More

    ಕಾನೂನಿನ ಆಶಯವನ್ನು ಹುಸಿಗೊಳಿಸಲು ನಿರ್ಭಯಾ ಅಪರಾಧಿಗಳ ಯತ್ನ: ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ವಾದ ಮಂಡನೆ

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳು ತಮ್ಮ ಮರಣದಂಡನೆಯನ್ನು ವಿಳಂಬಗೊಳಿಸುವ ಮೂಲಕ ಕಾನೂನನ್ನು ಟೊಳ್ಳಾಗಿಸಲು ಉದ್ದೇಶಪೂರ್ವಕ ಲೆಕ್ಕಾಚಾರ ಹಾಕಿದ್ದಾರೆ ಎಂದು ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ದೆಹಲಿ ಹೈಕೋರ್ಟ್​ಗೆ ಹೇಳಿದ್ದಾರೆ.

    ಅಪರಾಧಿ ಪವನ್​ ಗುಪ್ತಾ ಕ್ಯುರೇಟಿವ್​ ಅರ್ಜಿ ಆಥವಾ ದಯಾ ಮರಣದ ಅರ್ಜಿಯನ್ನು ಸಲ್ಲಿಸದೇ ಇರುವುದು ಇಂತಹದ್ದೇ ಒಂದು ಯೋಚನೆ ಎಂದು ಕೊರ್ಟ್​ಗೆ ತಿಳಿಸಿದರು.

    ದೆಹಲಿ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು ಕೇಂದ್ರ ಸರ್ಕಾರದ ಪರವಾಗಿ ಮೆಹ್ತಾ ವಾದ ಮಂಡಿಸಿದರು. ನ್ಯಾಯದ ಹಿತದೃಷ್ಟಿಯಿಂದ ಯಾವುದೇ ವಿಳಂಬವಾಗಬಾರದು. ಅದರಲ್ಲೂ ಮರಣದಂಡನೆ ವಿಳಂಬ ಮಾಡಲಾಗುವುದಿಲ್ಲ. ಮರಣದಂಡನೆಯ ವಿಳಂಬದಿಂದ ಆರೋಪಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಫೆಬ್ರವರಿ 1ರಂದು ನಡೆಯಬೇಕಿದ್ದ ಗಲ್ಲು ಶಿಕ್ಷೆಯನ್ನು ಶುಕ್ರವಾರ ಕೋರ್ಟ್​ ಮುಂದಿನ ಆದೇಶ ನಿಡುವವರೆಗೆ ಮುಂದೂಡಿತ್ತು. ಈ ವೇಳೆ ಅಪರಾಧಿ ವಿನಯ್ ಶರ್ಮಾ, ರಾಷ್ಟ್ರಪತಿಗಳ ಮುಂದೆ ದಯಾ ಅರ್ಜಿಯನ್ನು ಸಲ್ಲಿಸಲಾಗಿದೆ, ಹಾಗಾಗಿ ಮರಣದಂಡನೆಯನ್ನು ತಡೆಹಿಡಿಯಲು ಕೋರಿದ್ದನು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts