More

    ಮಾವೋವಾದಿ ಚಟುವಟಿಕೆಗೆ ನೆರವು ನೀಡುತ್ತಿದ್ದ ತೆಲಂಗಾಣ ಪ್ರಜಾ ಫ್ರಂಟ್ ಉಪಾಧ್ಯಕ್ಷ ಎನ್​ಐಎ ಬಲೆಗೆ

    ನವದೆಹಲಿ: ಮಾವೋವಾದಿ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ತೆಲಂಗಾಣ ಪ್ರಜಾ ಫ್ರಂಟ್​ನ ಉಪಾಧ್ಯಕ್ಷ ನಲಮಾಸ ಕೃಷ್ಣ(41) ಎಂಬಾತನನ್ನು ನ್ಯಾಷನಲ್ ಇನ್​ವೆಸ್ಟಿಗೇಷನ್​ ಏಜೆನ್ಸಿ(ಎನ್​ಐಎ) ಭಾನುವಾರ ಬಂಧಿಸಿದೆ. ತಥಾಕಥಿತ ಜನಪರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ಮತ್ತು ಅಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಕೃಷ್ಣ, ನಕ್ಸಲ್ ಚಟುವಟಿಕೆಗೆ ಪೂರಕವಾದ ನೆರವು ನೀಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆ ಹಾಕಿದ್ದ ಎನ್​​ಐಎ ತಂಡ, ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿ ಆತನನ್ನು ಬಂಧಿಸಿತ್ತು.

    ಹೈದರಾಬಾದ್​ ನಿವಾಸಿ ಕೃಷ್ಣ, ತೆಲಂಗಾಣ ಪ್ರಜಾ ಫ್ರಂಟ್​ನ ಉಪಾಧ್ಯಕ್ಷನಾಗಿದ್ದುಕೊಂಡು ಸಿಪಿಐ ಮಾವೋವಾದಿ ಚಟುವಟಿಕೆಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಕಳೆದ ವರ್ಷ ಅಕ್ಟೋಬರ್​ 8ರಂದೇ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ತೆಲಂಗಾಣ ವಿದ್ಯಾರ್ಥಿ ವೇದಿಕಾ(ಟಿವಿವಿ) ಸಂಘಟನೆಯ ಅಧ್ಯಕ್ಷ ಮಡ್ಡಿಲೇಟಿ ಅಲಿಯಾಸ್ ಬಂಢಾರಿ ಮಡ್ಡಿಲೇಟಿ ನಿವಾಸದಿಂದ ಸಿಕ್ಕ ದಾಖಲೆಗಳ ಪ್ರಕಾರ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಇದರ ವಿಚಾರಣೆಯನ್ನು ಎನ್​ಐಎ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

    ಇದನ್ನೂ ಓದಿ: ನಕ್ಸಲ್ ನಾಯಕಿ ಸೆರೆ: ಕೊಯಮತ್ತೂರಿನ ಆನೈಕಟ್ಟೆ ಬಳಿ ನಕ್ಸಲ್ ನಿಗ್ರಹಪಡೆ ಕಾರ್ಯಾಚರಣೆ

    ಎನ್​ಐಎ ಮಾಹಿತಿ ಪ್ರಕಾರ, ಕೃಷ್ಣ ನಿಯತವಾಗಿ ಛತ್ತೀಸ್​ಗಢಕ್ಕೆ ಭೇಟಿ ನೀಡಿದ್ದು ಸಿಪಿಐ ಮಾವೋವಾದಿ ನಾಯಕರ ಜತೆಗೆ ಸಂಪರ್ಕದಲ್ಲಿದ್ದ. ಅವರ ನಿರ್ದೇಶನಗಳನ್ನು ಮಡ್ಡಿಲೇಟಿಗೆ ನೀಡುತ್ತಿದ್ದ. ಟಿಪಿಎಫ್​, ಟಿವಿವಿ ಮತ್ತು ಇತರೆ ಕೆಲವು ಸಂಘಟನೆಗಳ ನಾಯಕರಿಗೆ ಮಾವೋವಾದಿ ನಾಯಕರ ಸಂದೇಶ ತಲುಪಿಸುವ ಕೆಲಸವನ್ನು ಕೃಷ್ಣ ಮಾಡುತ್ತಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇವರು ದುರುಪಯೋಗ ಮಾಡುತ್ತಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದ್ದು, ಈ ಕುರಿತ ವಿಚಾರಣೆ, ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್)

    ಪಾವಗಡ ತಾಲೂಕು ನಕ್ಸಲ್ ಹತ್ಯಾಕಾಂಡ ಪ್ರಕರಣ| ತುಮಕೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಗದ್ದರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts