ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!

ಕುಣಿಗಲ್​: ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್​ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ.ರಸ್ತೆ ಮಾಗಡಿಪಾಳ್ಯ ಬಳಿ ಸಂಭವಿಸಿದೆ. ಭಾನುವಾರ ಚಲಿಸುತ್ತಿದ್ದ ಸ್ಕೂಟಿಯಿಂದ ಕೆಳಗೆ ಬಿದ್ದು ಅತ್ತೆ ಮೃತಪಟ್ಟು, ಸೋಸೆ ಗಾಯಗೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ವಾಸವಿದ್ದ ಪದ್ಮಮ್ಮ (60) ಮೃತ ದುರ್ದೈವಿ. ಸೊಸೆ ಶೃತಿ(ಹೇಮಾ) ಗಾಯಗೊಂಡಿದ್ದು, ಕುಣಿಗಲ್​ ಪಟ್ಟಣದ ಸರ್ಕಾರಿ ಆಸ್ಪತ್ರೆದೆ ದಾಖಲಿಸಲಾಗಿದೆ. ಕುಣಿಗಲ್​ನ ಎಡೆಯೂರು ಹೋಬಳಿ ವೈ.ಅಂಪಾಪುರ ಮೂಲದ ಇವರು ಬೆಂಗಳೂರಿನಲ್ಲಿ ವಾಸವಿದ್ದರು. ಅತ್ತೆ-ಸೊಸೆ ಇಬ್ಬರೂ ಬೆಂಗಳೂರಿನಿಂದ … Continue reading ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!