More

    ಕೊಟ್ಟ ಮಾತಿನಂತೆ ನಿರ್ಭಯಾ ಹಂತಕರ ಹ್ಯಾಂಗ್​ಮನ್​ಗೆ 1 ಲಕ್ಷ ರೂ. ದೇಣಿಗೆ ನೀಡಿ ನಟ ಜಗ್ಗೇಶ್​ ಹೇಳಿದ್ದು ಹೀಗೆ…

    ಬೆಂಗಳೂರು: ನಿರ್ಭಯಾ ಗ್ಯಾಂಗ್​ರೇಪ್​ ಮತ್ತು ಕೊಲೆ ಅಪರಾಧಿಗಳನ್ನು ನೇಣಿಗೇರಿಸುವ ಹ್ಯಾಂಗ್​ಮನ್​ ಪವನ್​ ಜಲ್ಲಾದ್​ ಅವರಿಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಈ ಮೊದಲು ಹೇಳಿದ ಮಾತಿನಂತೆಯೇ ನವರಸ ನಾಯಕ ಜಗ್ಗೇಶ್​ ನಡೆದುಕೊಂಡಿದ್ದಾರೆ.

    ಹ್ಯಾಂಗ್​ಮನ್​ ಪವನ್​ ಜಲ್ಲಾದ್​ ಕುಟುಂಬದವರು ಹಿಂದಿನಿಂದಲೂ ಹ್ಯಾಂಗ್​ಮನ್​ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ಈಗ ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೆ ಹಾಕಿರುವ ಪವನ್​ ಜಲ್ಲಾದ್​, ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ಈ ಮೊದಲು ದೇವರಿಗೆ ನಮಿಸಿದ್ದರು.

    ಈ ಬಗ್ಗೆ ವಿಜಯವಾಣಿ ವೆಬ್​ಸೈಟ್​ (Vijayavani.net)ನಲ್ಲಿ ಜನವರಿ 9ರಂದು ಸುದ್ದಿ ಪ್ರಕಟವಾಗಿತ್ತು. ಸುದ್ದಿಯ ಲಿಂಕ್​ನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿ, ಮಾನ್ಯರೇ ರಾಕ್ಷಸ ಸಂಹಾರವೆಂಬುದು ದೇವರ ನಿಯಮ. ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದು ನೀವು ಹೇಳಿದ್ದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ನನ್ನ ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಆ ಹಣವನ್ನು ನಿಮಗಾಗಿ ಇಂದೇ ಮೀಸಲಿಟ್ಟಿದ್ದೇನೆ. ದುರುಳ ನಿಗ್ರಹವೂ ದೇವರ ಸೇವೆ…ಹರಿ ಓಂ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದರು.

    ಇದೀಗ ಕೊಟ್ಟ ಮಾತಿಗೆ ನಡೆದುಕೊಂಡಿದ್ದು, ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಜಗ್ಗೇಶ್,​ ತಮ್ಮ ಸಹಿಯುಳ್ಳ ಒಂದು ಲಕ್ಷ ರೂ. ಚೆಕ್​ ಫೋಟೋವನ್ನು ಪೋಸ್ಟ್​ ಮಾಡಿ, ಕೊಟ್ಟ ಮಾತಿನಂತೆ 1 ಲಕ್ಷ ರೂ. ಅನ್ನು ನಿರ್ಭಯಾ ಹಂತಕರ ಹ್ಯಾಂಗ್​ಮನ್​ಗೆ ದೇಣಿಗೆ ನೀಡುತ್ತಿದ್ದೇನೆ ಎಂದಿದ್ದಾರೆ.

    ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲ. ಈ ದಿನಕ್ಕೆ ಹಲ್ಲುಕಚ್ಚಿ ಕಾಯುತ್ತಾ ದುಷ್ಟ ಕ್ರಿಮಿಗಳಿಗೆ ಅಂತ್ಯ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆಮಾಡದೆ ಇಡೀ ರಾತ್ರಿ ಕಾದೆ. ಹರಿಓಂ. ಶುಭದಿನ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

    ಇಂದು ಬೆಳಗ್ಗೆ 5.30ಕ್ಕೆ ನಿರ್ಭಯಾ ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್​, ಪವನ್​ ಕುಮಾರ್​ ಗುಪ್ತ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಸಿಂಗ್​ರನ್ನು ಹ್ಯಾಂಗ್​ಮನ್​ ಪವನ್​ ಜಲ್ಲಾದ್​ ತಿಹಾರ್​ ಜೈಲಿನಲ್ಲಿ ನೇಣಿಗೇರಿಸಿದರು.

    23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಡಿಸೆಂಬರ್​ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು. ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.

    ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಪವನ್​ ಜಲ್ಲಾದ್​ಗೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ ನಟ ಜಗ್ಗೇಶ್​…

    ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧ: ಮಗಳ ಮದುವೆಗೆ ಹಣ ಹೊಂದಿಸಲು ದೇವರೇ ಕೊಟ್ಟ ಅವಕಾಶ ಎಂದ ಪವನ್ ಜಲ್ಲಾದ್!

    ಜೈಲು ವಾಸದ ಅವಧಿಯಲ್ಲಿ ನಿರ್ಭಯಾ ಅಪರಾಧಿಗಳು ಸಂಪಾದಿಸಿದ ಹಣವೆಷ್ಟು? ಎಷ್ಟು ಬಾರಿ ಜೈಲು ನಿಯಮ ಉಲ್ಲಂಘಿಸಿದರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts