More

    ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಿ

    ನಿಡಗುಂದಿ: ಕುರುಬ ಸಮುದಾಯ ಬುಡಕಟ್ಟು ಹಾಗೂ ಅಲೆಮಾರಿ ಹಿಂದುಳಿದ ಸಮುದಾಯವಾಗಿದೆ. ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ರಾಜ್ಯ ಎಸ್‌ಟಿ ಹೋರಾಟ ಸಮಿತಿ ಕಾರ್ಯದರ್ಶಿ ಮೋಹನ ಮೇಟಿ ಹೇಳಿದರು.
    ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ನಿಡಗುಂದಿ ತಾಲೂಕು ಸಮುದಾಯ ಬಾಂಧವರು ಪಾದಯಾತ್ರೆಗೆ ರೊಟ್ಟಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    1868ರಲ್ಲಿ ಸಮುದಾಯ ಎಸ್‌ಟಿಯಲ್ಲಿ ಸೇರ್ಪಡೆಯಾಗಿತ್ತು. ಸದ್ಯ ರಾಜ್ಯದ ಬೀದರ್ ಸೇರಿ ಕೆಲ ಜಿಲ್ಲೆಯಲ್ಲಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಲಾಗಿದೆ. ಆದರೆ, ಆ ಮೀಸಲಾತಿ ಅಖಂಡ ರಾಜ್ಯವ್ಯಾಪಿ ವಿಸ್ತರಿಸುವ ಉದ್ದೇಶ ಹೊಂದಿ ಕಾಗಿನೆಲೆಯಿಂದ ನಿರಂಜನಾನಂದ ಶ್ರೀಗಳ ನೇತೃತ್ವದಲ್ಲಿ ರಾಜಧಾನಿಯವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ನಿತ್ಯ 20 ಕಿ.ಮೀ. ಪಾದಯಾತ್ರೆ ನಡೆಸಿ ೆ.7ರಂದು ರಾಜಧಾನಿಯಲ್ಲಿ 15 ರಿಂದ 20 ಲಕ್ಷ ಜನರನ್ನು ಸೇರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
    ರೊಟ್ಟಿ ಸಂಗ್ರಹ ಜಿಲ್ಲೆಯಲ್ಲಿ ಮಾತ್ರ ನಡೆದಿದೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
    ಹುಲಿಜಂತಿ ಮಠದ ಮಹಾಲಿಂಗರಾಯ ಮಹಾರಾಜರು ಮಾತನಾಡಿ, ಕುರುಬ ಸಮುದಾಯ ಅತ್ಯಂತ ಮುಗ್ಧ ಹಾಗೂ ನಂಬಿಕೆಯುಳ್ಳ ಸಮುದಾಯ. ಆದರೆ, ಇಲ್ಲಿಯವರೆಗೂ ಸಮುದಾಯ ಸ್ವಾರ್ಥವನ್ನು ಬದಿಗೊತ್ತಿ ಬದುಕುತ್ತಿದೆ. ಸಮುದಾಯದ ಶಕ್ತಿ ಅಪಾರವಾಗಿದ್ದರೂ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ದೊರಕದ ಕಾರಣ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುರ್ಬಲವಾಗುತ್ತಿದೆ. ಶಿಕ್ಷಣ, ಆರ್ಥಿಕವಾಗಿ ಸಬಲವಾಗುವಲ್ಲಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಪಡೆಯುವುದು ಅನಿವಾರ್ಯವಾಗಿದೆ. ನಮ್ಮ ಹೋರಾಟ ನ್ಯಾಯಸಮ್ಮತವಾಗಿದೆ ಎಂದರು. ನಿಡಗುಂದಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮುತ್ತಣ್ಣ ಮುತ್ತಣ್ಣವರ, ಮೃತ್ಯುಂಜಯ ಪೂಜಾರಿ, ಪರಶುರಾಮ ಕಾರಿ, ಹನುಮಂತ ಸುಣಗದ, ಮುದ್ದಪ್ಪ ಯಳ್ಳಿಗುತ್ತಿ, ಬಸವರಾಜ ಕುರಿ, ಮಲ್ಲಿಕಾರ್ಜುನ ಅಸ್ಕಿ, ಶಂಕರ ಜಲ್ಲಿ, ರವಿ ಕಾಳಗಿ, ಮಹಾಂತೇಶ ಬೆಳಗಲ್ಲ, ಬೀರಪ್ಪ ಪೂಜಾರಿ, ಅರ್ಜುನ ದಳವಾಯಿ, ರಮೇಶ ಕಮದಾಳ, ವಿರೂಪಾಕ್ಷಿ ಕಾಮನಕೇರಿ, ಭೀಮಣ್ಣ ಹೆಬ್ಬಾಳ, ಬಾಲಚಂದ್ರ ಮಾಳಗೊಂಡ, ಮಲ್ಲು ಒಡಿಗೇರಿ, ರವಿ ವಡವಡಗಿ ಮತ್ತಿತರರಿದ್ದರು.

    ನಿಡಗುಂದಿ ತಾಲೂಕಿನಾದ್ಯಂತ ಪಾದಯಾತ್ರೆಗೆ 10 ಸಾವಿರಕ್ಕೂ ಹೆಚ್ಚು ರೊಟ್ಟಿ ಸಂಗ್ರಹಿಸಲಾಗಿದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಭಾಗವಹಿಸಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.
    ಮುತ್ತಣ್ಣ ಮುತ್ತಣ್ಣವರ, ನಿಡಗುಂದಿ ತಾಲೂಕು ಕುರುಬರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts