More

    ಮಾಸಾಶನ ವಿತರಣೆಗೆ ವೃದ್ಧರ ಮನವಿ

    ನಿಡಗುಂದಿ: ಸಾಹೇಬ್ರ, ನಮ್ಮ ಪಗಾರ್ ಸಿಗುವಂಗ ಮಾಡ್ರಿ, ಹೊಲ ಇಲ್ರಿ, ಸಣ್ಣ ತಗಡ ಶೆಡ್ ಹಾಕೊಂಡ ಅದೀವ್ರಿ, ಪಗಾರ ಮಾಡಾಕ ಅಡ್ಯಾಡಿ ಸಾಕಾಗೇತ್ರಿ ಎಪ್ಪಾ ನಮಗ ಪಗಾರ್ ಮಾಡಸ್ರಿ ನಿಮ್ ಕಾಲ ಮುಗಿತೀವಿ…
    ಹೌದು. ಇದು ತಾಲೂಕಿನ ಹೊಳೆ ಮಸೂತಿ ಗ್ರಾಮಕ್ಕೆ ಸಿಸಿ ರಸ್ತೆ ಸೇರಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಮುಂದೆ ವೃದ್ಧರು ಸಂಧ್ಯಾ ಸುರಕ್ಷಾ, ಅಂಗವಿಕಲರು ವಿವಿಧ ಮಾಸಾಶನ ನೀಡುವ ಜತೆಗೆ ಬಂದ ಮಾಸಾಶನ ಕೂಡ ಅಲ್ಲಿನ ಪೋಸ್ಟ್ ಮ್ಯಾನ್ ಸರಿಯಾಗಿ ವಿತರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
    ಎರಡು ತಿಂಗಳ ಹಿಂದೆ ನಿಡಗುಂದಿ ತಾಲೂಕಿನ ಹೊಳೆಮಸೂತಿ, ವಡವಡಗಿ, ಬೂದಿಹಾಳ, ಯಲಗೂರ ಸೇರಿ ವಿವಿಧ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸಿದ ಶಾಸಕ ಎ.ಎಸ್. ಪಾಟೀಲ, ಅಧಿಕಾರಿಗಳಿಗೆ ಲಾನುಭವಿಗಳ ವಿವಿಧ ಮಾಸಾಶನಕ್ಕೆ ನೈಜ ಲಾನುಭವಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಶೀಘ್ರ ಮಂಜೂರಾತಿ ಮಾಡುವಂತೆ ಸೂಚಿಸಿದ್ದರು. ಆದರೆ, ಪಟ್ಟಿ ಸಿದ್ಧಪಡಿಸಿ ಎರಡು ತಿಂಗಳಾದರೂ ನಿಡಗುಂದಿ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಮಂಜೂರಾತಿ ಮಾಡದ ಕಾರಣ ಗರಂ ಆದ ಶಾಸಕರು, ಶಿವಲಿಂಗಪ್ರಭು ವಾಲಿ ಅವರಿಗೆ ನೋಟೀಸ್ ನೀಡುವಂತೆ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಡಗುಂದಿ ತಹಸೀಲ್ದಾರ್ ವಾಲಿ, ಸರಿಯಾಗಿ ಸ್ಪಂದಿಸಿ ಜನರ ಕಾರ್ಯಗಳನ್ನು ಮಾಡುತ್ತಿಲ್ಲ. ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕಾದವರು ಜನರನ್ನು ಅಲೆದಾಡುಸುತ್ತಿರುವುದು ಸರಿಯಾದ ಕ್ರಮವಲ್ಲ. ಕಳೆದ ಸಾಲಿನಲ್ಲಿ ನೆರೆಯ ಸಮಯದಲ್ಲಿ ಬೆಳೆ ಹಾನಿ, ಮನೆ ಹಾನಿಯಾದ ಕೆಲವರಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ. ಈ ಕುರಿತು ಶೀಘ್ರ ತಹಸೀಲಾರ್‌ರಿಗೆ ಪರಿಹಾರ ವಿತರಿಸುವಂತೆ ತಿಳಿಸಿದರೂ ಅವರು ಪರಿಹಾರ ವಿತರಣೆಗೆ ಮುಂದಾಗುತ್ತಿಲ್ಲ. ಈಗಾಗಲೇ ಅವರಿಗೆ ನೋಟಿಸ್ ನೀಡುವಂತೆ ಎಸಿ ಅವರಿಗೆ ತಿಳಿಸಲಾಗಿದ್ದು, ಸರಿಪಡಿಸದಿದ್ದಲ್ಲಿ ಮುಂದೆ ಕಠಿಣ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
    ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜೂಲಗುಡ್ಡ, ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಸಿಪಿಐ ಆನಂದ ವಾಘಮೋಡೆ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಮುತ್ತಣ್ಣ ಹುಗ್ಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts