More

    ನಿರ್ಭಯಾ ರೇಪಿಸ್ಟ್​ಗಳನ್ನು ಜನವರಿ 22ರಂದು ಗಲ್ಲಿಗೇರಿಸಲಾಗದು: ಕೋರ್ಟ್​ಗೆ ದೆಹಲಿ ಸರ್ಕಾರದ ಹೇಳಿಕೆ

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲಾಗದು. ಅದು ಸರಿಯಲ್ಲ ಎಂದು ದೆಹಲಿ ಸರ್ಕಾರ ಬುಧವಾರ ಹೈಕೋರ್ಟ್​ಗೆ ಹೇಳಿದೆ.

    ನಿರ್ಭಯಾ ರೇಪಿಸ್ಟ್​ಗಳನ್ನು ಜನವರಿ 22ರಂದು ಗಲ್ಲಿಗೇರಿಸುವುದಕ್ಕೆ ದಿನ ನಿಗದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಜನವರಿ 22ರ ಬೆಳಗ್ಗೆ 7 ಗಂಟೆಗೆ ನೇಣಿಗೇರಿಸುವಂತೆ ದೆಹಲಿ ಕೋರ್ಟ್ ಆದೇಶಿಸಿತ್ತು.

    ತಿಹಾರ್ ಜೈಲು ಆಡಳಿತದ ಪರ ನ್ಯಾಯವಾದಿ ರಾಹುಲ್ ಮೆಹ್ರಾ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದು, ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ತಿರಸ್ಕರಿಸಿದ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸುವುದು ಸಾಧ್ಯ. ನಾವು ಕಾನೂನಿನ ಚೌಕಟ್ಟಿನಲ್ಲಿ ಬದುಕುತ್ತಿರುವ ಕಾರಣ ರಾಷ್ಟ್ರಪತಿಗಳಿಂದ ದಯಾ ಅರ್ಜಿ ತಿರಸ್ಕೃತವಾದ 14 ದಿನಗಳ ಬಳಿಕವಷ್ಟೇ ನೇಣು ಶಿಕ್ಷೆ ಜಾರಿಯಾಗಬೇಕು. ಈ ಹದಿನಾಲ್ಕು ದಿನಗಳ ಅವಧಿಯನ್ನು ಅಪರಾಧಿಗಳಿಗೆ ನೀಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮುಕೇಶ್ ದಯಾ ಅರ್ಜಿಯನ್ನು ಮಂಗಳವಾರವಷ್ಟೇ ರಾಷ್ಟ್ರಪತಿಗಳಿಗೆ ರವಾನಿಸಿದ್ದಾನೆ. ಮರಣ ದಂಡನೆ ಶಿಕ್ಷೆ ಪರಿಷ್ಕರಿಸುವಂತೆ ಕೋರಿ ದೆಹಲಿ ಹೈಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದಾನೆ. ಅಪರಾಧಿಯ ದಯಾ ಅರ್ಜಿ ದೆಹಲಿಯ ಎಲ್​ಜಿ ಮತ್ತು ರಾಷ್ಟ್ರಪತಿಗಳ ಎದುರು ಬಾಕಿ ಇರುವಾಗ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗದು ಎಂಬ ಅಂಶವೂ ಅರ್ಜಿಯಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts