More

    ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಾಗತೀಕರಣ, ಉದ್ಯಮಶೀಲತೆ ಮತ್ತು ವಾಣಿಜ್ಯ ತರಬೇತಿ

    ಬೆಂಗಳೂರು:
    ವ್ಯಾಪಾರ-ವಹಿವಾಟುಗಳಿಗೆ ಯಾವುದೇ ಗಡಿ ಇಲ್ಲ. ವಿದ್ಯಾರ್ಥಿಗಳು ತಮ್ಮದೇ ಆದ ವಿನೂತನ ಐಡಿಯಾಗಳೊಂದಿಗೆ ಅವಕಾಶಗಳನ್ನು ಅಧ್ಯಯಿನ ಮಾಡಿ ತಮ್ಮ ಸ್ಟಾರ್ಟ-ಆಪ್ ಕಂಪನಿಗಳನ್ನು ಸ್ಥಾಪಿಸುವಂತೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಬ್ರಿಟಿಷ್ ಡೆಪ್ಯುಟಿ ಹೈಕಮಿಶನರ್ ಹಾಗೂ ದಕ್ಷಿಣ ಏಶಿಯಾದ ಬ್ರಿಟಿಷ್ ಡೆಪ್ಯುಟಿ ಟ್ರೇಡ್ ಕಮಿಶನರ್ ಚಂದ್ರು ಐಯರ್ ಕರೆ ನೀಡಿದರು.
    ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ’ಜಾಗತೀಕರಣ, ಉದ್ಯಮಶೀಲತೆ ಮತ್ತು ವಾಣಿಜ್ಯ’ ಕುರಿತಂತೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
    ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಮೇಲುಗೈ ಸಾಧಿಸಲು ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟು ಬಹಳ ಮುಖ್ಯ. ಇದಕ್ಕೆ ಅಗತ್ಯವಿರುವುದು ಅವಶ್ಯ ಜ್ಞಾನದ ಜತೆ ವ್ಯಾವಹಾರಿಕ ಕೌಶಲ್ಯ. ಇವುಗಳ ಜತೆ ಅಪಾರ ಪರಿಶ್ರಮ ಸೇರಿದರೆ ಯಶಸ್ಸು ಖಚಿತ ಎಂದರು.
    ಬ್ರಿಟನ್ ಯೂರೋಪಿನ ಹೆಬ್ಬಾಗಿಲು ಇದ್ದಂತೆ. 2023ರ ಆರ್ಥಿಕ ವರ್ಷಾಂತ್ಯದಲ್ಲಿ ಬ್ರಿಟನ್ ಹಾಗೂ ಇಂಡಿಯಾ ದೇಶಗಳ ದ್ವಿಪಕ್ಷೀಯ ವಹಿವಾಟು 38.1 ಬಿಲಿಯನ್ ಪೌಂಡ್‌ಗಳಷ್ಟಾಗಿದೆ ಎಂಬುದು ನಿಜಕ್ಕೂ ಸಂತಸದ ಸಂಗತಿ ಎಂದರು.
    ಯಾವುದೇ ಪ್ರಯತ್ನವಿರಲಿ, ಯುವ ಜನತೆ, ಸಹಾನುಭೂತಿ, ಸೂಕ್ತಜ್ಞಾನ ಹಾಗೂ ನಿರಂತರ ಗ್ರಹಿಕಾ ಸಾಮರ್ಥ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ, ಎಷ್ಟೇ ಕಷ್ಟಸಾಧ್ಯವಾದರೂ ಯಶಸ್ಸು ಪ್ರಾಪ್ತವಾಗುತ್ತದೆ ಎಂದರು.
    ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನೆ ಹಾಗೂ ಅನ್ವೇಷಣೆಗಳಿಗೆ ಮೀಸಲಾದ ಪ್ರಯೋಗಾಲಯಗಳಿಗೆ ಭೇಟಿ ನೀಡಿ, ಅನ್ವೇಷಣೆಯಲ್ಲಿ ತೊಡಗಿದ್ದ ಯುವ ಸಂಶೋಧಕರನ್ನು ಅಭಿನಂದಿಸಿದರು.
    ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿನಾಗರಾಜ್, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಹಾಗೂ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ.ವಿ.ಶ್ರೀಧರ್ ಉಪಸ್ಥಿತರಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾಸಂದೀಪ್ ಶಾಸ್ತ್ರಿ ಸ್ವಾಗತಿಸಿದರು. ಸಂಸ್ಥೆಯ ಅಂತಾರಾಷ್ಟ್ರೀಯ ವ್ಯವಹಾರಗಳ ಡೀನ್ ಡಾ. ಸುಧೀರ್ ರೆಡ್ಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts