More

    ‘ನಿರ್ಮಾಣ’ದಿಂದ ಜನ ಹೈರಾಣ

    ಗದಗ: ಗದಗ – ಬೆಟಗೇರಿ ಅವಳಿನಗರ ವ್ಯಾಪ್ತಿಯಲ್ಲಿ ಮನೆ, ವಾಣಿಜ್ಯ ಮಳಿಗೆ ಹಾಗೂ ಇತರೆ ಕಟ್ಟಡಗಳನ್ನು ನಿರ್ವಿುಸಲು ಅಧಿಕೃತ ಕಟ್ಟಡ ಪರವಾನಗಿ ನೀಡಲು ಬಳಸಲಾಗುವ ‘ನಿರ್ವಣ 2’ ಸಾಫ್ಟ್​ವೇರ್​ನಲ್ಲಿನ ತಾಂತ್ರಿಕ ದೋಷದಿಂದಾಗಿ ಜನರು ರೋಸಿ ಹೋಗಿದ್ದಾರೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಐದಾರು ತಿಂಗಳು ಕಳೆದರೂ ಪರವಾನಗಿ ಸಿಗದೆ ಅರ್ಜಿದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ 2 ಸಾಫ್ಟ್​ವೇರ್ ಮೂಲಕ ಆನ್​ಲೈನ್ ಅರ್ಜಿ ಸಲ್ಲಿಸಿ ಪರವಾನಗಿ, ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಸರ್ಕಾರ 2018ರಲ್ಲಿ ಅಭಿವೃದ್ಧಿಪಡಿಸಿ ಲೋಕಾರ್ಪಣೆಗೊಳಿಸಿದ ‘ನಿರ್ವಣ 2’ ಸಾಫ್ಟ್​ವೇರ್​ಗೆ ತಾಂತ್ರಿಕ ದೋಷ ಕಾಡುತ್ತಲೇ ಇದೆ. ಗದಗ – ಬೆಟಗೇರಿ ನಗರಸಭೆಯಲ್ಲಿ ಸಾವಿರಾರು ಜನರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಪರವಾನಗಿಗಾಗಿ ಕಾದು ಕುಳಿತಿದ್ದಾರೆ. ಪರವಾನಗಿ ಇಲ್ಲದೆ ಬ್ಯಾಂಕ್ ಸಾಲವೂ ದೊರೆಯದಂತಾಗಿ, ಜನರು ಹೈರಾಣಾಗಿದ್ದಾರೆ.

    ಏನಿದು ಸಾಫ್ಟ್​ವೇರ್: ಕಟ್ಟಡ ಪರವಾನಗಿ ನೀಡಲು ಸರ್ಕಾರವು ‘ನಿರ್ವಣ 1’ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿತ್ತು. ಇದರಲ್ಲಿ ದಾಖಲೆಗಳನ್ನು ಮ್ಯಾನುಅಲ್ ಆಗಿ ಸಲ್ಲಿಸುವ ಅವಕಾಶವಿತ್ತು. ಅಂತಿಮವಾಗಿ ಡಿಜಿಟಲ್ ಪರವಾನಗಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದು ಅತ್ಯಂತ ಸರಳವಾಗಿತ್ತಲ್ಲದೆ, ನಿಗದಿತ ಮಿತಿಯೊಳಗೆ (45 ದಿನದೊಳಗೆ) ಪರವಾನಗಿ ಜನರಿಗೆ ಲಭ್ಯವಾಗುತ್ತಿತ್ತು. 2018ರಲ್ಲಿ ಜಾರಿಗೊಳಿಸಿದ ‘ನಿರ್ವಣ 2’ ಸಾಫ್ಟ್​ವೇರ್​ನಲ್ಲಿ ಎಲ್ಲ ದಾಖಲೆಗಳನ್ನು ಆನ್​ಲೈನ್ ಮೂಲಕವೇ ಸಲ್ಲಿಸಬೇಕು. ಆನ್​ಲೈನ್ ಮೂಲಕವೇ ಎಲ್ಲ ದಾಖಲೆ ಪರಿಶೀಲಿಸಿ ಅಂತಿಮವಾಗಿ ಪರವಾನಗಿ ಪ್ರಮಾಣಪತ್ರ ನೀಡಲಾಗುತ್ತಿದೆ. ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಒಪ್ಪಂದದ ಮೇರೆಗೆ ಲ್ಯಾಂಡ್ ಬಿಲ್ಡಿಂಗ್ ಪರ್ವಿುಷನ್ ಅಪ್ಲಿಕೇಷನ್ ಸಿಸ್ಟಮ್ (ಎಲ್​ಬಿಪಿಎಎಸ್) ಎಂಬ ಖಾಸಗಿ ಸಂಸ್ಥೆ ಗೆ ‘ನಿರ್ವಣ 2’ ನಿರ್ವಹಣೆ ಮತ್ತು ಪರವಾನಗಿ ಪತ್ರ ನೀಡುವ ಜವಾಬ್ದಾರಿ ನಿರ್ವಹಿಸುತ್ತಿದೆ. ಆದರೆ, ಇಷ್ಟೊಂದು ತಾಂತ್ರಿಕ ದೋಷ ಉಂಟಾದರೂ ಸಂಸ್ಥೆಯವರು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

    ಕಟ್ಟಡ ಪರವಾನಗಿ ಇಲ್ಲದೆ ಬ್ಯಾಂಕ್ ಸಾಲ ನೀಡುವುದಿಲ್ಲ. ಆದ್ದರಿಂದ ಕೂಡಲೇ ‘ನಿರ್ವಣ 2’ ತಾಂತ್ರಿಕ ಸಮಸ್ಯೆ ಬಗೆಹರಿಸಿ ಸರಳವಾಗಿ ಪರವಾನಗಿ ಪತ್ರ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಇಲ್ಲವೇ ಮೊದಲಿನ ‘ನಿರ್ವಣ 1’ ಸಾಫ್ಟ್​ವೇರ್ ಮೂಲಕವೇ ಪರವಾನಗಿ ನೀಡಬೇಕು.
    | ರಾಘವೇಂದ್ರ ಯಳವತ್ತಿ, ಮಾಜಿ ಸದಸ್ಯ, ಗದಗ-ಬೆಟಗೇರಿ ನಗರಸಭೆ

    ಕಳೆದ 15 ದಿನಗಳಿಂದ ‘ನಿರ್ವಣ 2’ ಸಾಫ್ಟ್​ವೇರ್​ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಇದು ಬರೀ ಗದಗ-ಬೆಟಗೇರಿ ನಗರಸಭೆಯೊಂದರ ಸಮಸ್ಯೆಯಲ್ಲ. ರಾಜ್ಯದ ಎಲ್ಲ ನಗರಸಭೆಗಳಲ್ಲೂ ಈ ಸಮಸ್ಯೆ ಉಂಟಾಗಿದೆ. ಈ ಕುರಿತು ಸಂಬಂಧಿಸಿದ ಸಂಸ್ಥೆಯವರ ಜತೆ ರ್ಚಚಿಸಲಾಗಿದ್ದು, 2 ದಿನದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
    | ರಮೇಶ ಜಾಧವ, ಪೌರಾಯಕ್ತ, ಗದಗ-ಬೆಟಗೇರಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts