More

    ಕಡೆಗೂ ರಾತ್ರಿ ಕರ್ಫ್ಯೂ ರದ್ದು; ಜಾರಿಗೆ ಮೊದಲೇ ನಿರ್ಧಾರ ವಾಪಸ್ ಪಡೆದ ಸರ್ಕಾರ

    ಬೆಂಗಳೂರು: ಸಾರ್ವಜನಿಕರ ಜತೆಗೆ ವಿವಿಧ ಉದ್ಯಮಗಳು, ರಾಜಕೀಯ ಪಕ್ಷಗಳ ಅಸಮಾಧಾನ, ಟೀಕೆಗೆ ಕಾರಣವಾಗಿದ್ದ ರಾತ್ರಿ ಕರ್ಫ್ಯೂ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಗುರುವಾರ ರಾತ್ರಿ 11ರಿಂದ ಕರ್ಫ್ಯೂ ಜಾರಿಯಾಗುವುದಕ್ಕೆ ಕೆಲವೇ ತಾಸು ಇರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ತೀರ್ಮಾನ ಪ್ರಕಟಿಸಿದ್ದಾರೆ. ಇದರಿಂದ ರಾಜ್ಯದ ಜನತೆ ನಿಟ್ಟುಸಿರುಬಿಟ್ಟಿದ್ದಾರೆ.

    ಬ್ರಿಟನ್​ನಲ್ಲಿ ರೂಪಾಂತರಿ ಕರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸಲು ಮುಂದಾಗಿತ್ತು. ಮೊದಲಿಗೆ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಬುಧವಾರ ರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದಿತ್ತು. ಉದ್ಯಮ-ವಹಿವಾಟು ವಲಯದ ಮನವಿಗೆ ಓಗೊಟ್ಟು ರಾತ್ರಿ 11 ರಿಂದ ಬೆಳಗ್ಗೆ 5ರವರೆಗೆ ಎಂದು ವೇಳೆ ಬದಲಿಸಿ, ಗುರುವಾರದಿಂದ ಜಾರಿಗೆ ತರುವ ನಿರ್ಧಾರ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಸಲಹೆ, ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಗಳನ್ನು ಪರಿಗಣಿಸಿ ಜನರ ಹಿತದೃಷ್ಟಿಯಿಂದ ಈ ಕ್ರಮ ಎಂದು ಸಮರ್ಥಿಸಿಕೊಂಡಿತ್ತು. ರಾತ್ರಿ ಕರ್ಫ್ಯೂ ಸಂಬಂಧ ಹೊರಡಿಸಿದ ಮಾರ್ಗಸೂಚಿಯಲ್ಲೂ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಎಲ್ಲೋ ಎಡವಟ್ಟಾಗಿದೆ, ಸರ್ಕಾರ ಆತುರದ ನಿರ್ಧಾರಕ್ಕೆ ಬಂದಿದೆ ಎಂಬ ಅನುಮಾನಗಳಿಗೆ ಪುಷ್ಟಿ ನೀಡಿತ್ತು. ಕಟುವಾದ ಟೀಕೆ-ಟಿಪ್ಪಣಿ, ತೀವ್ರ ಒತ್ತಡ, ಸ್ವಪಕ್ಷದವರ ಆಕ್ಷೇಪಕ್ಕೆ ಸಿಎಂ ಸ್ಪಂದಿಸುವುದರೊಂದಿಗೆ ಕರ್ಫ್ಯೂ ಪ್ರಸಂಗ ಕೊನೆಗೊಂಡಿತು.

    ಜನಾಭಿಪ್ರಾಯದ ಹಿನ್ನೆಲೆಯಲ್ಲಿ ನಿರ್ಧಾರ ಮರುಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ವನಿಸಲಾಗಿದೆ. ಜನರು ಸ್ವಯಂ ನಿರ್ಬಂಧ ವಿಧಿಸಿಕೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ವಾಕ್ಸಮರಕ್ಕೆ ಆಹಾರ: ರಾತ್ರಿ ಕರ್ಫ್ಯೂ ನಿರ್ಧಾರವು ರಾಜಕೀಯ ನಾಯಕರ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಹಗಲು ವೈರಸ್ ಹರಡುವುದಿಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿ, ವೈಫಲ್ಯ ಮುಚ್ಚಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದರು. ಪ್ರತಿಪಕ್ಷಗಳು ಸಹಕಾರ ಕೊಟ್ಟಿವೆಯೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕಾಗಿ ಕರೊನಾ ನಿಯಂತ್ರಣ ವಿಷಯ ರ್ಚಚಿಸಲು ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು. ಸಂಸದ ಡಿ.ಕೆ.ಸುರೇಶ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜವಾಬ್ದಾರಿ ನಿರ್ವಹಣೆ ಹಾಗೂ ಕರೊನಾ ನಿಯಂತ್ರಣದಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.

    ಸುಧಾಕರ್ ತಿರುಗೇಟು

    ಜನರ ನಡವಳಿಕೆಯಲ್ಲಿ ಶಿಸ್ತು ತಂದು ಸೋಂಕಿನ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ರಾತ್ರಿ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿತ್ತೆಂದು ಡಾ.ಕೆ.ಸುಧಾಕರ್ ಪುನರುಚ್ಚರಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಜವಾಬ್ದಾರಿ ನಿರ್ವಹಣೆ ವಿಷಯದಲ್ಲಿ ನನಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ. ಪ್ರೀತಿ ಹೆಚ್ಚಿರುವ ಕಾರಣಕ್ಕೆ ಟೀಕೆಗೆ ನನ್ನನ್ನೇ ಗುರಿಯಾಗಿಸಿದ್ದಾರೆ’ ಎಂದು ಡಿಕೆಶಿ ಸೋದರರಿಗೆ ಟಾಂಗ್ ಕೊಟ್ಟರು.

    ಜನರ ಹೆಗಲಿಗೆ ಹೊಣೆ

    ರಾತ್ರಿ ಕರ್ಫ್ಯೂ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವ ಮೂಲಕ ರೂಪಾಂತರಿ ಕರೊನಾ ವೈರಸ್ ಹಾಗೂ ಸಂಭಾವ್ಯ 2ನೇ ಅಲೆ ನಿಯಂತ್ರಣದ ವಿಷಯದಲ್ಲಿ ಜನರ ಹೆಗಲಿಗೆ ಹೆಚ್ಚಿನ ಹೊಣೆ ಹೊರಿಸಿದೆ. ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕಾಣಿಸಿರುವ ಹೊಸ ಮಾದರಿ ವೈರಾಣು ಸೋಂಕಿತರು ಹಾಗೂ ಶಂಕಿತರ ಪತ್ತೆಯಿಂದ ಹಿಡಿದು, ಮುನ್ನೆಚ್ಚರಿಕೆ ನಿಯಮಗಳ ಪಾಲನೆಯಲ್ಲಿ ಜನರಿಂದ ಗರಿಷ್ಠ ಮುತುವರ್ಜಿಯನ್ನು ಸರ್ಕಾರ ಬಯಸಿದೆ. ಮಾಸ್ಕ್ ಧರಿಸುವುದು, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕರೊನಾ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮನವಿ ಮಾಡಿದೆ. ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಅನಗತ್ಯವಾಗಿ ಸಂಚರಿಸದೆ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಿ, ಸೋಂಕು ಹರಡುವಿಕೆ ತಡೆಯಲು ಸಹಕರಿಸಬೇಕು ಎಂದು ಸಿಎಂ ಬಿಎಸ್​ವೈ ಕೋರಿದ್ದಾರೆ.

    ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ!

    ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?

    ಗ್ಯಾಂಗ್​ ರೇಪ್​ ಮಾಡಿದರೆಂದು ದೂರು ನೀಡಲು ಬಂದ ಮಹಿಳೆಯನ್ನೇ ರೇಪ್​ ಮಾಡಿದ ಎಸ್​ಪಿ!

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts