More

    ಇಂದಿನ ಘೋಷಣೆ ತಾತ್ಕಾಲಿಕವಾಗಿ ಪರಿಣಾಮಕಾರಿ- ತಜ್ಞರ ಮಾತು

    ಇಂದಿನ ಘೋಷಣೆ ತಾತ್ಕಾಲಿಕವಾಗಿ ಪರಿಣಾಮಕಾರಿ- ತಜ್ಞರ ಮಾತು

    |ಸಿ.ಎಸ್‌.ಸುಧೀರ್‌
    ಸಿಇಒ, ಸಂಸ್ಥಾಪಕರು ಇಂಡಿಯನ್​ ಮನಿ ಡಾಟ್‌ ಕಾಂ

    20 ಸಾವಿರ ಕೋಟಿ ಪ್ಯಾಕೇಜ್‌ ಘೋಷಣೆ ಮಾಡುವುದಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಅದರ ಮೊದಲ ಭಾಗವಾಗಿ ಇಂದು 15 ಅಂಶಗಳನ್ನು ಮಾತ್ರ ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಘೋಷಣೆ ಮಾಡಿದ್ದಾರೆ.

    ಇವತ್ತು ಮಾಡಿರುವ ಘೋಷಣೆಯಲ್ಲಿ ಹೆಚ್ಚಿನ ಅನುಕೂಲ ಆಗಿರುವುದು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ . ಅದನ್ನು ಹೊರತುಪಡಿಸಿದರೆ ಸಾಮಾನ್ಯ ಜನರು ಹಾಗೂ ಕಂಪನಿಗಳಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ ಅಷ್ಟೇ.

    ಇದನ್ನೂ ಓದಿ: ಟಿಡಿಎಸ್​ ಕಡಿತ ಯಾರಿಗೆ? ಎಂಎಸ್​ಎಂಇಗಳಿಗೇಕೆ ಅಷ್ಟು ಹಣ ಮೀಸಲು?-ತಜ್ಞರ ಉತ್ತರ…

    100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಮತ್ತು ಶೇ.90 ರಷ್ಟು ನೌಕರರು 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವವರು ಇದ್ದ ಪಕ್ಷದಲ್ಲಿ ಅವರ ಭವಿಷ್ಯ ನಿಧಿಯನ್ನು ಮೂರು ತಿಂಗಳವರೆಗೆ ತಾನೇ ಭರಿಸುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಅದನ್ನೀಗ ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಕಂಪನಿಗಳು ಸದ್ಯದ ಮಟ್ಟಿಗೆ ನಿರಾಳವಾಗಬಹುದಾಗಿದೆ.

    ಇನ್ನು ಸಾಮಾನ್ಯ ವರ್ಗದವರ ಮಾತಿಗೆ ಬರುವುದಾದರೆ, ಆದಾಯ ತೆರಿಗೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇದರಿಂದ ತೆರಿಗೆದಾರರಿಗೆ ಸ್ವಲ್ಪ ಸಮಯ ಸಿಗಲಿದೆ ಅಷ್ಟೇ. ಇದರ ಜತೆಗೆ, ಈ ಹಿಂದೆ ನೌಕರರ ಆದಾಯದ ಆಧಾರದ ಮೇಲೆ ಸಿಬ್ಬಂದಿ ಶೇ.12ರಷ್ಟು ಪಿಎಫ್‌ ಕಟ್‌ ಆಗುತ್ತಿತ್ತು.

    ಅದೀಗ ಶೇ.10ಕ್ಕೆ ಇಳಿಸುವಂತೆ ಹೇಳಲಾಗಿದೆ. ಇದರಿಂದ ಮಾಸಿಕ ವರಮಾನದಲ್ಲಿ ನೌಕರರಿಗೆ ಕೊಂಚ ಹೆಚ್ಚಿನ ಆದಾರ ಸಿಗಲಿದೆ. ಇದರಿಂದಾಗಿ 75 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಸಂಸ್ಥೆಗಳು ಪ್ರಯೋಜನ ಸಿಗಲಿದೆ ಎಂದು ಸಚಿವೆ ಹೇಳಿದ್ದಾರೆ.

    ಇದನ್ನೂ ಓದಿ: ಕೃಷಿ ಕಾರ್ಮಿಕರು, ಜನ್​ಧನ್​ ಖಾತೆದಾರರು ಹಾಗೂ ಸಣ್ಣ ಕೈಗಾರಿಕೆದಾರರಿಗೆ ಬಂಪರ್​ ಗಿಫ್ಟ್​- ತಜ್ಞರ ಅಭಿಮತ

    ಉದ್ದಿಮೆದಾರರು ಈಗ ಮಾಡಿರುವ ಸಾಲ ಹಾಗೂ ಕಂಪನಿಯ ಟರ್ನ್‌ ಓವರ್‌ ಆಧಾರದ ಮೇಲೆ ಈಗಿರುವ ಸಾಲಕ್ಕಿಂತ ಶೇ.20ರಷ್ಟು ಹೆಚ್ಚು ಸಾಲವನ್ನು ನೀಡಬೇಕು ಎಂದು ಸರ್ಕಾರ ಹೇಳಿರುವುದರಿಂದ ಉದ್ದಿಮೆದಾರರು ಕೊಂಚ ನಿರಾಳರಾಗಬಹುದು. ಇದಕ್ಕೆ ಭದ್ರತೆಯನ್ನೂ ಸರ್ಕಾರವೇ ಕೊಡುವುದಾಗಿ ಭರವಸೆ ನೀಡಿದ್ದು ಇನ್ನೊಂದು ಪ್ಲಸ್‌ ಪಾಯಿಂಟ್‌. ಉಳಿದ ಘೋಷಣೆಗಳು ಇನ್ನೂ ಬರಬೇಕಾಗಿದ್ದು, ಆ ನಂತರದಲ್ಲಿ ಫಲಾಫಲಗಳ ಬಗ್ಗೆ ಗಮನ ಹರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts