More

    ಸೋಮವಾರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ಸಾಧ್ಯತೆ

    ಪಟನಾ: ನಿತೀಶ್ ಕುಮಾರ್ ಅವರು ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದಿನವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಜೆಡಿಯು ಮೂಲಗಳು ತಿಳಿಸಿವೆ. ಆದಾಗ್ಯೂ, ಅವರ ಆಪ್ತ ಮೂಲಗಳ ಪ್ರಕಾರ ಭೈಯಾ ದೂಜ್ ಹಬ್ಬದ ದಿನವಾದ ಸೋಮವಾರ ಶುಭ ದಿನವಾದ ಕಾರಣ ಅಂದೇ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

    ಹೊಸದಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬೇಕು. ನಂತರ ಹೊಸದಾಗಿ ಆಯ್ಕೆಯಾಗಿರುವ ಎನ್​ಡಿಎ ಶಾಸಕರ ಶಾಸಕಾಂಗ ಪಕ್ಷ ಸಭೆ ನಡೆಸಬೇಕು. ಅಲ್ಲಿ ಹೊಸದಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಬೇಕು. ಆನಂತರವಷ್ಟೇ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ, ಪ್ರಮಾಣ ವಚನದ ದಿನದ ಬಗ್ಗೆ ಮಾಹಿತಿ ನೀಡಬೇಕು. ಇದ್ಯಾವ ಪ್ರಕ್ರಿಯೆಯೂ ನಡೆದಿಲ್ಲ. ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಇದುವರೆಗೂ ರಾಜಭವನಕ್ಕೆ ಮಾಹಿತಿ ಬಂದಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸಂಸದ ಪ್ರಜ್ವಲ್​ ರೇವಣ್ಣ ಆಗಮಿಸುತ್ತಿದ್ದಂತೆ ರಸ್ತೆ ಕಾಮಗಾರಿ ಬಿಟ್ಟು ಪರಾರಿಯಾದ ಕಾರ್ಮಿಕರು..!

    ಈ ನಡುವೆ, ನಿತೀಶ್ ಅವರು ಗುರುವಾರ ಸಂಜೆ ವೇಳೆ ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಬಿಜೆಪಿ ನಾಯಕರು ಈಗಾಗಲೇ ನಿತೀಶ್ ಕುಮಾರ್ ಅವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ಕಾರಣ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸುಲಭವಾಗಿದೆ. ಅಧಿಕೃತ ಸಭೆ ನಡೆಯುವುದಷ್ಟೇ ಬಾಕಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಚುನಾವಣೆ ಬೆನ್ನಲ್ಲೇ ದೀದಿಗೆ ಬಿಗ್​ ಶಾಕ್​… ಐವರು ಸಚಿವರು ದಿಢೀರ್​ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts