More

    ನೈಟ್​ ಕರ್ಫ್ಯೂ ವಾಪಸ್​: ಬಾರ್ ಮಾಲೀಕರು, ಅಬಕಾರಿ ಇಲಾಖೆ ಫುಲ್​ ಖುಷ್​

    ಬೆಂಗಳೂರು: ಇವತ್ತಿನಿಂದ ಜಾರಿ ಆಗಬೇಕಿದ್ದ ನೈಟ್ ಕರ್ಫ್ಯೂವನ್ನು ಅನುಷ್ಠಾನಕ್ಕೆ ಬರುವ ಮೊದಲೇ ಹಿಂಪಡೆದಿದ್ದರಿಂದ ಸಾರ್ವಜನಿಕರಷ್ಟೇ ಅಲ್ಲ, ಬಾರ್ ಮಾಲೀಕರು ಹಾಗೂ ಅಬಕಾರಿ ಇಲಾಖೆಗೂ ಸಂತೋಷವಾಗಿದೆ. ರಾತ್ರಿ ಕರ್ಫ್ಯೂನಿಂದ ನೂರಾರು ಕೋಟಿ ರೂಪಾಯಿ ಆದಾಯ ನಷ್ಟವಾಗುವ ಭೀತಿಗೆ ಒಳಗಾಗಿದ್ದ ಅಬಕಾರಿ ಇಲಾಖೆಯವರು ಹಾಗೂ ಬಾರ್ ಮಾಲೀಕರು ಕೊನೆಗೂ ನಿರಾಳರಾಗಿದ್ದಾರೆ.

    ಸಾಮಾನ್ಯವಾಗಿ ಪ್ರತಿವರ್ಷ ಡಿ.24ರಿಂದ ಡಿ.31ರವರೆಗೆ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ 300 ಕೋಟಿ ರೂಪಾಯಿ ಆದಾಯ ಬರುತ್ತದೆ. ಆದರೆ, ಕರ್ಫ್ಯೂನಿಂದಾಗಿ ಈ ಆದಾಯ ಖೋತಾ ಆಗುವ ಆತಂಕವಿತ್ತು. ಆದರೆ, ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಿ ಬುಧವಾರ ಹೊರಡಿಸಿದ್ದ ಆದೇಶವನ್ನು ಸರ್ಕಾರ ಗುರುವಾರ ಸಂಜೆ ಹಿಂಪಡೆದಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಹಾಗೂ ಬಾರ್ ಮಾಲೀಕರಿಗೆ ಎದುರಾಗಿದ್ದ ಆತಂಕ ಸದ್ಯ ದೂರವಾದಂತಾಗಿದೆ.

    ಇದನ್ನೂ ಓದಿ: ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಮದ್ಯ ಕಿಕ್ ಜೋರು: ನೈಟ್​ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಪ್ರಯುಕ್ತ ಬಾರ್ ಹಾಗೂ ಪಬ್‌ಗಳಲ್ಲಿ ಮದ್ಯ ಕಿಕ್ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ. ಕಳೆದ ವರ್ಷ ಬಿಯರ್ ಹಾಗೂ ಮದ್ಯದಿಂದ 300 ಕೋಟಿ ರೂ. ಆದಾಯ ಬಂದಿತ್ತು. 18 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿತ್ತು. ಈ ಬಾರಿ ಮದ್ಯ ಮಾರಾಟದಿಂದ ಕಳೆದ ಸಲಕ್ಕಿಂತ ಮತ್ತಷ್ಟು ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ಚಿರ ಯೌವನ ಪಡ್ಕೊಳ್ಳೋದಕ್ಕೆ ನೆರವಾಗುವ ಔಷಧ ಪತ್ತೆಯಾಗಿದೆಯಂತೆ ಹೌದಾ!?

    3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts