More

    ನಿಮ್ಹಾನ್ಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಡಿ.7 ಕೊನೇ ದಿನ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್​) ಬೆಂಗಳೂರು ಮತ್ತು ಧಾರವಾಡ ಘಟಕಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಡಿ.7 ಕೊನೇ ದಿನ.

    ಹುದ್ದೆಗಳ ವಿವರ
    ಹಿರಿಯ ಸಲಹೆಗಾರ ಮನೋವೈದ್ಯ-2
    ಸಲಹೆಗಾರ ಮನೋವೈದ್ಯ- 4
    ಕ್ಲಿನಿಕಲ್​ ಸೈಕಾಲಜಿಸ್ಟ್​/ ಮನೋವೈದ್ಯಕೀಯ ಸಮಾಜ ಸೇವಕ-6
    ಸಲಹೆಗಾರ (ಕೌನ್ಸಿಲರ್​)-20
    ತಾಂತ್ರಿಕ ಸಂಯೋಜಕರು/ ಪ್ರಾಜೆಕ್ಟ್​ ಸಂಯೋಜಕರು-2

    ವಿದ್ಯಾರ್ಹತೆ: ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗಳಿಸಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಡಿ, ಡಿಎನ್​ಬಿ, ಡಿಪಿಎಂ, ಎಂ.ಫಿಲ್​., ಎಂಎ, ಎಂಎಸ್ಸಿ, ಎಂಎಸ್​ಡಬ್ಲ್ಯು, ಡಿಪ್ಲೊಮಾ, ಬಿಇ, ಬಿಟೆಕ್​, ಎಂಸಿಎ ವಿಷಯವನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಿಶೇಷ ಸೂಚನೆ: ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದುವುದು, ಬರೆಯುವುದು ಮತ್ತು ಮಾತನಾಡುವುದಕ್ಕೆ ಬರಬೇಕು. ಕೆಲಸದಲ್ಲಿ ಅನುಭವ ಹೊಂದಿರುವ ಜೊತೆಗೆ ಹೊಸಬರಿಗೂ ಅವಕಾಶವಿರುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಹುದ್ದೆಯ ಅವಧಿ ವಿಸ್ತರಿಸುವ ಸಾಧ್ಯತೆ ಇರುತ್ತದೆ.

    ವಯೋಮಿತಿ: ನಿಮ್ಹಾನ್ಸ್​ ನಿಯಾಮನುಸಾರ ಕನಿಷ್ಠ 35 ಹಾಗೂ ಗರಿಷ್ಠ 50 ವರ್ಷ ಮೀರದ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಹುದ್ದೆಗಳಿಗೆ ಅನುಗುಣವಾಗಿ 25,000 ರೂ.ನಿಂದ 1,10,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸುವ ವಿಧಾನ
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ನಿಮ್ಹಾನ್ಸ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರ ಭರ್ತಿ ಮಾಡಿ, ಸ್ವವಿವರ, ಪದವಿ ಪ್ರಮಾಣ ಪತ್ರಗಳ ಪ್ರತಿಗಳು, ಅನುಭವ ಪ್ರಮಾಣಪತ್ರಗಳ ಪ್ರತಿಗಳನ್ನು ಈ karnatakastate.telemanascellgmail.com ಇಮೇಲ್​ ಐಡಿಗೆ ಕಳುಹಿಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

    ಅಧಿಸೂಚನೆಗೆ: http://bit.ly/3Xf0m7M, ttp://bit.ly/3V7Tg36
    ಅರ್ಜಿ ಸಲ್ಲಿಸಲು ಕೊನೇ ದಿನ: 7-.12.-2022
    ಮಾಹಿತಿಗಾಗಿ: https://nimhans.ac.in/

    2023ನೇ ಸಾಲಿನ ‘ಸಾರ್ವತ್ರಿಕ ರಜೆ- ಪರಿಮಿತ ರಜೆ’ಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

    ಬಾಗಲಕೋಟೆ ಜಿಪಂ ವ್ಯಾಪ್ತಿಯಲ್ಲಿ ವಿವಿಧ 54 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

    ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts