More

  VIDEO| ಭಾವಿ ಪತ್ನಿ ರೇವತಿ ಬಗ್ಗೆ ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ಕುಮಾರಸ್ವಾಮಿ ಹೇಳಿದ್ದು ಹೀಗೆ…

  ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಈಗ ನಟ ನಿಖಿಲ್​ ಕುಮಾರಸ್ವಾಮಿ ಅವರ ಮದುವೆಯದ್ದೇ ಮಾತಾಗಿದೆ. ಕಾಂಗ್ರೆಸ್​ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳಾದ ರೇವತಿಯನ್ನು ನಿಖಿಲ್​ ವರಿಸಲಿದ್ದಾರೆ. ಹೀಗಾಗಿ ತಮ್ಮ ಭಾವಿ ಪತ್ನಿ ಬಗ್ಗೆ ದಿಗ್ವಿಜಯ ನ್ಯೂಸ್​ ಜತೆ ನಿಖಿಲ್​ ಮನಬಿಚ್ಚಿ ಮಾತನಾಡಿದ್ದು, ಅದರ ಪ್ರಮುಖಾಂಶ ಇಲ್ಲಿದೆ….

  ಮೊದಲಿಗೆ ಮದುವೆ ಗಾಸಿಪ್​ ಬಗ್ಗೆ ಮಾತು ಆರಂಭಿಸಿದ ನಿಖಿಲ್​, ಮದುವೆ ಫಿಕ್ಸ್​ ಆಗಿರುವುದು ನನಗೆ ಒಂದು ರೀತಿಯ ಸಮಾಧಾನವಾಗಿದೆ. ಏಕೆಂದರೆ ನಾನು ಕೂಡ ಚಿತ್ರರಂಗದಲ್ಲಿರುವುದರಿಂದ ನನ್ನ ಹೆಸರನ್ನು ಬೇರೆಯವರೊಂದಿಗೆ ಥಳುಕು ಹಾಕಲಾಗುತ್ತಿತ್ತು. ಇದರಿಂದ ನನಗೆ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ. ನನಗಾದರೆ ಪರವಾಗಿಲ್ಲ, ಹೆಣ್ಣು ಮಕ್ಕಳನ್ನೂ ಲಿಂಕ್​ ಮಾಡುತ್ತಿದ್ದರು. ಸದ್ಯ ಇದಕ್ಕೆ ಪೂರ್ಣ ವಿರಾಮ ಬೀಳಲಿದೆ. ನಾನಿಲ್ಲಿ ಯಾರನ್ನು ದೂರುತ್ತಿಲ್ಲ. ಚಿತ್ರರಂಗದಲ್ಲಿ ಇದೆಲ್ಲಾ ಸಾಮಾನ್ಯ ಎಂದರು.

  ಇಂದು ನಮ್ಮ ತಂದೆ-ತಾಯಿಯವರು ಅದರಲ್ಲೂ ವಿಶೇಷವಾಗಿ ನಮ್ಮ ತಾತಾ-ಅಜ್ಜಿ, ಇಡೀ ಕುಟುಂಬ ನನಗೆ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ. ಆ ಹೆಣ್ಣು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದರು.

  ರೇವತಿಯವರು ರಾಜಕೀಯ ಕುಟುಂಬದವರಲ್ಲ. ಅವರ ತಂದೆ ಉದ್ಯಮಿಯಾಗಿದ್ದಾರೆ. ಅವರಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್​ ಶಾಸಕ ಕೃಷ್ಣಪ್ಪ ಅವರ ಸಂಬಂಧ ಇರುವುದರಿಂದ ಈ ರೀತಿ ಬಿಂಬಿತವಾಗುತ್ತಿದೆ. ಆಮೇಲೆ ನನಗೆ ರೇವತಿಯವರ ಪರಿಚಯವಿಲ್ಲ. ಇನ್ನು ನಾ ಅವರನ್ನು ನೋಡಿಲ್ಲ. ಅವರೊಟ್ಟಿಗೆ ಮಾತಾಡಿಲ್ಲ. ಮುಂದಿನ ದಿನಗಳಲ್ಲಿ ಮಾತಾಡುತ್ತೇನೆ. ಇದು ಸಂಪೂರ್ಣ ಅರೆಂಜ್​ ಮ್ಯಾರೇಜ್​ ಎಂದರು.

  ಮುಂದುವರಿದು ಮದುವೆ ಯೋಜನೆ ಬಗ್ಗೆ ಮಾತನಾಡಿದ ನಿಖಿಲ್​, ದೊಡ್ಡ ಯೋಜನೆ ಏನಿಲ್ಲ. ನಮ್ಮನ್ನು ಪ್ರೀತಿಸುವವರ ನಡುವೆ ಮದುವೆ ಮಾಡಿಕೊಳ್ಳಬೇಕು ಮತ್ತು ಅವರಿಗೆ ಒಂದು ಒಳ್ಳೆಯ ಊಟ ಹಾಕಿಸಬೇಕು ಎಂಬ ನಿರೀಕ್ಷೆಯಲ್ಲಿ ನಾನು ಮತ್ತು ನನ್ನ ತಂದೆ ಇದ್ದೇವೆ ಎಂದು ಹೇಳಿದರು.

  ಮದುವೆ ಯಾವಾಗ ನಡೆಯುತ್ತಿದೆ ಎಂಬುವುದಕ್ಕೆ ಉತ್ತರಿಸಿದ ನಿಖಿಲ್​, ಹಂತ ಹಂತವಾಗಿ ತಿಳಿಸುತ್ತೇವೆ. ಇನ್ನೂ ಹಲವಾರು ಕಾರ್ಯಕ್ರಮಗಳು ನಡೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಹೇಳುವ ಸಂಗೀತ ಅಥವಾ ಮೆಹಂದಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ನಮ್ಮ ಸಂಪ್ರದಾಯದಂತೆ ಮದುವೆ ಆಗಬೇಕು ಎನ್ನುವ ಭಾವನೆ ನನ್ನಲ್ಲಿದೆ. ಹೀಗಾಗಿ ಹಂತ ಹಂತವಾಗಿ ಎಲ್ಲವನ್ನು ಹೇಳುತ್ತೇನೆ. ಇನ್ನು ದಿನಾಂಕ ನಿಗದಿಯಾಗಿಲ್ಲ. ಫಿಕ್ಸ್​ ಆದಮೇಲೆ ಅದನ್ನು ಹೇಳುತ್ತೇನೆ ಎಂದು ನಿಖಿಲ್​ ಮಾತು ಮುಗಿಸಿದರು. (ದಿಗ್ವಿಜಯ ನ್ಯೂಸ್​) ​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts