More

    ಮೋದಿ ಬಂದ ಮೇಲೆ ಭಯೋತ್ಪಾದಕರ ಸಂಖ್ಯೆ ಇಳಿಮುಖ ಆಗಿದೆ ಎಂದ NIA ಮುಖ್ಯಸ್ಥ!

    ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿದೆ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುಖ್ಯಸ್ಥ ದಿನಕರ್ ಗುಪ್ತಾ ಶುಕ್ರವಾರ ಹೇಳಿದ್ದಾರೆ.

    ಭಯೋತ್ಪಾದನೆಗೆ ಪ್ರಧಾನಿಯ ಶೂನ್ಯ ಸಹಿಷ್ಣುತೆಯ ನೀತಿ, ಇಡೀ ಸರ್ಕಾರದ ವಿಧಾನ ಭದ್ರತಾ ಸನ್ನಿವೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ’ ಎಂದು ಎನ್‌ಐಎ ಮುಖ್ಯಸ್ಥ ನೋ ಮನಿ ಫಾರ್​ ಟೆರರ್​ನ 3ನೇ ಉದ್ದೇಶಿಸಿ ಹೇಳಿದರು.

    ಸರ್ಕಾರದ ನೀತಿಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಒದಗಿಸಲಾದ ಹಣಕಾಸು ಮತ್ತು ಇತರ ರೀತಿಯ ಬೆಂಬಲವನ್ನು ಕಡಿತಗೊಳಿಸಿದೆ ಎಂದು ಅವರು ಒತ್ತಿ ಹೇಳಿದರು.

    ‘ಕಳೆದ ಎಂಟು ವರ್ಷಗಳಲ್ಲಿ ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಭಾರತದಲ್ಲಿ ಭಯೋತ್ಪಾದನೆಗೆ ತಲುಪುವ ಒಟ್ಟು ಹಣದಲ್ಲಿ ದೊಡ್ಡ ಇಳಿಕೆ ಕಂಡುಬಂದಿದೆ” ಎಂದು ದಿನಕರ್​ ಗುಪ್ತಾ ಹೇಳಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಸಂಘಟಿತ ಅಪರಾಧಗಳ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ನೆರೆದಿದ್ದವರಿಗೆ ಮನದಟ್ಟು ಮಾಡಿಸಿದರು. ‘ಭಯೋತ್ಪಾದನೆಗೆ ತಲುಪುವ ಹಣದಲ್ಲಿ ಸಂಘಟಿತ ಅಪರಾಧಗಳಿಂದ ದೊಡ್ಡ ಪಾಲು ತಲುಪುತ್ತದೆ’ ಎಂದು ಈ ಸಂದರ್ಭ ಮೋದಿ ಹೇಳಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts