More

    ಕಾಂಗ್ರೆಸ್​ ಶಾಸಕರ ಮುಂದಿನ ನಿಲ್ದಾಣ ಪಾಕಿಸ್ತಾನ….!

    ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಭಾರಿ ಕಸರತ್ತು ನಡೆಸಿದೆ. ಈವರೆಗೆ ಜೈಪುರ ಹೊರವಲಯದಲ್ಲಿದ್ದ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ 100ಕ್ಕೂ ಅಧಿಕ ಶಾಸಕರನ್ನು ಈಗ ಬೇರೆಡೆಗೆ ಸ್ಥಳಾಂತರಿಸಿದೆ. ರಾಜಧಾನಿ ಜೈಪುರದಿಂದ 550 ಕಿ.ಮೀ. ದೂರದಲ್ಲಿರುವ ಜೈಸಲ್ಮೇರ್​ನ ಐಷಾರಾಮಿ ಹೋಟೆಲ್​ ಹಾಗೂ ರೆಸಾರ್ಟ್​ನಲ್ಲಿ ಇರಿಸಲಾಗಿದೆ.

    ಮಧ್ಯಾಹ್ನ ಮೂರು ಹಾಗೂ ಸಂಜೆ 2 ಸೇರಿ ಐದು ವಿಶೇಷ ವಿಮಾನಗಳಲ್ಲಿ ಶಾಸಕರನ್ನು ಇಲ್ಲಿಗೆ ಕರೆತರಲಾಗಿದೆ. ಸಂಜೆ ವಿಮಾನದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ಕೂಡ ಪ್ರಯಾಣಿಸಿದ್ದರು. ಈ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಮಿತ್​ ಷಾ ವಿರುದ್ಧ ಹರಿಹಾಯ್ದರು. ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವುದೇ ಬಿಜೆಪಿ ಕೆಲಸವಾಗಿದ್ದರೆ, ಪ್ರಜಾಪ್ರಭುತ್ವಕ್ಕೆ ಎಲ್ಲಿ ಅರ್ಥವಿದೆ. ಚುನಾವಣೆ ಏಕೆ ಬೇಕು ಎಂದು ಪ್ರಶ್ನಿಸಿದರು.

    ಇದನ್ನೂ ಓದಿ; ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್​ಲಿಮಿಟೆಡ್​ ಆಫರ್​; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ 

    ವಿಧಾನಸಭಾ ಅಧಿವೇಶನ ಆರಂಭವಾಗಲಿರುವ ಆಗಸ್ಟ್​ 14ರ ವರೆಗೆ ಶಾಸಕರೂ ಇಲ್ಲಿಯೇ ಇರಲಿದ್ದಾರೆ. ಸೂರ್ಯಗಢ್​ ಹೋಟೆಲ್​ನ​ ಎಲ್ಲ 70 ರೂಮ್​ಗಳನ್ನು ಶಾಸಕರಿಗಾಗಿ ಬುಕ್​ ಮಾಡಲಾಗಿದೆ. ಜೈಸಲ್ಮೇರ್​ನಿಂದ 20 ಕಿ.ಮೀ ದೂರದಲ್ಲಿರುವ ರೆಸಾರ್ಟ್​ಗೆ ಎಸ್​ಪಿ ಖುದ್ದಾಗಿ ಭದ್ರತಾ ಹೊಣೆ ಹೊತ್ತು ಎಲ್ಲ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ದಿದ್ದಾರೆ.

    ಜೈಸಲ್ಮೇರ್​ ರೆಸಾಟ್​ರ್ನಲ್ಲಿ ಕಾಂಗ್ರೆಸ್​ ಶಾಸಕರನ್ನು ಇರಿಸಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್​ ಶಾಸಕರ ಮುಂದಿನ ನಿಲ್ದಾಣ ಪಾಕಿಸ್ತಾನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾ ಲೇವಡಿ ಮಾಡಿದ್ದಾರೆ. ಜೈಸಲ್ಮೇರ್​ನಿಂದ ಪಾಕಿಸ್ತಾನ ಗಡಿ ಹತ್ತಿರದಲ್ಲಿದೆ.

    ಇದನ್ನೂ ಓದಿ; ಸಚಿನ್​ ಪೈಲಟ್​ ತಲೆದಂಡಕ್ಕೆ ಕಾರಣವಾದ ಮೂರು ಬೇಡಿಕೆಗಳು 

    ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುವ ಸಿಎಂ ವಿಧಾನಸಭೆ ಕಾರ್ಯಾಯದಲ್ಲಿದ್ದು, ಸರ್ಕಾರ ನಡೆಸಬೇಕೆ ಹೊರತು, ರೆಸಾರ್ಟ್​ನಿಂದಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್​ ತನ್ನಿಂದ ತಾನೇ ನಾಶವಾಗಲಿದೆ ಎಂದು ಸತೀಶ್​ ಹೇಳಿದ್ದಾರೆ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts