More

    ಕಾಂಗ್ರೆಸ್ ಕಚೇರಿ ಕಟ್ಟಡ, ಶಾರಿಖ್ ಸಂಬಂಧಿಗಳ ಮನೆ ಮೇಲೆ ಎನ್​ಐಎ ದಾಳಿ-ಶೋಧ: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿತ ತನಿಖೆ

    ತೀರ್ಥಹಳ್ಳಿ: ಭಾರಿ ಸಂಚಲನ ಮೂಡಿಸಿರುವ ಕುಕ್ಕರ್ ಬಾಂಬ್ ಸ್ಫೋಟ ಕೃತ್ಯದ ಆರೋಪಿ ಶಾರಿಖ್ ಸಂಬಂಧಿಕರ ತೀರ್ಥಹಳ್ಳಿಯ ಮನೆಗಳ ಮೇಲೆ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳ ತಂಡ ಬುಧವಾರ ನಸುಕಿನಲ್ಲಿ ದಾಳಿ ನಡೆಸಿದೆ.

    ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯ ಮೀನು ಮಾರ್ಕೆಟ್ ಬಳಿ ಇರುವ ಮನೆಗಳಲ್ಲಿ ಅಧಿಕಾರಿಗಳ ತಂಡ ಅಂದಾಜು 10 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿತು. ಐದು ಕಾರುಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತಿನೊಂದಿಗೆ ನಸುಕಿನಲ್ಲಿ ಬಂದಿಳಿದ ಮಹಿಳೆಯರನ್ನೂ ಒಳಗೊಂಡ 15 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿತು.

    ಶಾರಿಖ್ ತಂದೆಯ ಹೆಸರಿನಲ್ಲಿದ್ದು, ಈಗಾಗಲೇ ಬೇರೆಯವರಿಗೆ ಮಾರಾಟವಾಗಿರುವ ಕಾಂಗ್ರೆಸ್ ಕಚೇರಿ ಇರುವ ಕಟ್ಟಡದ ಮೇಲೂ ದಾಳಿ ನಡೆಸಿದರು. ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಈ ಆರೋಪಿಗಳು ಮತ್ತು ಅವರ ಕುಟುಂಬದ ನಡುವಿನ ಹಣಕಾಸು ವ್ಯವಹಾರವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

    ಈ ಮೊದಲು ಎರಡು ಮೂರು ಬಾರಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ ಆರೋಪವಿರುವ ಮತೀನ್ ಹಾಗೂ ಮಾಜ್ ಅವರ ಮನೆಗಳಿಗೆ ರಾಷ್ಟ್ರೀಯ ತನಿಖಾದಳ ಬಂದಿದ್ದಕ್ಕಿಂತ ಭಿನ್ನವಾಗಿ ಈ ಬಾರಿ ಬಿಗಿ ಪೋಲಿಸ್ ಬಂದೋಬಸ್ತಿನ ಪಹರೆಯಲ್ಲಿ ಶಾರಿಖ್ ಮನೆಗಳ ತಪಾಸಣೆ ನಡೆದಿದೆ. ಈ ತಂಡದೊಂದಿಗೆ ಬಂದಿದ್ದ ಶಸ್ತ್ರಸಜ್ಜಿತ ಪೊಲೀಸರು ಸಮೀಪದ ಮನೆಗಳಿಗೆ ತೆರಳಿ ಸುದ್ಧಿ ಮಾಧ್ಯಮಗಳಿಗೆ ಮಾಹಿತಿ ನೀಡಬಾರದೆಂಬ ಎಚ್ಚರಿಕೆ ಕೊಟ್ಟಿರುವುದು ಅಲ್ಲಿನ ನಿವಾಸಿಗಳಲ್ಲಿ ಭೀತಿಯ ವಾತಾವರಣ ಕಂಡು ಬಂತು.

    ನಮ್ಮ ಮನೆ ಮತ್ತು ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಸುದ್ದಿ ಬಿತ್ತರವಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಇದೊಂದು ಕಪೋಲಕಲ್ಪಿತ ವರದಿ. ಈ ದಾಳಿಗೂ ಕಾಂಗ್ರೆಸ್ ಪಕ್ಷಕ್ಕೂ ಅಥವಾ ನನಗೂ ಸಂಬಂಧವಿಲ್ಲ. ಹಾಸಿಂ ಎಂಬುವರಿಂದ ಕೆಲ ವರ್ಷಗಳ ಹಿಂದೆ ಈ ಕಟ್ಟಡವನ್ನು ಕಾಂಗ್ರೆಸ್ ಕಚೇರಿಗಾಗಿ ಲೀಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ; ಒಂದೇ ವಾರದಲ್ಲಿ ದಿನ ಬಿಟ್ಟು ದಿನ 3 ಮಕ್ಕಳು ಹೃದಯಾಘಾತದಿಂದ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts