ದಾರೆ.

    ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ಸೌಂದರ್ಯ ದಂತ ಚಿಕಿತ್ಸಾ ಸಂಘ(ಏಸ್ತೆಟಿಕ್ ಡೆಂಟಿಸ್ಟ್ರಿ ಅಸೋಸಿಯೇಶನ್ ಆಫ್ ಇಂಡಿಯಾ) ಹಮ್ಮಿಕೊಂಡ ಮೊದಲ ರಾಷ್ಟ್ರೀಯ ಸೌಂದರ್ಯ ದಂತ ವೈದ್ಯಕೀಯ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ದೇಶದಲ್ಲಿ ಸದ್ಯ ದಂತ ವೈದ್ಯಕೀಯ ಶಿಕ್ಷಣ ತುಸು ಹಿನ್ನಡೆ ಕಾಣುತ್ತಿದೆ, ಸರಕಾರವು ಎಂಬಿಬಿಎಸ್ ಸೀಟುಗಳನ್ನು 60 ಸಾವಿರದಿಂದ 80 ಸಾವಿರಕ್ಕೆ ಏರಿಸಿರುವುದು ಇದಕ್ಕೆ ಕಾರಣ. ಹಾಗಾಗಿ ಎಂಬಿಬಿಎಸ್ ವೈದ್ಯರು ಗ್ರಾಮಾಂತರದಲ್ಲಿ ಹೋಗಿ ಕೆಲಸ ಮಾಡದಿದ್ದರೆ, ದಂತ ವೈದ್ಯಕೀಯ ಕಲಿತವರನ್ನು ಅದಕ್ಕೆ ಪರಿಗಣಿಸುವುದು, ಅದಕ್ಕಾಗಿ ಅವರು 6 ತಿಂಗಳ ಕೋರ್ಸ್ ಮಾಡುವ ಮುಖೇನ ಅವರಿಗೆ ಕುಟುಂಬದ ವೈದ್ಯರಾಗಲು ಅವಕಾಶ ನೀಡುವ ಬಗ್ಗೆ ಸಲಹೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಪಡೆದುಕೊಂಡಿದೆ. ಶೀಘ್ರ ಇದು ಜಾರಿಯಾಗುವ ನಿರೀಕ್ಷೆ ಇದೆ ಎಂದರು.

    ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೌಂದರ್ಯ ದಂತವೈದ್ಯಕೀಯ ಎನ್ನುವುದು ಭವಿಷ್ಯದ ಕ್ಷೇತ್ರವಾಗಿದೆ, ಸಾಂಪ್ರದಾಯಿಕ ಕ್ಷೇತ್ರದೊಂದಿಗೆ ಹೊಸ ಕ್ಷೇತ್ರವೂ ಸಾಕಷ್ಟು ಬೆಳವಣಿಗೆ ಸಾಸಬೇಕಿದೆ. ದಂತವೈದ್ಯಕೀಯದಿಂದ ಎಂಬಿಬಿಎಸ್ ಕೋರ್ಸ್‌ಗೆ ಬರುವವರಿಗೆ ಅವಕಾಶ ಮಾಡಿಕೊಡಬೇಕಿದೆ, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ಅಭ್ಯರ್ಥಿಗಳು ಸಿಗುವುದು ಸಾಧ್ಯ, ವೈದ್ಯಕೀಯ ಹಾಗೂ ದಂತವೈದ್ಯಕೀಯಗಳೆರಡರ ಒಮ್ಮುಖಗೊಳಿಸುವಿಕೆಗೆ ಉತ್ತಮ ಭವಿಷ್ಯವಿದೆ ಎಂದರು.

    ಅಡಾಯ್ ಸಂಘಟನೆಯ ಕಾರ್ಯದರ್ಶಿ ಡಾ.ಆರ್.ಎಸ್.ಮೋಹನ್ ಕುಮಾರ್ ಇದ್ದರು. ಅಧ್ಯಕ್ಷೆ ಡಾ. ಮಿತ್ರಾ ಎನ್.ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಡಾ.ಪಿ.ಕರುಣಾಕರ್ ಪ್ರಸ್ತಾವಿಸಿದರು, ಸಂಘಟನ ಕಾರ್ಯದರ್ಶಿ ಡಾ.ಶಶಿ ರಶ್ಮಿ ಆಚಾರ್ಯ ವಂದಿಸಿದರು.

    ———————-

    ಡೆಂಟಲ್ ಕಲಿತವರಿಗೂ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಅವಕಾಶ

    ದಂತ ವೈದ್ಯಕೀಯ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸುವ ಉದ್ದೇಶದೊಂದಿಗೆ ಅದರ ಅವಯನ್ನು 4.5 ವರ್ಷಕ್ಕೆ ಪರಿಷ್ಕರಿಸುವುದು, ಡೆಂಟಲ್ ಕಲಿತವರಿಗೂ ಕುಟುಂಬ ವೈದ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ನೀಡುವುದು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ನಿರೀಕ್ಷೆ ಇದೆ. ನೀಟ್ ಬದಲಿಗೆ ಇನ್ನು ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳನ್ನು ಮಾಡಿದ ವಿದ್ಯಾರ್ಥಿಗಳು, ಅಂತಿಮ ಎಕ್ಸಿಟ್ ಪರೀಕ್ಷೆಯನ್ನು ನೀಟ್ ಮಾದರಿಯಲ್ಲೇ ಬರೆಯಬೇಕು, ಅದರಿಂದ ಪಡೆದ ಅಂಕಗಳು ಹಾಗೂ ಇಂಟರ್ನ್‌ಶಿಪ್ ಬಳಿಕದ ಪರೀಕ್ಷೆಯ ಅಂಕಗಳನ್ನು ಫಲಿತಾಂಶದಲ್ಲಿ ಪರಿಗಣಿಸಲಾಗುವುದು, ಈ ಹೊಸ ವ್ಯವಸ್ಥೆಯೂ ಶೀಘ್ರ ಜಾರಿಗೆ ಬರಲಿದೆ ಎಂದು ಭಾರತೀಯ ದಂತವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ.ದಿಬ್ಯೇಂದು ಮಜುಮ್ದಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts