More

    ಟಿ20 ವಿಶ್ವಕಪ್‌ನಲ್ಲಿ ಕ್ರೀಡಾಸ್ಫೂರ್ತಿ ಮೆರೆದಿದ್ದ ಡೆರಿಲ್ ಮಿಚೆಲ್‌ಗೆ ಐಸಿಸಿ ಪ್ರಶಸ್ತಿ

    ದುಬೈ: ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ 2021ರ ಸಾಲಿನ ಐಸಿಸಿ ಕ್ರೀಡಾಸ್ಫೂರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್‌ನ ಸೆಮಿೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವರು ತೋರಿದ ಕ್ರೀಡಾಸ್ಫೂರ್ತಿಯ ವರ್ತನೆಗಾಗಿ ಈ ಗೌರವ ಲಭಿಸಿದೆ.

    ನವೆಂಬರ್ 10ರಂದು ಅಬುಧಾಬಿಯಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ ಬ್ಯಾಟರ್ ಜೇಮ್ಸ್ ನೀಶಾಮ್ ನೇರವಾಗಿ ಬಾರಿಸಿದ ಚೆಂಡನ್ನು ಬೌಲರ್ ಆದಿಲ್ ರಶೀದ್ ತಡೆಯಲು ಯತ್ನಿಸಿದರು. ಆಗ ನಾನ್-ಸ್ಟ್ರೈಕರ್‌ನಲ್ಲಿದ್ದ ಡೆರಿಲ್ ಮಿಚೆಲ್ ಉದ್ದೇಶಪೂರ್ವಕವಲ್ಲದೆ ರಶೀದ್‌ಗೆ ಅಡ್ಡಿಯಾಗಿದ್ದರು. ಇದರಿಂದ ಚೆಂಡು ದೂರ ಹೋದಾಗ ನೀಶಾಮ್ ರನ್ ಕಸಿಯಲು ಅರ್ಧ ಪಿಚ್‌ವರೆಗೆ ಓಡಿ ಬಂದಿದ್ದರು. ಆದರೆ ಡೆರಿಲ್ ಮಿಚೆಲ್ ರನ್ ಓಡಲು ನಿರಾಕರಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದರು.

    ಡೆರಿಲ್ ಮಿಚೆಲ್ ಈ ಪ್ರಶಸ್ತಿಗೆ ಪಾತ್ರರಾದ 4ನೇ ಕಿವೀಸ್ ಕ್ರಿಕೆಟಿಗರಾಗಿದ್ದಾರೆ. ಡೇನಿಯಲ್ ವೆಟ್ಟೋರಿ, ಬ್ರೆಂಡನ್ ಮೆಕ್ಕಲಂ ಮತ್ತು ಕೇನ್ ವಿಲಿಯಮ್ಸನ್ ಹಿಂದಿನ ಮೂವರು ಸಾಧಕರು.

    ‘ಚೆಂಡು ತಡೆಯಲು ಬಂದ ಬೌಲರ್ ಹಾದಿಗೆ ಅಡ್ಡ ಬಂದಂತೆ ನನಗೆ ವೈಯಕ್ತಿಕವಾಗಿ ಅನಿಸಿತ್ತು. ಹೀಗಾಗಿ ಅಷ್ಟು ದೊಡ್ಡ ಪಂದ್ಯದಲ್ಲಿ ನಾನು ವಿವಾದಕ್ಕೆ ಸಿಲುಕಲು ಬಯಸಲಿಲ್ಲ. ಅನಂತರದಲ್ಲಿ ನಾವು ಪಂದ್ಯವನ್ನೂ ಗೆದ್ದಿದ್ದು ಖುಷಿ ನೀಡಿತ್ತು. ಅದೆಲ್ಲವೂ ಕ್ಷಿಪ್ರಗತಿಯಲ್ಲಿ ನಡೆದಿತ್ತು. ಇದೀಗ ಐಸಿಸಿ ಸ್ಪಿರಿಟ್ ಆ್ ಕ್ರಿಕೆಟ್ ಪ್ರಶಸ್ತಿ ನನಗೆ ಶ್ರೇಷ್ಠ ಗೌರವವೆನಿಸಿದೆ’ ಎಂದು ಡೆರಿಲ್ ಮಿಚೆಲ್ ಹೇಳಿದ್ದಾರೆ.

    ಕಿವೀಸ್ 167 ರನ್ ಸವಾಲು ಬೆನ್ನಟ್ಟುತ್ತಿದ್ದಾಗ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಆಗ ಕಿವೀಸ್ 4 ವಿಕೆಟ್‌ಗೆ 133 ರನ್ ಗಳಿಸಿತ್ತು. ಬಳಿಕ 11 ಎಸೆತಗಳಲ್ಲೇ 34 ರನ್ ಕಸಿದು ಕಿವೀಸ್ ಗೆದ್ದಿತ್ತು. 47 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯರಾಗಿದ್ದ ಮಿಚೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

    ಶ್ರೇಯಸ್ ಅಯ್ಯರ್‌ಗಾಗಿ ಆರ್‌ಸಿಬಿ ಸಲ್ಲಿಸಲಿರುವ ಬಿಡ್​ ಮೊತ್ತವೆಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts