More

    ಇಂದು ಸಂಜೆ ಮತ್ತೆ ನಿರ್ಮಲಾ ಸುದ್ದಿಗೋಷ್ಠಿ: ಕೃಷಿ ಕ್ಷೇತ್ರಕ್ಕೆ ಉಡುಗೊರೆ ನಿರೀಕ್ಷೆ

    ನವದೆಹಲಿ: ಆತ್ಮನಿರ್ಭರ ಭಾರತ್ ಅಭಿಯಾನದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜನ್ನು ಹೇಗೆ ಹಂಚಲಾಗುತ್ತಿದೆ ಎಂಬುದ ಮೊದಲ ಹಂತರ ವಿವರಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಂಜೆ ನೀಡಿದ್ದರು. ಎಂಎಸ್​​ಎಂಇ ಕ್ಷೇತ್ರಕ್ಕೆ ನೆರವಾಗುವ ರೀತಿಯಲ್ಲಿ ಯಾವೆಲ್ಲ ರೀತಿಯಲ್ಲಿ ಕ್ರಮಗಳನ್ನು ಅನುಸರಿಸಲಾಗಿದೆ ಎಂಬುದರ ವಿವರಣೆಯನ್ನು ಅವರು ನೀಡಿದ್ದರು. ಇಂದು ಎರಡನೇ ಹಂತದ ವಿವರಣೆಯನ್ನು ಅವರು ಸಂಜೆ 4 ಗಂಟೆಗೆ ನೀಡುವ ನಿರೀಕ್ಷೆ ಇದೆ.

    ಇದನ್ನೂ ಓದಿ: 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಬುಧವಾರ ಸಂಜೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಎಂಎಸ್​ಎಂಇ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಘೋಷಿಸಿದ್ದರು. ಅಲ್ಲದೆ, ಎನ್​ಬಿಎಫ್​ಸಿಗಳು, ಎಚ್​ಎಫ್​ಸಿಗಳು, ಎಂಎಫ್​ಐಗಳಿಗೆ ನೆರವಾಗುವ ಲಿಕ್ವಿಡಿಟಿ ವಿಷಯಗಳನ್ನೂ ಅವರು ವಿವರಿಸಿದ್ದರು.

    ಇದನ್ನೂ ಓದಿ: 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಪರಿಣಾಮ ಸೆನ್ಸೆಕ್ಸ್ 1,400 ಅಂಶ ಏರಿಕೆ

    ಇದಕ್ಕೂ ಮುನ್ನ, ಮಂಗಳವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕನೇ ಹಂತದ ಲಾಕ್​ಡೌನ್​ ಹೇಗಿರಲಿದೆ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ಪ್ಯಾಕೇಜ್​ ವಿಚಾರವನ್ನು ಸಂಕ್ಷಿಪ್ತವಾಗಿ ಘೋಷಿಸಿದ್ದರು. ಇದರ ವಿವರಣೆಯನ್ನು ವಿತ್ತ ಸಚಿವರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದೇಶದ ಜನರಿಗೆ ನೀಡಲಿದ್ದಾರೆ ಎಂದೂ ಹೇಳಿದ್ದರು.

    ಇದನ್ನೂ ಓದಿ: ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

    ಇದರಂತೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿತ್ತ ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ನಿನ್ನೆ ಮೊದಲ ಹಂತದ ವಿವರಣೆ ನೀಡಿದ್ದರು. ಇಂದು ಕೃಷಿ ಮತ್ತು ಅದಕ್ಕೆ ಪೂರಕ ಚಟುವಟಿಕೆಗಳ ಕುರಿತ ವಿವರಣೆಯನ್ನು ನೀಡಬಹುದೆಂಬ ನಿರೀಕ್ಷೆ ಇದೆ. ಅಲ್ಲದೆ, ಪೂರೈಕೆ ಜಾಲ ಎದುರಿಸುತ್ತಿರುವ ಸವಾಲುಗಳನ್ನು ಸರಿದೂಗಿಸುವ ಪ್ರಯತ್ನವನ್ನೂ ಇಂದು ಮಾಡುವ ಸಾಧ್ಯತೆ ಇದೆ. (ಏಜೆನ್ಸೀಸ್)

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts