More

    ಬಿಹಾರದಲ್ಲಿ ಸಿಎಂ ಸ್ಥಾನ ಬದಲಾಗುತ್ತಾ? ಬಿಜೆಪಿಯ ಸುಶೀಲ್​ ಮೋದಿ ಹೇಳಿದ್ದು ಹೀಗೆ…

    ಪಟನಾ: ಬಿಹಾರದ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್​ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲವೆಂದು ರಾಜ್ಯ ಬಿಜೆಪಿ ಬುಧವಾರ ಸ್ಪಷ್ಟಪಡಿಸಿದೆ.

    ಬಿಹಾರ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಸಾಧಿಸಿದ್ದು, ಜೆಡಿಯುಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಬಿಜೆಪಿಯೇ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವುದರಿಂದ ಸಹಜವಾಗಿಯೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ.

    243 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 74ರಲ್ಲಿ ಗೆಲುವು ದಾಖಲಿಸಿದ್ದು, ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷ 43ಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಬಿಹಾರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದು, ಜೆಡಿಯು ಪ್ರಾಬಲ್ಯ ಕಡಿಮೆಯಾಗುತ್ತಿರುವುದರೊಂದಿಗೆ ಬಿಹಾರದ ದೊಡ್ಡಣನೆಂಬ ಸ್ಥಾನವನ್ನು ನಿತೀಶ್​ ಕಳೆದುಕೊಳ್ಳುತ್ತಿರುವುದು ಫಲಿತಾಂಶದಲ್ಲೇ ಕಾಣುತ್ತಿದೆ.

    ಇದನ್ನೂ ಓದಿ: ಮೃಗಾಲಯದ ಒಳಹೋಗುತ್ತಿದ್ದಂತೆ ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ನೋಡಿ ಪ್ರವಾಸಿಗ ಶಾಕ್​..!

    ಹೀಗಾಗಿ ಸಿಎಂ ಬದಲಾವಣೆ ಚರ್ಚೆ ಬಿಹಾರದಲ್ಲಿ ಕೇಳಿಬರುತ್ತಿದ್ದು, ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್​ ಕುಮಾರ್​ ಮೋದಿ ಸ್ಪಷ್ಟನೆ ನೀಡಿದ್ದು, ನಿತೀಶ್​ ಕುಮಾರ್​ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದು ನಮ್ಮ ಬದ್ಧತೆಯು ಹೌದು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.

    ಯಾರೇ ಹೆಚ್ಚು ಗೆಲ್ಲಲಿ ಅಥವಾ ಯಾರೇ ಕಡಿಮೆ ಗೆಲ್ಲಲಿ ಅದು ಮುಖ್ಯವಲ್ಲ. ನಾವು ಪಾಲುದಾರರಷ್ಟೇ ಎಂದು ಸುಶೀಲ್​ ಮೋದಿ ತಿಳಿಸುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ತೆರೆಎಳೆದರು.

    ಮಂಗಳವಾರ 8 ಗಂಟೆಗೆ ಆರಂಭವಾದ ಮತದಾನ ತಡರಾತ್ರಿಯಾದರೂ ಮುಗಿಯಲಿಲ್ಲ. 243 ಕ್ಷೇತ್ರಗಳ ಪೈಕಿ ಬಿಜೆಪಿ 74, ಜೆಡಿಯು 43, ಎಚ್​ಎಎಂ 4, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4, ಎಲ್​ಜೆಪಿ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿಕೂಟ ನಿರೀಕ್ಷಿತ ಸರಳ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಪ್ರತಿಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ 19, ಎಐಎಂಇಐಎಂ 5, ಎಡರಂಗ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. (ಏಜೆನ್ಸೀಸ್​)

    ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್​ಜೆಡಿ-ಕಾಂಗ್ರೆಸ್​ ನಿಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts